ರಾತ್ರಿ ಮಲಗೋ ಮುನ್ನ ಬಿಸಿ ನೀರಿನ ಜೊತೆ ಏಲಕ್ಕಿ ತಿನ್ನುವುದರಿಂದ ನಿಮ್ಮ ದೇಹದಲ್ಲಾಗುವ ಬದಲಾವಣೆಗಳು ಯಾವುವು ಗೊತ್ತಾ??

ನಮಸ್ಕಾರ ಸ್ನೇಹಿತರೇ ಏಲಕ್ಕಿ ಆಯುರ್ವೇದದಲ್ಲಿ ತನ್ನ ಬಹೋಪಯೋಗಿ ಔಷಧೀಯ ಗುಣಗಳಿಂದ ವಿಶಿಷ್ಟ ಸ್ಥಾನ ಪಡೆದಿದೆ. ಮದುವೆ ಹಾಗೂ ಇನ್ನಿತರ ಶುಭ ಸಮಾರಂಭಗಳಿಗೆ ಏಲಕ್ಕಿ ಹಾರಗಳು ಸಹ ವಿಶೇಷವಾದ ಬೇಡಿಕೆಯನ್ನು ಹೊಂದಿವೆ. ಇದಿಷ್ಟೇ ಅಲ್ಲದೇ ಏಲಕ್ಕಿಯಿಂದ ಇರುವ ಇನ್ನಿತರ ಉಪಯೋಗಗಳು ಸಹ ಇವೆ. ಅವುಗಳನ್ನ ತಿಳಿಯೋಣ ಬನ್ನಿ. ಹಾಗೂ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸುವುದನ್ನು ಮರೆಯ ಬೇಡಿ.

ರಾತ್ರಿ ಮಲಗುವ ಮುನ್ನ ಎರಡು ಏಲಕ್ಕಿ ತಿಂದು ಒಂದು ಲೋಟ ಬಿಸಿ ನೀರು ಕುಡಿದರೇ ನಿಮ್ಮ ದೇಹದಲ್ಲಿ ಹಲವಾರು ಬದಲಾವಣೆಗಳನ್ನು ಶೀಘ್ರದಲ್ಲೇ ಕಾಣ ಬಹುದಾಗಿದೆ. ಬಾಯಿ ದುರ್ನಾತವಾಗಿದ್ದರೇ ಅಥವಾ ದುರ್ವಾಸನೆಯಿಂದ ಕೂಡಿದ್ದರೇ ಏಲಕ್ಕಿ ಸೇವಿಸುವ ಕಾರಣ ಅದು ಕಡಿಮೆ ಯಾಗುತ್ತದೆ. ಶೀತ,ನೆಗಡಿ, ಒಣ ಕೆಮ್ಮಿನಂತಹ ರೋಗಗಳಿಗೆ ಏಲಕ್ಕಿ ಸೇವಿಸುವುದು ರಾಮಬಾಣ. ಅಲರ್ಜಿ, ಚರ್ಮದ ತುರಿಕೆ, ನೆವೆಗಳಂತಹ ಖಾಯಿಲೆಗಳಿಗೂ ಏಲಕ್ಕಿ ಹಾಗೂ ಬಿಸಿನೀರನ್ನು ಸೇವಿಸುವುದರಿಂದ ಶೀಘ್ರದಲ್ಲಿಯೇ ಆ ಸೋಂಕುಗಳು ಶಮನಗೊಳ್ಳುತ್ತವೆ.

ಗಂಟಲು ನೋವು, ಹೊಟ್ಟೆ ಉರಿ, ಉಬ್ಬಸ, ಗ್ಯಾಸ್ಟ್ರಿಕ್ ಗಳಿಗೂ ಸಹ ಏಲಕ್ಕಿ ಔಷಧವಾಗಿ ಕೆಲಸ ಮಾಡುತ್ತದೆ. ಊಟ ಹೆಚ್ಚಾಗಿ ಸೇವಿಸಿದಾಗ ಜೀರ್ಣವಾಗದೇ ಹೊಟ್ಟೆಯುಬ್ಬರ ಸಂಭವಿಸಿದಾಗ, ಏರಡು ಏಲಕ್ಕಿ ಸೇವಿಸುವುದರಿಂದ ಪಚನಕ್ರಿಯೆ ಸಲೀಸಾಗುತ್ತದೆ. ದಿನವೂ ಏಲಕ್ಕಿ ತಿಂದರೇ, ದೇಹದಲ್ಲಿನ ವಿಷ ಪದಾರ್ಥಗಳನ್ನು ಇದು ಹೊರಗೆ ಹಾಕುತ್ತದೆ. ದೇಹದಲ್ಲಿನ ಕಿಡ್ನಿಗಳು ಉತ್ತಮ ಕೆಲಸ ನಿರ್ವಹಿಸುವಲ್ಲಿ ಇದು ಸಹಾಯ ಮಾಡುತ್ತದೆ‌. ನೋಡಿ ಇಷ್ಟೆಲ್ಲಾ ಬಹೋಪಯೋಗಿ ಇರುವ ಈ ಮನೆಮದ್ದನ್ನ ಇಂದಿನಿಂದಲೇ ಸೇವಿಸುವ ಮೂಲಕ ನಮ್ಮ ಆರೋಗ್ಯವನ್ನ ಸಮತೋಲನದಲ್ಲಿ ಇಟ್ಟು ಕೊಳ್ಳೋಣ.

Comments are closed.