10 Seater Car: ಬಂದೆ ಬಿಡ್ತು 10 ಸೀಟರ್ ಕಾರು- ಅದು ಕಡಿಮೆ ಬೆಲೆಯಲ್ಲಿ. ಸಂಪೂರ್ಣ ವಿಶೇಷತೆ, ಬೆಲೆ ಡೀಟೇಲ್ಸ್.
10 Seater Car: ಕಾರ್ ಗಳಿಗೆ ಹೆಚ್ಚು ಕ್ರೇಜ್ ಇದೆ, ಹೆಚ್ಜು ಜನರು ಕಾರ್ ಖರೀದಿ ಮಾಡಲು ಇಷ್ಟಪಡುತ್ತಾರೆ. ನಮ್ಮ ದೇಶದಲ್ಲಿ ಹಲವು ರೀತಿಯ ಕಾರ್ ಗಳಿವೆ, ಸಾಮಾನ್ಯವಾಗಿ 5, 6, 7 ಸೀಟರ್ ಕಾರ್ ಗಳು ಇರುತ್ತದೆ. ಆದರೆ ಭಾರತದಲ್ಲಿ ಹೆಚ್ಚು ಸೀಟ್ಸ್ ಗಳು ಇರುವ ಕಾರ್ ಗಳು ಸಹ ಲಭ್ಯವಿದೆ. 8 ಸೀಟರ್ ಹಾಗೂ 10 ಸೀಟರ್ ಕಾರ್ (10 Seater Car) ಸಹ ಈಗ ಮಾರ್ಕೆಟ್ ನಲ್ಲಿ ಲಭ್ಯವಿದೆ.
ಫೋರ್ಸ್ ಸಿಟಿಲೈನ್ ಇದು 10 ಸೀಟರ್ (10 Seater Car) ಆಗಿದೆ, ಈ ಕಾರ್ ಫೋರ್ಸ್ ಟ್ರಾಕ್ಸ್ ಕ್ರುಸರ್ ನ ಅಪ್ಗ್ರೇಡ್ ವರ್ಷನ್ ಆಗಿದೆ. ಇದು 10 ಸೀಟರ್ ಆಗಿದ್ದು, ಎಲ್ಲಾ ಸೀಟ್ ಗಳು ಸಹ ಮುಂದಕ್ಕೆ ಮುಖ ಮಾಡಿರುವುದು ವಿಶೇಷವಾಗಿದೆ. ಈ ಕಾರ್ ನ ಆರಂಭಿಕ ಬೆಲೆ ₹16.5ಲಕ್ಷ ರೂಪಾಯಿ ಆಗಿದೆ. ಈ ಕಾರ್ ನ ವಿಶೇಷತೆಗಳ ಬಗ್ಗೆ ಪೂರ್ತಿಯಾಗಿ ತಿಳಿಸುತ್ತೇವೆ ನೋಡಿ… ಇದನ್ನು ಓದಿ..SBI: SBI ಗ್ರಾಹಕರಿಗೆ ಭರ್ಜರಿ ಸಿಹಿ ಸುದ್ದಿ- ಇನ್ನು ಮುಂದೆ ATM ಕಾರ್ಡ್ ಇಲ್ಲದೆ ಹಣ ಪಡೆಯಬಹುದು. ಅದು ಸುಲಭವಾಗಿ.
ಫೋರ್ಸ್ ಸಿಟಿಲೈನ್ ಕಾರ್ ಪವರ್ 2.6 ಲೀಟರ್ ಡೀಸೆಲ್ ಇಂಜಿನ್ ಆಗಿದೆ, ಈ ಕಾರ್ (10 Seater Car) 91bhp ಪವರ್ ಹಾಗೂ 250nm ಟಾರ್ಕ್ ಉತ್ಪಾದನೆ ಮಾಡುತ್ತದೆ. 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್ ಜೊತೆಯಲ್ಲಿ ಬರುತ್ತದೆ. 63.5 ಲೀಟರ್ ಫ್ಯುಲ್ ಟ್ಯಾಂಕ್ ಹೊಂದಿದೆ. ಈ ಕಾರ್ ಗಾತ್ರದಲ್ಲಿ ಬಹಳ ದೊಡ್ಡದಾಗಿದೆ, ಈ ಕಾರ್ ನ ಉದ್ದ 5120nm ಆಗಿದೆ, ಅಗಲ 1818mm, ಹೈಟ್ 2027mm ಆಗಿದೆ. ವೀಲ್ ಬೇಸ್ 3050mm, ಗ್ರೌಂಡ್ ಕ್ಲಿಯರೆನ್ಸ್ 191mm ಆಗಿದೆ. ಈ ಕಾರ್ ನ ವೇಟ್ 3140 ಕೆಜಿ ಆಗಿದೆ. ಈ ಕಾರ್ ನ ಮುಂಭಾಗ ಟಾಟಾ ಸುಮೋ ಕಾರ್ ರೀತಿಯಲ್ಲಿದೆ (10 Seater Car) .
ಫೋರ್ಸ್ ಸಿಟಿಲೈನ್ ಕಾರ್ ನಲ್ಲಿ ಡ್ರೈವರ್ ಸೇರಿದ ಹಾಗೆ, 10 ಸೀಟ್ (10 Seater Car) ಗಳು ಇರುತ್ತದೆ. ಚಾಲಕನನ್ನು ಹೊರತುಪಡಿಸಿ 9 ಜನರು ಕಾರ್ ಒಳಗೆ ಕುಳಿತುಕೊಳ್ಳಬಹುದು. 7 ಸೀಟರ್ ಕಾರ್ ಗಳಲ್ಲಿ 3 ಸಾಲುಗಳು ಇರುತ್ತದೆ, ಆದರೆ 10 ಸೀಟರ್ ಕಾರ್ ಗಳಲ್ಲಿ 4 ಸಾಲುಗಳು ಇರುತ್ತದೆ. ಹಾಗಾಗಿ 10 ಜನರು ಆರಾಮವಾಗಿ ಕಾರ್ ಒಳಗೆ ಕುಳಿತುಕೊಳ್ಳಬಹುದು. ಮೊದಲ ರೋ ನಲ್ಲಿ ಇಬ್ಬರು, ಎರಡನೇ ರೋ ನಲ್ಲಿ 3, ಮೂರನೇ ಸಾಲಿನಲ್ಲಿ 2, ನಾಲ್ಕನೇ ಸಾಲಿನಲ್ಲಿ 3 ಜನ ಕುಳಿತುಕೊಳ್ಳಬಹುದು. ಇದನ್ನು ಓದಿ..Maruti Suzuki Invicto: ಭರ್ಜರಿ ಮೈಲೇಜ್ ನೊಂದಿಗೆ ಬಿಡುಗಡೆಯಾದ ಹೊಸ ಕಾರು- ವಿಶೇಷತೆ, ಸ್ಪೆಷಲ್ ಆಯ್ಕೆ, ಮೈಲೇಜ್ ನ ಸಂಪೂರ್ಣ ಡೀಟೇಲ್ಸ್.
ಇನ್ನಿತರ ವಿಶೇಷತೆಗಳ ಬಗ್ಗೆ ಹೇಳುವುದಾದರೆ, ಈ ಕಾರ್ (10 Seater Car) ನಲ್ಲಿ ಇದು ಡ್ಯುಯೆಲ್ ಹವಾ ನಿಯಂತ್ರಣ ಇದೆ, ಸೆಂಟ್ರಲ್ ಲಾಕಿಂಗ್ ಪವರ್ ವಿಂಡೋ, USB ಪೋರ್ಟ್ ಗಳು ಸಹ ಇದೆ..ಹಿಂದುಗಡೆ ಪಾರ್ಕಿಂಗ್ ಸಂವೇದಕ ಇದೆ, ಬಾಟಲ್ ಹೋಲ್ಡರ್, ಲಗೇಜ್ ಇಡುವುದಕ್ಕೆ ಕೊನೆಯ ಸಾಲಿನ ಸೀಟ್ ಗಳನ್ನು ಫೋಲ್ಡ್ ಮಾಡಬಹುದು. ಕೊನೆಯ ಸಾಲಿನಲ್ಲಿ ಸೀಟ್ ಗಳು ವಿಶೇಷವಾಗಿದೆ. ಇದನ್ನು ಓದಿ..Smart Phone Tricks: ಮೊಬೈಲ್ ನಲ್ಲಿ ಇಂಟರ್ನೆಟ್ ಸರಿಯಾಗಿ ವರ್ಕ್ ಆಗುತ್ತಿಲ್ಲ ಎಂದರೆ, ಫಾಲೋ ಮಾಡಬೇಕಾದ ಟ್ರಿಕ್ಸ್ ಗಳು.
Comments are closed.