ಯಶಸ್ಸಿನ ಉತ್ತುಂಗದಲ್ಲಿ ಇರಬೇಕಾದರೆ ಸಿನೆಮಾವನ್ನು ಲೆಕ್ಕಿಸದೆ ಮದುವೆಯಾದ ಖ್ಯಾತ ನಟಿಯರು ಯಾರ್ಯಾರು ಗೊತ್ತೇ?? ಮುಂದೇನಾಯಿತು ಇವರ ಜೀವನ?

ನಮಸ್ಕಾರ ಸ್ನೇಹಿತರೇ ಸಾಮಾನ್ಯವಾಗಿ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಚಿತ್ರರಂಗದಲ್ಲಿ ಯಶಸ್ಸು ಸಾಧಿಸಿದ ಮೇಲೆ ಹಲವಾರು ವರ್ಷಗಳ ನಂತರ ಸ್ಟಾರ್ ನಾಯಕಿಯರು ಮದುವೆಯಾಗುವುದನ್ನು ನೀವು ಗಮನಿಸಿರುತ್ತೀರಿ. ಆದರೆ ಇಂದು ನಾವು ಮಾತನಾಡಲು ಹೊರಟಿರುವುದು ಚಿತ್ರರಂಗದಲ್ಲಿ ಯಶಸ್ಸಿನ ಉತ್ತುಂಗದಲ್ಲಿರುವಾಗಲೇ ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಮದುವೆಯಾಗಿರುವ ನಟಿಯರ ಕುರಿತಂತೆ. ಹಾಗಿದ್ದರೆ ಈ ಸಾಲಿನಲ್ಲಿ ಯಾವೆಲ್ಲಾ ಭಾರತೀಯ ನಟಿಯರು ಕಾಣಸಿಗುತ್ತಾರೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

amala paul | ಯಶಸ್ಸಿನ ಉತ್ತುಂಗದಲ್ಲಿ ಇರಬೇಕಾದರೆ ಸಿನೆಮಾವನ್ನು ಲೆಕ್ಕಿಸದೆ ಮದುವೆಯಾದ ಖ್ಯಾತ ನಟಿಯರು ಯಾರ್ಯಾರು ಗೊತ್ತೇ?? ಮುಂದೇನಾಯಿತು ಇವರ ಜೀವನ?
ಯಶಸ್ಸಿನ ಉತ್ತುಂಗದಲ್ಲಿ ಇರಬೇಕಾದರೆ ಸಿನೆಮಾವನ್ನು ಲೆಕ್ಕಿಸದೆ ಮದುವೆಯಾದ ಖ್ಯಾತ ನಟಿಯರು ಯಾರ್ಯಾರು ಗೊತ್ತೇ?? ಮುಂದೇನಾಯಿತು ಇವರ ಜೀವನ? 4

ಅಮಲ ಪೌಲ್; ಮಲಯಾಳಂ ಮೂಲದ ದಕ್ಷಿಣ ಭಾರತ ಚಿತ್ರರಂಗದ ಅತ್ಯಂತ ಬಹುಬೇಡಿಕೆಯ ನಟಿ ಆಗಿ ಕಾಣಿಸಿಕೊಂಡಿರುವ ಅಮಲಾ ಪೌಲ್ ರವರು ನಿರ್ದೇಶಕ ವಿಜಯ್ ರವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಇನ್ನು ಇವರಿಗೆ ಮದುವೆಯಾಗುವಾಗ 23 ವರ್ಷ ವಯಸ್ಸಾಗಿತ್ತು. ಸದ್ಯಕ್ಕೆ ಇವರಿಬ್ಬರೂ ಕೂಡ ಮದುವೆಯಾದ ಕೆಲವೇ ವರ್ಷಗಳಲ್ಲಿ ನಡುವೆ ತೋರಿ ಬಂದಂತಹ ವೈಮನಸ್ಸಿನ ಕಾರಣದಿಂದಾಗಿ ವಿವಾಹ ವಿಚ್ಛೇದನವನ್ನು ಪಡೆದುಕೊಂಡಿದ್ದಾರೆ. ಕನ್ನಡದಲ್ಲಿ ಕೂಡ ಅಮಲಪೌಲ್ ರವರು ಹೆಬ್ಬುಲಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ ಎಂಬುದನ್ನು ಇಲ್ಲಿ ನಾವು ನೆನಪಿಸಿಕೊಳ್ಳಬಹುದಾಗಿದೆ.

ಆಲಿಯಾ ಭಟ್; ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಬಾಲಿವುಡ್ ಚಿತ್ರರಂಗದ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟಿ ಆಗಿರುವ ಆಲಿಯಾ ಭಟ್ ರವರು ಇದೇ ಏಪ್ರಿಲ್ 14ರಂದು ರಣಬೀರ್ ಕಪೂರ್ ಅವರನ್ನು ಮದುವೆಯಾಗುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇನ್ನು ಇವರು ಮದುವೆಯಾಗುವಾಗ ಇವರಿಗೆ 29 ವರ್ಷ ವಯಸ್ಸಾಗಿತ್ತು.

sayyeshaa | ಯಶಸ್ಸಿನ ಉತ್ತುಂಗದಲ್ಲಿ ಇರಬೇಕಾದರೆ ಸಿನೆಮಾವನ್ನು ಲೆಕ್ಕಿಸದೆ ಮದುವೆಯಾದ ಖ್ಯಾತ ನಟಿಯರು ಯಾರ್ಯಾರು ಗೊತ್ತೇ?? ಮುಂದೇನಾಯಿತು ಇವರ ಜೀವನ?
ಯಶಸ್ಸಿನ ಉತ್ತುಂಗದಲ್ಲಿ ಇರಬೇಕಾದರೆ ಸಿನೆಮಾವನ್ನು ಲೆಕ್ಕಿಸದೆ ಮದುವೆಯಾದ ಖ್ಯಾತ ನಟಿಯರು ಯಾರ್ಯಾರು ಗೊತ್ತೇ?? ಮುಂದೇನಾಯಿತು ಇವರ ಜೀವನ? 5

ಸಯ್ಯೇಶಾ; ಸಯೇಷಾ ನಿಮಗೆಲ್ಲರಿಗೂ ತಿಳಿದಿರುವಂತೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಯುವರತ್ನ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಇನ್ನು ಇವರು ತಮಿಳು ಚಿತ್ರರಂಗದ ಸ್ಟಾರ್ ನಾಯಕನಟ ಆಗಿರುವ ಆರ್ಯ ರವರನ್ನು 22 ವರ್ಷ ವಯಸ್ಸಿನಲ್ಲಿ ಮದುವೆಯಾಗಿದ್ದರು. ಈಗಾಗಲೇ ಮಗುವಿನ ತಾಯಿ ಕೂಡ ಆಗಿದ್ದಾರೆ.

ರಕ್ಷಿತಾ; ಕನ್ನಡ ಚಿತ್ರರಂಗದ ಸ್ಟಾರ್ ನಟಿಯಾಗಿ ಒಂದು ಕಾಲದಲ್ಲಿ ಅನಭಿಷಿಕ್ತ ರಾಣಿಯಾಗಿ ಕನ್ನಡ ಚಿತ್ರರಂಗ ದಲ್ಲಿ ಮಿಂಚಿ ಮೆರೆದಿದ್ದ ನಟಿ ರಕ್ಷಿತಾ ರವರು ಇಂಡಸ್ಟ್ರಿ ಹಿಟ್ ನಿರ್ದೇಶಕ ಜೋಗಿ ಪ್ರೇಮ್ ಅವರನ್ನು ಮದುವೆಯಾಗಿದ್ದರು. ಪ್ರೇಮ್ ರವರನ್ನು ಮದುವೆಯಾಗುವಾಗ ರಕ್ಷಿತಾ ರವರಿಗೆ 23 ವರ್ಷ ವಯಸ್ಸಾಗಿತ್ತು.

ಜೆನಿಲಿಯಾ ಡಿಸೋಜಾ; ಮೊದಲಿಗೆ ದಕ್ಷಿಣ ಭಾರತ ಚಿತ್ರರಂಗದಲ್ಲಿ ತಮ್ಮ ಸಿನಿಮಾ ಜರ್ನಿ ಯನ್ನು ಪ್ರಾರಂಭಿಸಿದ ಜೆನಿಲಿಯಾ ಡಿಸೋಜಾ ಅವರು ನಂತರದ ದಿನಗಳಲ್ಲಿ ಹಿಂದಿ ಸಿನಿಮಾದಲ್ಲಿ ಸಕ್ರಿಯರಾಗುತ್ತಾರೆ. ಇನ್ನು ಇವರು ಹಿಂದಿ ಹಾಗೂ ಮರಾಠಿ ಚಿತ್ರರಂಗದ ಖ್ಯಾತ ನಟ ಹಾಗೂ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿಗಳ ಮಗ ಆಗಿರುವ ರಿತೇಶ್ ದೇಶಮುಖ್ ರವರನ್ನು ತಮ್ಮ 25ನೇ ವರ್ಷ ವಯಸ್ಸಿನಲ್ಲಿ ಮದುವೆಯಾಗುತ್ತಾರೆ.

genelia radhika | ಯಶಸ್ಸಿನ ಉತ್ತುಂಗದಲ್ಲಿ ಇರಬೇಕಾದರೆ ಸಿನೆಮಾವನ್ನು ಲೆಕ್ಕಿಸದೆ ಮದುವೆಯಾದ ಖ್ಯಾತ ನಟಿಯರು ಯಾರ್ಯಾರು ಗೊತ್ತೇ?? ಮುಂದೇನಾಯಿತು ಇವರ ಜೀವನ?
ಯಶಸ್ಸಿನ ಉತ್ತುಂಗದಲ್ಲಿ ಇರಬೇಕಾದರೆ ಸಿನೆಮಾವನ್ನು ಲೆಕ್ಕಿಸದೆ ಮದುವೆಯಾದ ಖ್ಯಾತ ನಟಿಯರು ಯಾರ್ಯಾರು ಗೊತ್ತೇ?? ಮುಂದೇನಾಯಿತು ಇವರ ಜೀವನ? 6

ರಾಧಿಕಾ ಕುಮಾರಸ್ವಾಮಿ; ಅದಾಗಲೇ ಸಿನಿಮಾ ಬರುವ ಮುನ್ನವೇ ರಾಧಿಕಾ ಕುಮಾರಸ್ವಾಮಿ ಅವರಿಗೆ 14 ವರ್ಷ ವಯಸ್ಸಿನಲ್ಲಿ ಬಾಲ್ಯವಿವಾಹ ವಾಗಿತ್ತು‌. ಅದಾದನಂತರ ಸಿನಿಮಾ ರಂಗಕ್ಕೆ ಕಾಲಿಟ್ಟ ಮೇಲೆ ಅತ್ಯಂತ ಯಶಸ್ವಿಯಾಗಿ ನಟಿಸುತ್ತಿರುವಾಗಲೇ ಕುಮಾರಸ್ವಾಮಿಯವರ 20 ವರ್ಷ ವಯಸ್ಸಿನಲ್ಲಿ ಮದುವೆಯಾಗುತ್ತಾರೆ. ಸದ್ಯಕ್ಕೆ ಇವರಿಬ್ಬರು ಈಗ ಬೇರೆ ಇದ್ದು ರಾಧಿಕಾ ಕುಮಾರಸ್ವಾಮಿ ಅವರು ಇಂದಿಗೂ ಕೂಡ ನಟಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ನವ್ಯ ನಾಯರ್; ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಗಜ ಹಾಗೂ ಕ್ರೇಜಿಸ್ಟಾರ್ ರವಿಚಂದ್ರನ್ ನಟನೆಯ ದೃಶ್ಯ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿರುವ ನವ್ಯ ನಾಯರ್ ರವರು ತಮ್ಮ 25ನೇ ವರ್ಷದ ವಯಸ್ಸಿನಲ್ಲಿ ಸಂತೋಷ್ ರವರನ್ನು ಮದುವೆಯಾಗುತ್ತಾರೆ.

ಪ್ರಿಯಾಂಕ ಉಪೇಂದ್ರ; ಬೆಂಗಾಳಿ ಮೂಲದ ನಟಿ ಆಗಿರುವ ಪ್ರಿಯಾಂಕ ಉಪೇಂದ್ರ ರವರು ಕನ್ನಡ ಚಿತ್ರರಂಗಕ್ಕೆ ಹಲವಾರು ವರ್ಷಗಳ ಹಿಂದೆಯೇ ಆಗಮಿಸುತ್ತಾರೆ. ನಟ ಹಾಗೂ ನಿರ್ದೇಶಕ ಉಪೇಂದ್ರ ಅವರನ್ನು ಪ್ರೀತಿಸಿ 25 ವರ್ಷ ವಯಸ್ಸಿನವರು ಇರಬೇಕಾದರೆ ಪ್ರಿಯಾಂಕ ಉಪೇಂದ್ರ ರವರು ರಿಯಲ್ ಸ್ಟಾರ್ ಉಪೇಂದ್ರ ರವರನ್ನು ಮದುವೆಯಾಗುತ್ತಾರೆ. ಈ ಮೇಲೆ ಹೇಳಿರುವ ನಟಿಯರೇ ಅತ್ಯಂತ ಯಶಸ್ಸಿನ ಉತ್ತುಂಗದಲ್ಲಿ ಇರಬೇಕಾದರೆ ಕಡಿಮೆ ವಯಸ್ಸಿನಲ್ಲಿ ಮದುವೆಯಾಗಿರುತ್ತಾರೆ.

Comments are closed.