ರೆಕಾರ್ಡ್ಗಳನ್ನು ಕಬ್ಜಾ ಮಾಡಿದ ಕನ್ನಡದ ಹೆಮ್ಮೆಯ ಕಬ್ಜಾ! ಮೊದಲ ಪ್ಲಾನ್ ಇಂಡಿಯನ್ ಸಿನಿಮಾದಲ್ಲಿಯೇ ರೆಕಾರ್ಡ್ ಮಾಡಿದ ನಿರ್ದೇಶಕ ಆರ್ ಚಂದ್ರು.

ಕಬ್ಜಾ ಸಿನಿಮಾದಲ್ಲಿ ಪ್ರೇಕ್ಷಕರಿಗೆ ತೋರಿಸಲಾಗಿರುವಂತಹ ಒಂದೊಂದು ಫ್ರೇಮ್ ಕೂಡ ನಿಜಕ್ಕೂ ಪ್ರತಿಯೊಬ್ಬ ಪ್ರೇಕ್ಷಕನು ಕೂಡ ಇದು ನಮ್ಮ ಕನ್ನಡದ ಹೆಮ್ಮೆಯ ಸಿನಿಮಾ ಎಂದು ಭಾವಿಸಬೇಕು ಆ ರೀತಿಯಲ್ಲಿ ಮೂಡಿಬಂದಿದೆ. ಸಿನಿಮಾದ ಥೀಮ್ ಕಥೆ ಮೇಕಿಂಗ್ ಮ್ಯೂಸಿಕ್ ಕಲಾವಿದರ ನಟನೆ ಎಲ್ಲವೂ ಕೂಡ ಅತ್ಯಂತ ಪರಿಪೂರ್ಣ ಹಾಗೂ ಪರಿಪಕ್ವವಾಗಿ ಮೂಡಿಬಂದಿದೆ. ನಿರ್ದೇಶಕ ಆರ್ ಚಂದ್ರು ತಮ್ಮ ಮೇಲೆ ಎಲ್ಲರೂ ಇಂತಹ ಭರವಸೆಗೆ ತಕ್ಕನಾಗಿ ಕೆಲಸ ಮಾಡಿದ್ದಾರೆ ಎನ್ನಬಹುದಾಗಿದೆ.

ಕೇವಲ ನಿರ್ದೇಶಕನಾಗಿ ಮಾತ್ರವಲ್ಲದ ನಿರ್ಮಾಪಕನಾಗಿ ಕೂಡ ಸಿನಿಮಾಗೆ ಬೇಕಾಗುವಂತಹ ಯಾವುದೇ ವಸ್ತುಗಳ ಕೊರತೆಯನ್ನು ಕಾಣುವಂತೆ ಮಾಡಿಲ್ಲ. ಎಲ್ಲಿಯೂ ಕೂಡ ರಾಜಿಯಾಗದೆ ಸಿನಿಮಾವನ್ನು ಅತ್ಯಂತ ಅದ್ಭುತವಾಗಿ ಮೂಡಿ ಬರುವಂತೆ ಮಾಡಿದ್ದಾರೆ. ರವಿ ಬಸ್ರೂರು ಅವರ ಸಂಗೀತ ಕೂಡ ಈ ಸಿನಿಮಾದಲ್ಲಿ ಅದ್ಭುತವಾಗಿ ಸಿನಿಮಾ ದುದ್ದಕ್ಕೂ ಮೂಡಿಬಂದಿದ್ದು ಪ್ರೇಕ್ಷಕರ ಚಪ್ಪಾಳೆಗೆ ಕಾರಣವಾಗಿದೆ.

ಅಂಡರ್ವರ್ಲ್ಡ್ ಕಥೆಯನ್ನು ಈ ರೀತಿ ಕೂಡ ತೋರಿಸಬಹುದು ಎನ್ನುವುದನ್ನು ಕಬ್ಜಾ ಸಿನಿಮಾದ ಮೂಲಕ ನಾವು ನೋಡಿದ್ದೇವೆ. ಉಪೇಂದ್ರ ಅವರು ತಮ್ಮ ಪಾತ್ರದ ಮೂಲಕ ಈಗಾಗಲೇ ಎಲ್ಲಾ ಕಡೆ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತಿದ್ದು, ಕಿಚ್ಚ ಸುದೀಪ್ ಹಾಗೂ ಶಿವಣ್ಣನ ಪಾತ್ರ ಚಿಕ್ಕದಾಗಿದ್ದರು ಕೂಡ ಸಿನಿಮಾದಲ್ಲಿ ದೊಡ್ಡ ಮಟ್ಟದ ಪರಿಣಾಮವನ್ನು ಬೀರಿದೆ ಎಂದರು ಕೂಡ ಅತಿ ಶಯೋಕ್ತಿ ಎನಿಸಲಾರದು.

ಕೇವಲ ಇದೇ ವಿಚಾರ ಮಾತ್ರವಲ್ಲದೆ ಕಲೆಕ್ಷನ್ ಹಾಗೂ ವಿಮರ್ಶಕರ ವಿಮರ್ಶನ ಕೂಡ ಸಂಪೂರ್ಣವಾಗಿ ಕಬ್ಜಾ ಸಿನಿಮಾದ ಗೆಲುವಿನ ಪರವಾಗಿದೆ. ಎಲ್ಲಿ ನೋಡಿದರೂ ಕಬ್ಜಾ ಸಿನಿಮಾ ಖಂಡಿತವಾಗಿ ಈ ಬಾರಿ 300 ಕೋಟಿಯ ಗಡಿದಾಟುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದಾಗಿ ಪ್ರತಿಯೊಬ್ಬರೂ ಕೂಡ ಮಾತನಾಡಿಕೊಳ್ಳುವಂತಾಗಿದೆ. ಒಟ್ಟಾರೆಯಾಗಿ ಈ ವರ್ಷ ಕನ್ನಡ ಚಿತ್ರರಂಗ ಮತ್ತೊಂದು ಇತಿಹಾಸ ನಿರ್ಮಿಸುವಂತಹ ಸಿನಿಮಾಗೆ ಸಾಕ್ಷಿಯಾಗಿರುವುದು ನಮ್ಮೆಲ್ಲರ ಪುಣ್ಯ ಎಂಬುದೇ ಪ್ರತಿಯೊಬ್ಬ ಕನ್ನಡ ಪ್ರೇಕ್ಷಕನ ಅನಿಸಿಕೆಯಾಗಿದೆ.

Comments are closed.