News from ಕನ್ನಡಿಗರು

ಪುನೀತ್ ನಮನ ಕಾರ್ಯಕ್ರಮದಲ್ಲಿ ಶಿವಣ್ಣ ಮಾಡಿದ ಅದೊಂದು ಕೆಲಸ ಎಲ್ಲರ ಕಣ್ಣಲ್ಲಿ ಮತ್ತೊಮ್ಮೆ ನೀರು ತರಿಸಿತ್ತು, ಏನು ಮಾಡಿದ್ದಾರೆ ಗೊತ್ತಾ???

114

ನಮಸ್ಕಾರ ಸ್ನೇಹಿತರೇ ಪವರ್ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡು ಈಗಾಗಲೇ 3 ವಾರಗಳು ಕೂಡ ಕಳೆದಿವೆ. ಇಂದಿಗೂ ಕೂಡ ಅವರನ್ನು ನಾವು ಆಗಲಿದ್ದೇವೆ ಎಂಬ ಕಹಿಸತ್ಯವನ್ನು ಅರಗಿಸಿಕೊಳ್ಳಲು ಸಾಧ್ಯವಾಗದೆ ಉಸಿರುಕಟ್ಟಿದ ಸ್ಥಿತಿಯಲ್ಲಿದ್ದೇವೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ 11ನೇ ಹಾಗೂ 12ನೇ ದಿನಗಳ ಕಾರ್ಯಕ್ರಮಗಳಿಗೆ ಸಾವಿರಾರು ಅಭಿಮಾನಿಗಳು ಬಂದು ಅಪ್ಪು ಅವರ ಆತ್ಮಕ್ಕೆ ಶಾಂತಿಯನ್ನು ಕೋರಿರುವುದು ನಿಮಗೆಲ್ಲ ಗೊತ್ತಿದೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಪುನೀತ್ ನಮನ ಎನ್ನುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಕನ್ನಡ ಹಾಗೂ ದಕ್ಷಿಣ ಭಾರತ ಚಿತ್ರರಂಗದ ಹಲವಾರು ಗಣ್ಯರು ಸೇರಿದಂತೆ ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳು ಸೇರಿದಂತೆ ಹಲವಾರು ರಾಜಕೀಯ ಗಣ್ಯರು ಬಂದಿದ್ದರು. ಈ ಸಂದರ್ಭದಲ್ಲಿ ರಾಘಣ್ಣ ಹಾಗೂ ಶಿವಣ್ಣ ಸೇರಿದಂತೆ ಎಲ್ಲರೂ ಕೂಡ ಅಪ್ಪು ಅವರ ಕುರಿತಂತೆ ಅಭಿಪ್ರಾಯಗಳನ್ನು ಕಣ್ಣೀರು ಹಾಕುವ ಮೂಲಕ ಭಾವನಾತ್ಮಕವಾಗಿ ಹಂಚಿಕೊಂಡಿದ್ದರು.

ಈ ಸಂದರ್ಭದಲ್ಲಿ ಶಿವಣ್ಣನವರು ಅಪ್ಪು ಅವರ ನೆಚ್ಚಿನ ಹಾಡೊಂದನ್ನು ಹಾಡಿ ಕಣ್ಣೀರು ಹಾಕಿದ್ದರು. ರಿಷಿ ಕಪೂರ್​ ಅಭಿನಯಿಸಿದ ಬಾಬಿ ಚಿತ್ರದ ಮೇ ಶಾಯರ್ ತೋ ನಹಿನ್ ಹಾಡನ್ನು ಹಾಡಿ ಅಪ್ಪು ಅವರಿಗೆ ಗಾನ ನಮನವನ್ನು ಸಲ್ಲಿಸಿದ್ದರು ಅವರ ನೆಚ್ಚಿನ ಅಣ್ಣ ಶಿವಣ್ಣ. ಇನ್ನು ಅಪ್ಪು ಅವರು ಇದೇ ಹಾಡನ್ನು ಎಲ್ಲಾ ಕಡೆಯೂ ಕೂಡ ಕೇಳುತ್ತಿದ್ದರಂತೆ ಹಾಗೂ ಹಾಡುತ್ತಿದ್ದರಂತೆ. ಇನ್ನು ಅಪ್ಪು ಅವರು ಈ ಹಾಡನ್ನು ಹಾಡುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಸಾಕಷ್ಟು ವೈರಲ್ ಆಗಿದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಯನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Leave A Reply

Your email address will not be published.