ಸ್ವಪಕ್ಷೀಯರಿಗೆ ಹಾಗೂ ವಿಪಕ್ಷದವರಿಗೆ ಒಮ್ಮೆಲೆ ಶಾಕ್ ನೀಡಿದ ಟ್ರಂಪ್ ! ಅಮೆರಿಕ ರಾಜಕೀಯ ತಲ್ಲಣ

ನಮಸ್ಕಾರ ಸ್ನೇಹಿತರೇ ಚುನಾವಣೆಯಲ್ಲಿ ಅ’ಕ್ರಮ ನಡೆದಿದೆ ಎಂದು ಡೊನಾಲ್ಡ್ ಟ್ರಂಪ್ ರವರು ಇಷ್ಟು ದಿವಸ ಅಧಿಕಾರಕ್ಕೆ ರಾಜೀನಾಮೆ ನೀಡದೇ ಸಾಧ್ಯವಾದಷ್ಟು ಅಧಿಕಾರ ಉಳಿಸಿಕೊಳ್ಳುವ ಪ್ರಯತ್ನ ಮಾಡಿದರು. ಆದರೂ ಕೂಡ ಕೊನೆಯದಾಗಿ ಅಧಿಕಾರದಿಂದ ಕೆಳಗಿಳಿಯದೆ ಬೇರೆ ಆಯ್ಕೆ ಇಲ್ಲದಿದ್ದಾಗ ಇದೀಗ ಅಧಿಕೃತವಾಗಿ ಡೊನಾಲ್ಡ್ ಟ್ರಂಪ್ ರವರು ವೈಟ್ಹೌಸ್ ನಿಂದ ದೂರ ಸರಿದಿದ್ದಾರೆ. ಡೊನಾಲ್ಡ್ ಟ್ರಂಪ್ ರವರು ರಾಜೀನಾಮೆ ನೀಡದೆ ಅಧ್ಯಕ್ಷ ಸ್ಥಾನವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದಾಗ ಸಾಮಾನ್ಯವಾಗಿ ವಿಪಕ್ಷಗಳಿಂದ ಟೀಕೆಗಳ ಬಾಣಗಳು ಸುರಿಯಿತು

ಚುನಾವಣೆಯಲ್ಲಿ ಗೆದ್ದು ಬೀಗಿರುವ ಜೋನ್ ಬಿಡೆನ್ ರವರು ಹಲವಾರು ಬಾರಿ ಡೊನಾಲ್ಡ್ ಟ್ರಂಪ್ ಅವರ ವಿರುದ್ಧ ಟೀಕೆಗಳ ಬಾಣಗಳನ್ನು ಸುರಿಸಿದರು. ಡೊನಾಲ್ಡ್ ಟ್ರಂಪ್ ರವರ ಈ ನಡೆಗೆ ಸ್ವಪಕ್ಷೀಯರ ಕೂಡ ಅಸಮಾಧಾನ ವ್ಯಕ್ತಪಡಿಸಿ ಡೊನಾಲ್ಡ್ ಟ್ರಂಪ್ ರವರು ಈ ಕೂಡಲೇ ಕುರ್ಚಿಯಿಂದ ಕೆಳಗಿಳಿಯಬೇಕು ಎಂಬ ವಾದ ಮಂಡಿಸಿದರು. ಕೊನೆಗೆ ಬೇರೆ ವಿಧಿ ಇಲ್ಲದೆ ಇದೀಗ ಅಧಿಕಾರದಿಂದ ಕೆಳಗಿಳಿದಿರುವ ಟ್ರಂಪ್ ರವರು ಕೊನೆಯ ಕ್ಷಣಗಳಲ್ಲಿ ಸ್ವಪಕ್ಷದವವರಿಗೆ ಹಾಗೂ ವಿಪಕ್ಷದವರಿಗೆ ಒಮ್ಮೆಲೆ ಶಾಕ್ ನೀಡಿದ್ದಾರೆ.

ಹೌದು ಸ್ನೇಹಿತರೇ ಅಮೇರಿಕಾ ದೇಶವನ್ನು ಬೆಳೆಸುವ ಸಿದ್ಧಾಂತಗಳನ್ನು ಒಟ್ಟುಗೂಡಿಸಿ ಕೊಂಡಿರುವ ಡೊನಾಲ್ಡ್ ಟ್ರಂಪ್ ರವರು ಮೊದಲನೇ ಆಯ್ಕೆ ಅಮೆರಿಕನ್ನರು ಹಾಗೂ ಅಮೇರಿಕಾ ದೇಶ ಎಂಬ ತತ್ವದ ಮೂಲಕ ಅಧಿಕಾರಕ್ಕೆ ಏರಿದರು. ಅದೇ ಕಾರಣಕ್ಕಾಗಿ ಟ್ರಂಪ್ ರವರಿಗೆ ಕೋಟ್ಯಂತರ ಸಂಖ್ಯೆಯಲ್ಲಿ ಅಭಿಮಾನಿಗಳು ಇದ್ದಾರೆ. ಇದೀಗ ಇದನ್ನೇ ಅಸ್ತ್ರವಾಗಿ ಬಳಸಿಕೊಂಡು ಪೇಟ್ರಿಯಾಟ್ ಅಂದರೆ ದೇಶಭಕ್ತ ಎಂಬ ಪಕ್ಷವನ್ನು ಆರಂಭಿಸುತ್ತಿದ್ದೇನೆ ಈ ಮೂಲಕ ಅಮೆರಿಕ ರಾಜಕಾರಣದಲ್ಲಿ ಹೊಸ ತಿರುವು ತರುತ್ತೇನೆ ನನ್ನ ಸ್ವಪಕ್ಷೀಯರೇ ನನಗೆ ಮೋಸ ಮಾಡಿದರು ಎಂದು ಹೇಳಿ ತಮ್ಮದೇ ಆದ ಪಕ್ಷವನ್ನು ವಿಭಜನೆ ಮಾಡಿ ಹೊಸ ಪಕ್ಷವನ್ನು ಕಟ್ಟುವತ್ತ ಟ್ರಂಪ್ ಹೆಜ್ಜೆ ಇಟ್ಟಿದ್ದಾರೆ. ಒಂದು ವೇಳೆ ಅದೇ ನಡೆದಲ್ಲಿ ಡೆಮಾಕ್ರೆಟಿಕ್ (ಜೋನ್ ಬಿಡೆನ್ ಪಕ್ಷ) ಪಕ್ಷಕ್ಕೆ ಹೆಚ್ಚು ಲಾಭಗಳು ಆಗುವ ಸಾಧ್ಯತೆ ಇದ್ದರೂ ಕೂಡ ಟ್ರಂಪ್ ರವರನ್ನು ಯಾವುದೇ ಕಾರಣಕ್ಕೂ ಕಡೆಗಣಿಸಬಾರದು ಎಂಬುದನ್ನು ಡೆಮೊಕ್ರೋಟಿಕ್ ಪಕ್ಷ ಅರ್ಥಮಾಡಿಕೊಳ್ಳಬೇಕಾದಬಹುದು ಎಂದು ರಾಜಕೀಯ ಪಂಡಿತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Comments are closed.