ವಿರಾಟ್ ಕೊಹ್ಲಿ ನಂತರ ಆರ್ಸಿಬಿ ತಂಡಕ್ಕೆ ಖಂಡಿತಾ ಈ ನಾಲ್ಕರಲ್ಲಿ ಒಬ್ಬರು ಕ್ಯಾಪ್ಟನ್ ಎಂದ ಆಕಾಶ್ ಚೋಪ್ರಾ, ಯಾರ್ಯಾರಿದ್ದಾರೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಯಾನೆ ಆರ್ಸಿಬಿ ತಂಡದ ನಾಯಕರಾಗಿದ್ದ ವಿರಾಟ್ ಕೊಹ್ಲಿ ನಾಯನಾಗಿ ನನ್ನದು ಇದೇ ಲಾಸ್ಟ್ ಸೀಜನ್ ಎಂದು ಹೇಳಿದ್ದಾರೆ. ಆರ್ಸಿಬಿ ತಂಡದಲ್ಲಿಯೇ ಮುಂದುವರೆಯುತ್ತೇನೆ ಆದರೇ ನಾಯಕನಾಗಿ ಮುಂದುವರೆಯುವುದಿಲ್ಲ ಎಂದು ಬಹಿರಂಗವಾಗಿ ಘೋಷಿಸಿದ್ದಾರೆ. ಸದ್ಯ ಆರ್ಸಿಬಿ ತಂಡದ ಮುಂದಿನ ನಾಯಕ ಯಾರು ಎಂಬ ಪ್ರಶ್ನೆ ಜೋರಾಗಿ ಜಾಲತಾಣಗಳಲ್ಲಿ ಕೇಳಿ ಬರುತ್ತಿದೆ. ಈ ಬಗ್ಗೆ ಮಾತನಾಡಿರುವ ವೀಕ್ಷಕ ವಿವರಣೆಗಾರ ಆಕಾಶ್ ಚೋಪ್ರಾ ನಾಲ್ವರು ಆಟಗಾರರು ನಾಯಕನಾಗಲು ಸೂಕ್ತ ಎಂದು ತಿಳಿಸಿದ್ದಾರೆ. ಬನ್ನಿ ಆ ಆಟಗಾರರು ಯಾರು ಎಂದು ತಿಳಿಯೋಣ.

1.ಕೆ.ಎಲ್‌.ರಾಹುಲ್ – ಮೂಲತಃ ಆರ್ಸಿಬಿ ತಂಡದ ಆಟಗಾರನಾಗಿದ್ದ ರಾಹುಲ್ 2018 ರಲ್ಲಿ ಪಂಜಾಬ್ ಕಿಂಗ್ಸ್ ತಂಡಕ್ಕೆ ಸೇರ್ಪಡೆಗೊಂಡಿದ್ದರು. ಕಳೆದ ಎರಡು ಸೀಸನ್ ನಿಂದ ನಾಯಕರಾಗಿದ್ದಾರೆ. ಆದರೇ ಪಂಜಾಬ್ ತಂಡ ಎರಡು ಸೀಸನ್ ನಲ್ಲಿಯೂ ಸಹ ಪ್ಲೇ ಆಫ್ ಪ್ರವೇಶಿಸಲು ವಿಫಲವಾಗಿದೆ. ಹಾಗಾಗಿ ರಾಹುಲ್ ರನ್ನ ಮುಂದಿನ ಸಾರ್ವತ್ರಿಕ ಹರಾಜಿನಲ್ಲಿ ತಂಡದಿಂದ ಬಿಡುಗಡೆ ಮಾಡುವ ಸಾಧ್ಯತೆ ಹೆಚ್ಚು. ಅಂತಹ ಸಂದರ್ಭದಲ್ಲಿ ರಾಹುಲ್ ರನ್ನ ಆರ್ಸಿಬಿ ತಂಡ ಖರೀದಿಸಿ, ಅವರನ್ನ ವಿರಾಟ್ ಅನುಪಸ್ಥಿತಿಯಲ್ಲಿ ನಾಯಕನನ್ನಾಗಿ ಮಾಡುವುದು ಸೂಕ್ತ ಎಂಬುದು ಆಕಾಶ್ ಚೋಪ್ರಾ ಅಭಿಪ್ರಾಯ.

2.ಮಯಾಂಕ್ ಅಗರ್ವಾಲ್ – ಮತ್ತೊಬ್ಬ ಕನ್ನಡಿಗ ಮಯಾಂಕ್ ಕೂಡ ಮೊದಲು ಆರ್ಸಿಬಿ ತಂಡದಲ್ಲಿದ್ದರು. ನಂತರ ದೆಹಲಿ ಮತ್ತು ಪಂಜಾಬ್ ತಂಡದ ಪರ ಆಡಿದ್ದರು. ಮುಂದಿನ ಐಪಿಎಲ್ ಹರಾಜಿನಲ್ಲಿ ಇವರು ಸಹ ಪಂಜಾಬ್ ಕಿಂಗ್ಸ್ ತಂಡದಿಂದ ಬಿಡುಗಡೆಯಾಗಬಹುದು. ಹಾಗಾಗಿ ಆರ್ಸಿಬಿ ನಾಯಕನ ಗಮನವಿಟ್ಟುಕೊಂಡು ಮಯಾಂಕ್ ಅಗರ್ವಾಲ್ ರನ್ನ ಮುಂದಿನ ಸೀಸನ್ ನಲ್ಲಿ ನಾಯಕನನ್ನಾಗಿ ಮಾಡಬಹುದು.

3.ಶ್ರೇಯಸ್ ಅಯ್ಯರ್ – ಕಳೆದ ಸೀಸನ್ ನಲ್ಲಿ ದೆಹಲಿ ಕ್ಯಾಪಿಟಲ್ಸ್ ತಂಡದ ನಾಯಕನಾಗಿದ್ದ ಶ್ರೇಯಸ್ ಅಯ್ಯರ್ ಈ ಸೀಸನ್ ನಲ್ಲಿ ಆಟಗಾರನಾಗಿದ್ದಾರೆ. ಮುಂದಿನ ಸಾರ್ವತ್ರಿಕ ಹರಾಜಿನಲ್ಲಿ ಡೆಲ್ಲಿ ತಂಡ ಇವರನ್ನ ಬಿಡುಗಡೆ ಮಾಡಬಹುದು. ಹಾಗಾಗಿ ಆರ್ಸಿಬಿ ತಂಡ ಶ್ರೇಯಸ್ ಅಯ್ಯರ್ ರವರನ್ನ ಖರೀದಿಸಿ, ಅವರನ್ನ ನಾಯಕನನ್ನಾಗಿ ಮಾಡಬಹುದು.

4.ಆರ್.ಅಶ್ವಿನ್ – ಭಾರತ ತಂಡದ ಪ್ರಮುಖ ಆಫ್ ಸ್ಪಿನ್ನರ್ ಆರ್.ಅಶ್ವಿನ್ ಸದ್ಯ ದೆಹಲಿ ತಂಡದಲ್ಲಿದ್ದಾರೆ. ದೆಹಲಿ ತಂಡ ಮುಂದಿನ ವರ್ಷ ಅವರನ್ನ ಉಳಿಸಿಕೊಳ್ಳುವುದು ಅನುಮಾನ. ಹಾಗಾಗಿ ಇವರನ್ನು ಸಹ ಆರ್ಸಿಬಿ ಖರೀದಿಸಿದರೇ, ಅನುಭವಿ ಸ್ಪಿನ್ನರ್ ಆಗಿರುವ ಅಶ್ವಿನ್ , ಉತ್ತಮ ನಾಯಕತ್ವದ ಗುಣ ಹೊಂದಿದ್ದಾರೆ. ಹಾಗಾಗಿ ಇವರು ಸಹ ನಾಯಕನ ಆಯ್ಕೆಗೆ ಸೂಕ್ತವಾಗಬಹುದು ಎಂಬ ಅಭಿಪ್ರಾಯ ತಿಳಿಸಿದ್ದಾರೆ. ನಿಮ್ಮ ಪ್ರಕಾರ ಆರ್ಸಿಬಿ ತಂಡದ ಮುಂದಿನ ನಾಯಕ ಯಾರಾಗಬೇಕು ಎಂಬ ಮುಕ್ತ ಅಭಿಪ್ರಾಯವನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Comments are closed.