ಅಂದು ದರ್ಶನ್, ಇಂದು ರವಿ ಚಂದ್ರನ್: ಹೊಂಬಾಳೆ ಫಿಲಂಸ್ ವಿರುದ್ಧ ರವಿ ಮಾಮ ರವರ ಅಭಿಮಾನಿಗಳು ಗರಂ. ಯಾಕೆ ಗೊತ್ತೇ?? ಪದೇ ಪದೇ ಅದೇ ತಪ್ಪು ಯಾಕೆ?

ಚಂದನವನದಲ್ಲಿ ಹೊಂಬಾಳೆ ಸಂಸ್ಥೆ ಈಗ ಬಹಳ ಒಳ್ಳೆಯ ಹೆಸರು ಪಡೆದುಕೊಂಡಿದೆ. ಕನ್ನಡ ಚಿತ್ರರಂಗಕ್ಕೆ ಒಳ್ಳೆಯ ಸಿನಿಮಾ ನೀಡಿರುವ ಈ ಸಂಸ್ಥೆ ಕೆಜಿಎಫ್ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಿದೆ. ಪುನೀತ್ ರಾಜ್ ಕುಮಾರ್ ಅವರ ನಿನ್ನಿಂದಲೇ ಸಿನಿಮಾ ಮೂಲಕ ಹೊಂಬಾಳೆ ಸಂಸ್ಥೆ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿತು. ಕೆಜಿಎಫ್ ಬಳಿಕ ಸಲಾರ್ ಸಿನಿಮಾ ನಿರ್ಮಾಣ ಮಾಡಿ, ಬೇರೆ ಚಿತ್ರರಂಗಕ್ಕೂ ಎಂಟ್ರಿ ಕೊಡುತ್ತಿದ್ದಾರೆ. ಆದರೆ ಈಗ ಹೊಂಬಾಳೆ ಸಂಸ್ಥೆ ರವಿಚಂದ್ರನ್ ಅವರ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ..

ಇತ್ತೀಚೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳು ಸಹ ಹೊಂಬಾಳೆ ಸಂಸ್ಥೆಯ ಮೇಲೆ ಆಕ್ರೋಶಕ್ಕೆ ಒಳಗಾಗಿದ್ದರು. ಕೆಜಿಎಫ್2 ಸಿನಿಮಾ ಸೂಪರ್ ಹಿಟ್ ಆದ ನಂತರ ಹೊಂಬಾಳೆ ಸಂಸ್ಥೆ ಒಂದು ಪೋಸ್ಟ್ ಮಾಡಿ, ಯಶ್ ಅವರನ್ನು ಬಾಕ್ಸ್ ಆಫೀಸ್ ಸುಲ್ತಾನ್ ಎಂದು ಕರೆದಿದ್ದರು. ದರ್ಶನ್ ಅವರನ್ನು ಬಾಕ್ಸ್ ಆಫೀಸ್ ಸುಲ್ತಾನ್ ಎಂದು ಕರೆಯುವುದರಿಂದ, ಆ ಹೆಸರನ್ನು ಕದ್ದು ಬೇರೊಬ್ಬ ನಟನಿಗೆ ಇಟ್ಟಿದ್ದಾರೆ. ಹೊಂಬಾಳೆ ಸಂಸ್ಥೆ ಇಂಥಹ ಚೀಪ್ ಕೆಲಸ ಮಾಡಬಾರದು, ಎಂದು ದರ್ಶನ್ ಅವರ ಅಭಿಮಾನಿಗಳು ಆಕ್ರೋಶದಿಂದ ಸೋಷಿಯಲ್ ಮೀಡಿಯಾದಲ್ಲಿ ಹೊಂಬಾಳೆ ಸಂಸ್ಥೆಯನ್ನು ತರಾಟೆಗೆ ತೆಗೆದುಕೊಂಡಿದ್ದರು. ದರ್ಶನ್ ಅವರ ಡೈಲಾಗ್ ಗಳನ್ನು ಹಾಕಿ, ಟ್ರೋಲ್ ಸಹ ಮಾಡಿದ್ದರು.

hombale | ಅಂದು ದರ್ಶನ್, ಇಂದು ರವಿ ಚಂದ್ರನ್: ಹೊಂಬಾಳೆ ಫಿಲಂಸ್ ವಿರುದ್ಧ ರವಿ ಮಾಮ ರವರ ಅಭಿಮಾನಿಗಳು ಗರಂ. ಯಾಕೆ ಗೊತ್ತೇ?? ಪದೇ ಪದೇ ಅದೇ ತಪ್ಪು ಯಾಕೆ?
ಅಂದು ದರ್ಶನ್, ಇಂದು ರವಿ ಚಂದ್ರನ್: ಹೊಂಬಾಳೆ ಫಿಲಂಸ್ ವಿರುದ್ಧ ರವಿ ಮಾಮ ರವರ ಅಭಿಮಾನಿಗಳು ಗರಂ. ಯಾಕೆ ಗೊತ್ತೇ?? ಪದೇ ಪದೇ ಅದೇ ತಪ್ಪು ಯಾಕೆ? 2

ಇದೀಗ ಮತ್ತೊಮ್ಮೆ, ರವಿಚಂದ್ರನ್ ಅವರ ಅಭಿಮಾನಿಗಳು ಸಹ ಹೊಂಬಾಳೆ ಫೈಲ್ಮ್ಸ್ ಸಂಸ್ಥೆಯ ಮೇಲೆ ಕೋಪಗೊಂಡಿದ್ದಾರೆ. ಪ್ರಶಾಂತ್ ನೀಲ್ ಅವರ ಹುಟ್ಟುಹಬ್ಬವನ್ನು, ಹೊಂಬಾಳೆ ಸಂಸ್ಥೆ, ನಟ ಯಶ್, ನಟ ಪ್ರಭಾಸ್ ಹಾಗೂ ಇನ್ನಿತತರು ಸೇರಿ ಆಚರಿಸಿದ್ದಾರೆ, ಪ್ರಭಾಸ್ ಅವರು ಬೆಂಗಳೂರಿಗೆ ಬಂದು ಪ್ರಶಾಂತ್ ನೀಲ್ ಅವರ ಹುಟ್ಟುಹಬ್ಬದಲ್ಲಿ ಪಾಲ್ಗೊಂಡರು. ಪ್ರಶಾಂತ್ ನೀಲ್ ಅವರ ಬರ್ತ್ ಡೇ ಸೆಲೆಬ್ರೇಷನ್ ಫೋಟೋಸ್ ಶೇರ್ ಮಾಡಿ, ಶೋಮ್ಯಾನ್ ಹುಟ್ಟುಹಬ್ಬಕ್ಕೆ ಡೈನಮೈಟ್ ಗಳು ಜೊತೆಯಾಗಿ ಬಂದಿದ್ದಾರೆ ಎಂದು ಪೋಸ್ಟ್ ಮಾಡಿದೆ ಹೊಂಬಾಳೆ ಸಂಸ್ಥೆ. ಕನ್ನಡ ಚಿತ್ರರಂಗದ ಶೋಮ್ಯಾನ್ ಎಂದು ಕ್ರೇಜಿಸ್ಟಾರ್ ರವಿಚಂದ್ರನ್ ಅವರನ್ನು ಕರೆಯುತ್ತಾರೆ. ಹಾಗಾಗಿ ಮತ್ತೊಮ್ಮೆ ಸ್ಯಾಂಡಲ್ ವುಡ್ ನ ಮತ್ತೊಬ್ಬ ನಟನ ಹೆಸರನ್ನು ಪ್ರಶಾಂತ್ ನೀಲ್ ಅವರಿಗೆ ಕರೆದಿರುವುದರಿಂದ, ಇದೀಗ ನಟ ರವಿಚಂದ್ರನ್ ಅವರ ಅಭಿಮಾನಿಗಳು ದಾಹ ಕೋಪಗೊಂಡಿದ್ದಾರೆ.

Comments are closed.