ಏರ್ಟೆಲ್ ನಿಂದ ಕೇವಲ 149 ರೂಪಾಯಿಗಳಿಗೆ ಭರ್ಜರಿ ಆಫರ್, ಜಿಯೋ ಗೆ ಬಿಗ್ ಶಾಕ್. ಕಂಡು ಕೇಳರಿಯದ ಆಫರ್ ನೀಡಿದ ಏರ್ಟೆಲ್. ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ, ಜಿಯೋ ಅನ್ನು ಹಿಂದಿಕ್ಕಿ ಏರ್ಟೆಲ್ ಕೂಡ ಒಟಿಟಿ ಚಂದಾದಾರಿಕೆ ನೀಡುವಲ್ಲಿ ಹೊಸ ತಂತ್ರವನ್ನು ರೂಪಿಸಿದೆ. ಈಗಾಗಲೇ ಲಭ್ಯವಿದ್ದ ಏರ್ಟೆಲ್ ಎಕ್ಸ್ಟ್ರೀಮ್ ಅನ್ನು ಮರು ಪರಿಶೀಲಿಸಿ ಅದರಲ್ಲಿ ದೇಶದ ಪ್ರಮುಖ ಎಲ್ಲ ಒಟಿಟಿ ಲಭ್ಯವಾಗುವಂತೆ ಯೋಜನೆಯನ್ನು ರೂಪಿಸಿದೆ. ಇದು ಅತ್ಯಂತ ಕಡಿಮೆ ಬೆಲೆಯ ಯೋಜನೆಯಾಗಿದ್ದು, ಕೇವಲ 149 ರೂ. ತಿಂಗಳಿಗೆ ಪಾವತಿಸಿದರೆ ಸಾಕು. ವಾರ್ಷಿಕ 1,499 ರೂ.ಗಳನ್ನು ಪಾವತಿಸಿದರಾಯಿತು.

ಹೌದು ಏರ್‌ಟೆಲ್ ಹೊಸ ವೀಡಿಯೊ ಸ್ಟ್ರೀಮಿಂಗ್ ಸೇವೆ ನೀಡಲು ಎಕ್ಸ್‌ಸ್ಟ್ರೀಮ್ ಪ್ರೀಮಿಯಂ ಶುರುಮಾಡಿದೆ. ಇದರಲ್ಲಿ ಬಳಕೆದಾರರಿಗೆ 15 ವಿಭಿನ್ನ ಒಟಿಟಿ ಸ್ಟ್ರೀಮಿಂಗ್ ಸೇವೆಗಳನ್ನು ನೀಡಲಾಗುತ್ತದೆ. ತನ್ನ ಗ್ರಾಹಕರು ಬೇರೆ ಬೇರೆ ಅಪ್ಲಿಕೇಶನ್‌ಗಳು ಮತ್ತು ಚಂದಾದಾರಿಕೆಗಳನ್ನು ಪ್ರತ್ಯೇಕವಾಗಿ ನಿರ್ವಹಿಸುತ್ತಾರೆ. ಹಾಗಾಗಿ, ಒಂದೇ ಚಂದಾದಾರಿಕೆಯೊಂದಿಗೆ ಒಂದೇ ಸ್ಥಳದಲ್ಲಿ ವಿವಿಧ ಪ್ಲಾಟ್‌ಫಾರ್ಮ್ ಮೂಲಕ ಕಟೆಂಟ್ ಒದಗಿಸುವ ಸೇವೆಯನ್ನುನೀಡಲು ನಿರ್ಧರಿಸಿದ್ದೇವೆ ಎಂದು ಏರ್‌ಟೆಲ್‌ ವಕ್ತಾರರು ತಿಳಿಸಿದ್ದಾರೆ. ಹೇಳಿದ್ದಾರೆ. ಈ ಒಟಿಟಿ ಪ್ಲಾಟ್‌ಫಾರ್ಮ್‌ಗಳೊಂದಿಗೆ ಲೈವ್ ಚಾನೆಲ್‌ಗಳು, ಟಿವಿ ಶೋಗಳು ಮತ್ತು ಚಲನಚಿತ್ರಗಳಿಂದ ಬಳಕೆದಾರರು ಎಲ್ಲವನ್ನೂ ಪಡೆಯುತ್ತಾರೆ ಎಂದು ಅವರು ತಿಳಿಸಿದ್ದಾರೆ.

airtel vs jio kannada news 1 | ಏರ್ಟೆಲ್ ನಿಂದ ಕೇವಲ 149 ರೂಪಾಯಿಗಳಿಗೆ ಭರ್ಜರಿ ಆಫರ್, ಜಿಯೋ ಗೆ ಬಿಗ್ ಶಾಕ್. ಕಂಡು ಕೇಳರಿಯದ ಆಫರ್ ನೀಡಿದ ಏರ್ಟೆಲ್. ಏನು ಗೊತ್ತೇ??
ಏರ್ಟೆಲ್ ನಿಂದ ಕೇವಲ 149 ರೂಪಾಯಿಗಳಿಗೆ ಭರ್ಜರಿ ಆಫರ್, ಜಿಯೋ ಗೆ ಬಿಗ್ ಶಾಕ್. ಕಂಡು ಕೇಳರಿಯದ ಆಫರ್ ನೀಡಿದ ಏರ್ಟೆಲ್. ಏನು ಗೊತ್ತೇ?? 2

ಹೊಸ ಎಕ್ಸ್‌ಸ್ಟ್ರೀಮ್ ಪ್ರೀಮಿಯಂ ಸೇವೆಯಲ್ಲಿ ಲೈವ್ ಚಾನೆಲ್ ಗಳೂ ಸೇರಿದಂತೆ ಬೇರೆ ಬೇರೆ ಟಿವಿ ಚಾನೆಲ್ ಗಳು, 10,500 ಕ್ಕೂ ಹೆಚ್ಚು ಚಲನಚಿತ್ರಗಳು, ಟಿವಿ ಶೋಗಳನ್ನು ಒಳಗೊಂಡಿದೆ. ಭಾರತದಲ್ಲಿ ಡಿಜಿಟಲ್ ಮನರಂಜನೆಗಾಗಿ ಗೋ-ಟು ಡೆಸ್ಟಿನೇಶನ್ ಮಾಡಲು ಏರ್‌ಟೆಲ್ ಇನ್ನೂ ಅನೇಕ ಒಟಿಟಿ ಪ್ಲೇಯರ್‌ಗಳೊಂದಿಗೆ ಒಪ್ಪಂದಕ್ಕೆ ಸಿದ್ಧವಾಗಿದೆ ಎಂದು ಕಂಪನಿ ತಿಳಿಸಿದೆ. ಈ ಯೋಜನೆಯ ಮತ್ತೊಂದು ವಿಶೇಷ ಎಂದರೆ, ಇದು ಮೊಬೈಲ್ ಗಳಿಗೆ ಮಾತ್ರ ಸೀಮಿತವಾಗಿಲ್ಲ, ಒಂದೇ ಅಪ್ಲಿಕೇಶನ್, ಏಕ ಚಂದಾದಾರಿಕೆ ಮತ್ತು ಒಂದೇ ಲಾಗ್-ಇನ್‌ನೊಂದಿಗೆ, ಬಳಕೆದಾರರು ಲ್ಯಾಪ್‌ಟಾಪ್‌, ಟ್ಯಾಬ್ಲೆಟ್‌ ಗಳಲ್ಲಿಯೂ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ರೀಮಿಯಂನಿಂದ ಸೇವೆ ಪಡೆಯಬಹುದು.

Comments are closed.