ಕೆಜಿಎಫ್-2 ಕಲಾವಿದರಿಗೆ ಚಿತ್ರತಂಡ ನೀಡಿದ ಸಂಭಾವನೆ ಎಷ್ಟು ಗೊತ್ತಾ??ಪ್ರಶಾಂತ್ ನೀಲ್ ರವರಿಗೆ ಸಿಕ್ಕಿರುವ ಸಂಭಾವನೆ ಕನ್ನಡದ ಸ್ಟಾರ್ ನಟರಿಗೆ ಕೂಡ ಸಿಗೋದು ಕಷ್ಟ?? ಎಷ್ಟು ಗೊತ್ತೇ??

ನಮಸ್ಕಾರ ಸ್ನೇಹಿತರೇ ವಿಂಟೇಜ್ ಕಾಲದಲ್ಲಿ ನಮ್ಮ ಕನ್ನಡ ಚಿತ್ರರಂಗ ಎನ್ನುವುದು ಸಾಕಷ್ಟು ದೊಡ್ಡ ಮಟ್ಟದಲ್ಲಿ ಹೆಸರನ್ನು ಮಾಡಿತ್ತು. ಅಣ್ಣಾವ್ರ ಸಿನಿಮಾಗಳು ಸೇರಿದಂತೆ ಹಲವಾರು ಕನ್ನಡ ಸಿನಿಮಾಗಳನ್ನು ಬೇರೆ ಭಾಷೆಯ ಸಿನಿಮಾ ರಂಗದವರು ರಿಮೇಕ್ ಮಾಡುತ್ತಿದ್ದರು. ಅಷ್ಟರ ಮಟ್ಟಿಗೆ ನಮ್ಮ ಕನ್ನಡ ಚಿತ್ರರಂಗ ಎನ್ನುವುದು ಭಾರತೀಯ ಚಿತ್ರರಂಗದಲ್ಲಿ ತನ್ನ ಪ್ರಾಬಲ್ಯವನ್ನು ಸ್ಥಾಪಿಸಿತ್ತು. ನಂತರ ಒಂದು ಕಾಲದಲ್ಲಿ ಕನ್ನಡ ಚಿತ್ರರಂಗ ಭಾರತೀಯ ಚಿತ್ರರಂಗದಲ್ಲಿ ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಂಡಿತ್ತು. ಆದರೆ ಈಗ ಮತ್ತೊಮ್ಮೆ ಭಾರತೀಯ ಚಿತ್ರರಂಗದಲ್ಲಿ ಕನ್ನಡ ಚಿತ್ರರಂಗ ತನ್ನ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ.

ಹೌದು ಗೆಳೆಯರೇ ಇದು ಸಾಧ್ಯವಾಗುವಂತೆ ಮಾಡಿದ್ದು ಖಂಡಿತವಾಗಿ ಯಾವುದೇ ಅನುಮಾನವಿಲ್ಲದೆ ಕೆಜಿಎಫ್ ಚಾಪ್ಟರ್ 1 ಎಂದು ಹೇಳಬಹುದಾಗಿದೆ. ಹೊಂಬಾಳೆ ಫಿಲಂಸ್ ನಿರ್ಮಾಣದಲ್ಲಿ ಪ್ರಶಾಂತ್ ನೀಲ್ ಅವರ ಅದ್ಭುತ ನಿರ್ದೇಶನದಲ್ಲಿ ಹಾಗೂ ರಾಕಿಂಗ್ ಸ್ಟಾರ್ ಯಶ್ ರವರ ನಟನೆ ಹಾಗೂ ಕನಸಿನ ಮಾರ್ಗದರ್ಶನದಲ್ಲಿ ಮೂಡಿ ಬಂದಂತಹ ಈ ಚಿತ್ರ ಇಡೀ ಭಾರತೀಯ ಚಿತ್ರರಂಗವೇ ಕನ್ನಡ ಚಿತ್ರರಂಗದ ಕುರಿತಂತೆ ಎದ್ದುನಿಂತು ಹೊ’ಡೆಯುವಂತೆ ಮಾಡುತ್ತದೆ.

kgf2 4 | ಕೆಜಿಎಫ್-2 ಕಲಾವಿದರಿಗೆ ಚಿತ್ರತಂಡ ನೀಡಿದ ಸಂಭಾವನೆ ಎಷ್ಟು ಗೊತ್ತಾ??ಪ್ರಶಾಂತ್ ನೀಲ್ ರವರಿಗೆ ಸಿಕ್ಕಿರುವ ಸಂಭಾವನೆ ಕನ್ನಡದ ಸ್ಟಾರ್ ನಟರಿಗೆ ಕೂಡ ಸಿಗೋದು ಕಷ್ಟ?? ಎಷ್ಟು ಗೊತ್ತೇ??
ಕೆಜಿಎಫ್-2 ಕಲಾವಿದರಿಗೆ ಚಿತ್ರತಂಡ ನೀಡಿದ ಸಂಭಾವನೆ ಎಷ್ಟು ಗೊತ್ತಾ??ಪ್ರಶಾಂತ್ ನೀಲ್ ರವರಿಗೆ ಸಿಕ್ಕಿರುವ ಸಂಭಾವನೆ ಕನ್ನಡದ ಸ್ಟಾರ್ ನಟರಿಗೆ ಕೂಡ ಸಿಗೋದು ಕಷ್ಟ?? ಎಷ್ಟು ಗೊತ್ತೇ?? 3

ಈ ಮಾತನ್ನು ಪ್ರತಿಯೊಬ್ಬ ಕನ್ನಡಿಗರೂ ಕೂಡ ಒಪ್ಪಿಕೊಳ್ಳಬೇಕಾದದ್ದೆ. ಸದ್ಯಕ್ಕೆ ಈಗ ಕೆಜಿಎಫ್ ಚಾಪ್ಟರ್ 2 ಜನಪ್ರಿಯತೆಯನ್ನು ವುದು ಭಾರತೀಯ ಚಿತ್ರರಂಗದ ಎಲ್ಲಾ ಚಿತ್ರಗಳಿಗಿಂತ ಹೆಚ್ಚಾಗಿ ಸದ್ದು ಮಾಡುತ್ತಿದೆ. ಕೆಲವೊಂದು ಸಮೀಕ್ಷೆಯ ಪ್ರಕಾರ ಬಾಹುಬಲಿ 2ಕ್ಕಿಂತ ಹೆಚ್ಚಾಗಿ ಕೆಜಿಎಫ್ ಚಾಪ್ಟರ್ 2 ದೊಡ್ಡಮಟ್ಟದ ನಿರೀಕ್ಷೆಯನ್ನು ಪ್ರೇಕ್ಷಕರಲ್ಲಿ ಹೊಂದಿದೆ ಎಂಬುದಾಗಿ ತಿಳಿದುಬಂದಿದೆ. ಇದಕ್ಕೆ ಪೂರಕವೆಂಬಂತೆ ಚಿತ್ರದ ಟ್ರೈಲರ್ ಕೂಡ ಬಿಡುಗಡೆಯಾಗಿದ್ದು ನೂರಾರು ಮಿಲಿಯನ್ ವೀಕ್ಷಣೆಗಳನ್ನು ಯೂಟ್ಯೂಬ್ನಲ್ಲಿ ಪಡೆದು ಬಾಹುಬಲಿಯ ದಾಖಲೆಗಳನ್ನು ಧೂ’ಳಿಪಟ ಮಾಡಿದೆ.

ಚಿತ್ರ ಇದೇ ಏಪ್ರಿಲ್ 14ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬರೋಬ್ಬರಿ ಎಂಟು ಸಾವಿರಕ್ಕೂ ಅಧಿಕ ಪರದೆಗಳ ಮೇಲೆ ಬಿಡುಗಡೆಯಾಗುವುದು ನಿಶ್ಚಯವಾಗಿದೆ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಭಾರತೀಯ ಚಿತ್ರರಂಗದ ಪ್ರಮುಖ ಕಲಾವಿದರನ್ನು ಕೆಜಿಎಫ್ ಚಾಪ್ಟರ್ 2 ರಲ್ಲಿ ಆಯ್ಕೆ ಮಾಡಿದ್ದು ಚಿತ್ರದ ಕುರಿತಂತೆ ಇನ್ನಷ್ಟು ನಿರೀಕ್ಷೆಯನ್ನು ಹೆಚ್ಚಿಸಿದೆ. ಹಾಗಿದ್ದರೆ ಈ ಕಲಾವಿದರಿಗೆ ಎಷ್ಟು ಸಂಭಾವನೆ ಸಿಕ್ಕಿದೆ ಎಂಬುದನ್ನು ತಿಳಿಯೋಣ ಬನ್ನಿ.

ಮೊದಲಿಗೆ ಚಿತ್ರದ ನಾಯಕ ನಟ ರಾಕಿಂಗ್ ಸ್ಟಾರ್ ಯಶ್ ಅವರ ಕುರಿತಂತೆ ತಿಳಿಯುವುದಾದರೆ ಬರೋಬ್ಬರಿ 25 ರಿಂದ 27 ಕೋಟಿ ರೂಪಾಯಿ ಸಂಭಾವನೆ ಪಡೆದಿರಬಹುದು ಎನ್ನುವ ದೃಢೀಕರಣ ಸಿಕ್ಕಿದೆ. ಈ ಸಂಭಾವನೆ ಖಂಡಿತವಾಗಿ ಒಂದೊಳ್ಳೆ ಸಿನಿಮಾವನ್ನೇ ಮಾಡಬಹುದು. ಈ ಚಿತ್ರದ ನಂತರ ರಾಕಿಂಗ್ ಸ್ಟಾರ್ ಯಶ್ ರವರ ಮಾರುಕಟ್ಟೆ ಕೂಡ ದೊಡ್ಡದಾಗಲಿದೆ. ರಾಕಿಂಗ್ ಸ್ಟಾರ್ ಯಶ್ ರವರ ಸಂಭಾವನೆ ಇಷ್ಟು ಮಟ್ಟಕ್ಕೆ ಸದ್ದು ಮಾಡುತ್ತಿದೆ ಎಂದರೆ ಇನ್ನು ಚಿತ್ರದ ಕರ್ತೃ ಅಂದ್ರೆ ಸೃಷ್ಟಿಕರ್ತ ಪ್ರಶಾಂತ್ ನೀಲ್ ರವರ ಸಂಭಾವನೆ ಕೇಳಿದರೆ ನೀವು ಕೂಡ ಸುಸ್ತಾಗುವುದು ರಲ್ಲಿ ಯಾವುದೇ ಅನುಮಾನವಿಲ್ಲ. ಹೌದು ನಿರ್ದೇಶಕ ಪ್ರಶಾಂತ್ ನೀಲ್ ಅವರು ಬರೋಬ್ಬರಿ 15 ರಿಂದ 20 ಕೋಟಿ ರೂಪಾಯಿ ಸಂಭಾವನೆ ಪಡೆದಿರಬಹುದು ಎನ್ನುವುದಾಗಿ ತಿಳಿದುಬಂದಿದೆ.

kgf2 srinidhi shetty | ಕೆಜಿಎಫ್-2 ಕಲಾವಿದರಿಗೆ ಚಿತ್ರತಂಡ ನೀಡಿದ ಸಂಭಾವನೆ ಎಷ್ಟು ಗೊತ್ತಾ??ಪ್ರಶಾಂತ್ ನೀಲ್ ರವರಿಗೆ ಸಿಕ್ಕಿರುವ ಸಂಭಾವನೆ ಕನ್ನಡದ ಸ್ಟಾರ್ ನಟರಿಗೆ ಕೂಡ ಸಿಗೋದು ಕಷ್ಟ?? ಎಷ್ಟು ಗೊತ್ತೇ??
ಕೆಜಿಎಫ್-2 ಕಲಾವಿದರಿಗೆ ಚಿತ್ರತಂಡ ನೀಡಿದ ಸಂಭಾವನೆ ಎಷ್ಟು ಗೊತ್ತಾ??ಪ್ರಶಾಂತ್ ನೀಲ್ ರವರಿಗೆ ಸಿಕ್ಕಿರುವ ಸಂಭಾವನೆ ಕನ್ನಡದ ಸ್ಟಾರ್ ನಟರಿಗೆ ಕೂಡ ಸಿಗೋದು ಕಷ್ಟ?? ಎಷ್ಟು ಗೊತ್ತೇ?? 4

ಚಂದುಳ್ಳಿ ಬೆಡಗಿ ಆಗಿರುವ ನಾಯಕನಟಿ ಶ್ರೀನಿಧಿ ಶೆಟ್ಟಿ ಅವರು ಕೂಡ 3ರಿಂದ 4 ಕೋಟಿ ರೂಪಾಯಿ ಸಂಭಾವನೆ ಪಡೆದುಕೊಂಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಇವರ ಸಂಭಾವನೆ ಇಷ್ಟು ಜಾಸ್ತಿ ಆಗುವುದಕ್ಕೆ ಕಾರಣ ಶ್ರೀನಿಧಿ ಶೆಟ್ಟಿ ಅವರು ಈಗಾಗಲೇ ಹಲವಾರು ಬಹುಭಾಷಾ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ‌. ಹಲವಾರು ವರ್ಷಗಳ ಹಿಂದೆ ಮಸ್ತು ಮಸ್ತು ಹುಡುಗಿ ಬಂದ್ಲು ಹಾಡಿಗೆ ಸೊಂಟ ಬಳುಕಿಸಿದ್ದ ರವೀನ ತಂಡನ್ ಕೆಜಿಎಫ್ ಚಾಪ್ಟರ್ 2 ಚಿತ್ರಕ್ಕಾಗಿ ಒಂದರಿಂದ ಎರಡು ಕೋಟಿ ರೂಪಾಯಿ ಸಂಭಾವನೆ ಪಡೆದುಕೊಂಡಿದ್ದಾರೆ.

ಬಾಲಿವುಡ್ ಚಿತ್ರರಂಗದ ಖ್ಯಾತ ನಟ ಹಾಗೂ ಕೆಜಿಎಫ್ ಚಾಪ್ಟರ್ 2 ಚಿತ್ರದಲ್ಲಿ ರಾಕಿ ಭಾಯ್ ನಿಂದ ನ ರಾಶಿಯನ್ನು ಕಿತ್ತುಕೊಳ್ಳಲು ಬರುತ್ತಿರುವ ಅಧೀರನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸಂಜಯ್ ದತ್ ಅವರಿಗೆ 9ರಿಂದ 10 ಕೋಟಿ ರೂಪಾಯಿ ಸಂಭಾವನೆ ನೀಡಿದ್ದಾರೆ. ನಿರೂಪಕಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಮಾಳವಿಕ ಅವಿನಾಶ್ ರವರು ಬರೋಬ್ಬರಿ 60 ರಿಂದ 62 ಲಕ್ಷ ರೂಪಾಯಿ ಸಂಭಾವನೆ ಪಡೆದಿರುವುದಾಗಿ ಕೇಳಿಬಂದಿದೆ. ಬಹುಭಾಷಾ ತಾರೆ ಆಗಿರುವ ಪ್ರಕಾಶ್ ರೈ ರವರಿಗೆ 80ರಿಂದ 82 ಲಕ್ಷ ರೂಪಾಯಿ ಸಂಭಾವನೆ ದೊರೆತಿದೆ.

ಈಗಾಗಲೇ ಕೇವಲ ನಟರಿಗೆ ಇಷ್ಟೊಂದು ಸಂಭಾವನೆ ನೀಡಿದೆ ಎಂದರೆ ನಿರ್ಮಾಣ ಸಂಸ್ಥೆ ಬಿಡಿ ಸಿನಿಮಾ ಗೆ ಎಷ್ಟು ಖರ್ಚು ಮಾಡಿರಬಹುದು ಎಂಬುದು ನೀವು ಅಂದಾಜು ಹಾಕಬಹುದಾಗಿದೆ. ಖಂಡಿತವಾಗಿ ಈ ಚಿತ್ರ 100ರಿಂದ 150 ಕೋಟಿಗೂ ಅಧಿಕ ಬಜೆಟ್ನಲ್ಲಿ ಮೂಡಿಬಂದಿರುವುದು ನಿಜ. ಕನ್ನಡಿಗರೇ ಸೇರಿಕೊಂಡು ಮಾಡಿರುವಂತಹ ಈ ಕನ್ನಡಿಗರ ಹೆಮ್ಮೆಯ ಚಿತ್ರವನ್ನು ನಾವೆಲ್ಲ ಕನ್ನಡಿಗರು ಜೊತೆಯಾಗಿ ಮೊದಲ ದಿನವೇ ಮೊದಲ ಶೋ ನೋಡುವ ಮೂಲಕ ಕನ್ನಡ ಚಿತ್ರರಂಗದ ಬೆಳವಣಿಗೆಗೆ ಕಾರಣರಾಗಬೇಕು. ಏಪ್ರಿಲ್ 14 ರಿಂದ ಚಿತ್ರಮಂದಿರಗಳಲ್ಲಿ ತೆರೆಕಾಣಲು ಸಿದ್ಧವಾಗಿರುವ ಕೆಜಿಎಫ್ ಚಾಪ್ಟರ್ ಎರಡನ್ನು ಯಾರೆಲ್ಲ ಮೊದಲ ದಿನ ನೋಡುತ್ತೀರಿ ಎಂಬುದನ್ನು ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ

Comments are closed.