ಯಾವುದೇ ಸಂಜೀವಿನಿಗಿಂತ ಕಡಿಮೆ ಇಲ್ಲಈ ಅಂಟವಾಳ ಕಾಯಿ, ಕೂದಲಿಗೆ ಸೇರಿದಂತೆ ಎಷ್ಟೆಲ್ಲ ಲಾಭವಿದೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ಹಳ್ಳಿಗಳಲ್ಲಿ ಸಿಗುವ ಪ್ರತಿಯೊಂದು ನೈಸರ್ಗಿಕ ಸಂಪನ್ಮೂಲಗಳೂ ಕೂಡ ಅದರದ್ದೇ ಆದ ವಿಶೇಷ ಗುಣಗಳನ್ನು ಹೊಂದಿರುತ್ತವೆ. ’ಬಲ್ಲವರೇ ಬಲ್ಲ ಬೆಲ್ಲದ ರುಚಿಯ’ ಮಾತನ್ನು ಕೇಳಿರಬೇಕಲ್ಲವೇ? ಹಾಗೆಯೇ ಹಳ್ಳಿಯಲ್ಲಿ ಸಿಗುವ ವಸ್ತುಗಳು, ಗಿಡಗಿಂಟೆಗಳಲ್ಲಿತುವ ಔಷಧೀಯ ಗುಣಗಳು ಗೊತ್ತಿರುವವರಿಗಷ್ಟೇ ಗೊತ್ತು. ಇಂಥ ಒಂದು ಅದ್ಭುತ ಗುಣಗಳನ್ನು ಹೊಂದಿರುವ ಕಾಯಿ ಅಂಟುವಾಳದ ಕಾಯಿ. ಇದು ಹಳ್ಳಿಗಳಲ್ಲಿ ಗುಡ್ಡ ಬೆಟ್ಟಗಳಲ್ಲಿ ಯಥೇಚ್ಛವಾಗಿ ಸಿಗುವಂಥದ್ದು. ಆದರೆ ಈಗ ಈ ಕಾಯಿಯ ಬಗ್ಗೆ ಯಾರೂ ಅಷ್ಟು ಮಹತ್ವ ಕೊಡದೆ ಅದನ್ನು ಬೆಳೆಸುವುದು ಕೂಡ ಕಡಿಮೆಯಾಗಿದೆ.

ಅಂಟವಾಳ ಕಾಯಿಯ ಪ್ರಯೋಜನಗಳನ್ನು ನಾವು ನೋಡುವುದಾದರೆ ಅಂಟವಾಳದ ಕಾಯಿಯನ್ನು ಮಲೆನಾಡಿನ ಸಹಜ ಭಾಷೆಯಲ್ಲಿ ’ಅಟ್ಲಕಾಯಿ’ ಅಂತಲೂ ಕರೆಯುತ್ತಾರೆ. ಇದರ ಉಪಯೋಗಗಳನ್ನು ಕೇಳಿದರೆ ನೀವೇ ಆಶ್ಚರ್ಯಪಡುತ್ತಿರಿ. ಅಂಟವಾಳ ಕಾಯಿಯಲ್ಲಿ ವಿಟಮಿನ್ ಎ. ವಿಟಮಿನ್ ಡಿ, ವಿಟಮಿನ್ ಕೆ ಮೊದಲಾದ ಜೀವಸತ್ವಗಳಿದ್ದು ಇವು ಕೂದಲಿಗೆ ತುಂಬಾನೇ ಒಳ್ಳೆಯದು. ಅಂತವಾಳದ ಕಾಯಿಯನ್ನು ಒಡೆದು ಅದರೊಳಗಿರುವ ಸಣ್ಣ ಬೀಜವನ್ನು ತೆಗೆದು ನೀರಿನಲ್ಲಿ ಹಿಚುಕಿ ತಲೆಗೆ ಹಚ್ಚಿಕೊಂಡು ಸ್ನಾನ ಮಾಡಿದರೆ ಕೂದಲು ಉತ್ತಮವಾಗಿ ಬೆಳೇಯುವುದು ಮಾತ್ರವಲ್ಲದೇ ತಲೆಹೊಟ್ಟು ಕೂಡ ಹೋಗುತ್ತದೆ. ಅಷ್ಟೇ ಅಲ್ಲ, ತಲೆಯಲ್ಲಿ ಹೇನು ಆಗಿದ್ದರೂ ಕೂಡ ಈ ಕಾಯಿಯನ್ನು ನಿಯಮಿತವಾಗಿ ಬಳಸುತ್ತಾ ಬಂದರೆ ಅದರಲ್ಲಿರುವ ಕಹಿಯ ಅಂಶದಿಂದಾಗಿ ಹೇನು ಕೂಡ ನಿವಾರಣೆಯಾಗುತ್ತದೆ.

ಈ ಅಂಟವಾಳ ಕಾಯಿಯನ್ನು ಹಸಿಯಾಗಿಯೂ ಬಳಸಬಹುದು. ಆದರೆ ಒಣಗಿಸಿ ಇಟ್ಟು ಬಳಸಿದರೆ ಬಹಳ ಕಾಲದವರೆಗೆ ಬಳಸಬಹುದು. ಇದನ್ನು ಹೆಚ್ಚಿನ ಬೆಲೆಗೆ ಕೊಂಡುಕೊಳ್ಳಲಾಗುತ್ತದೆ. ಇನ್ನು ಅಂಟವಾಳದ ಕಾಯಿಯನ್ನು ಜಜ್ಜಿ ನೀರಿನಲ್ಲಿ ಹಾಕಿ ಅದರಲ್ಲಿ ಚಿನ್ನ ಬೆಳ್ಳಿ ಆಭರಣಗಳನ್ನು ಹಾಕಿಟ್ಟು ಸ್ವಲ್ಪ ಸಮಯದ ನಂತರ ತೊಳೆದರೆ ಆಭರಣಗಳು ಹೊಳೆಯುತ್ತವೆ. ಅಂಟವಾಳದ ಕಾಯಿ ಒಣಗಿಸಿ ಪುಡಿ ಮಾಡಿಟ್ಟುಕೊಂಡು ಅದರ ಪುಡಿಯನ್ನು ಗಾಯಗಳಿಗೂ ತಕ್ಷಣ ರಕ್ತ ಬರುವುದನ್ನು ನಿಲ್ಲಿಸಬಹುದು. ಮಳೆಗಾಲದಲ್ಲಿ ಹಳ್ಳಿಗಳಲ್ಲಿ ಅಂಬುಳ (ಜಿಗಣೆ) ಎಂಬ ಹುಳು ಕಡಿಯದಂತೆ ಈ ಪುಡಿಯನ್ನು ಮೈ ಕೈಗೆ ಲೇಪಿಸಿಕೊಂಡು ಹೋಗುತ್ತಾರೆ. ಹೀಗ್ ನೂರಾರು ಗುಣಗಳನ್ನು ಹೊಂದಿರುವ ಅಂಟವಾಳದ ಕಾಯಿ ಹಳ್ಳಿಗಳಲ್ಲಿ ಸಹಜವಾಗಿಯೇ ಸಿಗುತ್ತವೆ. ಅದನ್ನು ಒಣಗಿಸಿ ಸಂಗ್ರಹಿಸಿಟ್ಟುಕೊಂಡಿರುತ್ತಾರೆ. ನೀವು ಪೇಟೆಯಲ್ಲಿದ್ದರೆ, ಅಂತವಾಳವನ್ನು ತಂದುಕೊಂಡು ನಿಮ್ಮ ನಿತ್ಯ ಬಳಕೆಗೆ ಬಳಸಬಹುದು. ಯಾವುದೇ ಅಡ್ಡ ಪರಿಣಾಮಗಳಿಲ್ಲದ ಈ ಕಾಯಿಯನ್ನು ನೀವೇ ಸ್ವತಃ ಬಳಸಿ ಎಷ್ಟು ಪ್ರಯೋಜನಕಾರಿ ಎಂಬುದನ್ನು ಗಮನಿಸಿ.

Comments are closed.