ಆರ್ಸಿಬಿ ತಂಡಕ್ಕೆ ಬ್ಯಾಟಿಂಗ್ ಕೋಚ್ ಆಗುತ್ತಿರುವ ಎಬಿಡಿ, ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತೇ??

ಮೊನ್ನೆಯಷ್ಟೇ ಆರ್ ಸಿ ಬಿ ತಂಡದ ಸ್ಟಾರ್ ಆಟಗಾರ ಎ ಬಿ ಡೆವಿಲಿಯರ್ಸ್ ಬೆಂಗಳೂರಿಗೆ ಬಂದಿಳಿದಿದ್ದಾರೆ. ಈ ಸೀಸನ್ ನಲ್ಲಿ ತಂಡದ ಕೋಚ್ ಆಗಿ ಮುಂದುವರೆಯಲಿರುವ ಅವರು ತಂಡದ ಆಟಗಾರರಿಗೆ ಮಾರ್ಗದರ್ಶನ ನೀಡಲಿದ್ದಾರೆ. ಈ ಸಲ ಅವರು ಬ್ಯಾಟಿಂಗ್ ಕೋಚ್ ಆಗಿ ಮಿಂಚಲಿದ್ದಾರೆ. ಈ ನಡುವೆ ಅವರು ಈ ಸೀಸನ್ ಕೋಚ್ ಆಗಿ ಪಾಲ್ಗೊಳ್ಳಲು ತೆಗೆದುಕೊಂಡಿರುವ ಸಂಭಾವನೆಯ ಬಗ್ಗೆ ಚರ್ಚೆಯಾಗುತ್ತಿದೆ. ದೊಡ್ಡ ಮೊತ್ತದ ಸಂಭಾವನೆಯನ್ನು ಅವರು ಪಡೆದುಕೊಂಡಿದ್ದಾರೆ. ಐಪಿಎಲ್ 2023ರ ಟೂರ್ನಿ ಸಂಬಂಧ ಪಟ್ಟಂತೆ ಚರ್ಚಿಸಲು ಆಟಗಾರರೊಂದಿಗೆ ಮಾತನಾಡಲು ಬಂದಿರುವುದಾಗಿ ಅವರು ಮೊನ್ನೆ ಹೇಳಿಕೊಂಡಿದ್ದಾರೆ. ಈ ಹಿಂದೆ ಅವರು 2023ರ ಐಪಿಎಲ್ ನಲ್ಲಿ ತಾನು ಆರ್‌ಸಿಬಿ ಜೊತೆಗೆ ಇರುವುದಾಗಿ ಹೇಳಿಕೊಂಡಿದ್ದರು ಆದರೆ ಆಟಗಾರನಾಗಿ ಇರುವುದಿಲ್ಲ ಎಂದು ಸಹ ಹೇಳಿ ನಿರಾಸೆ ಮೂಡಿಸಿದ್ದರು. ನವೆಂಬರ್ 15ರೊಳಗೆ ಆಟಗಾರರನ್ನು ಅಂತಿಮಗೊಳಿಸಲು ಕೊನೆಯ ದಿನಾಂಕವಾಗಿದೆ. ಐಪಿಎಲ್ ಮಿನಿ ಹರಾಜಿಗೆ ಮೊದಲು ಅವರು ತಂಡವನ್ನು ಬಲಗೊಳಿಸಲಿದ್ದಾರೆ.

ಬೆಂಗಳೂರಿಗೆ ಅವರು ಆಗಮಿಸಿರುವ ವಿಡಿಯೋ ಆರ್‌ಸಿಬಿ ಟ್ವಿಟ್ಟರ್ ಖಾತೆಯಲ್ಲಿ ವೈರಲ್ ಆಗಿತ್ತು. ತಂಡದಲ್ಲಿ ಕೆಲವು ಮಹತ್ವದ ಬದಲಾವಣೆಗಳನ್ನು ಮಾಡುವ ಕುರಿತು ಚರ್ಚೆ ಮಾಡಲು ಎಬಿಡಿ ಅವರನ್ನು ಕರೆಸಿಕೊಳ್ಳಲಾಗಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಈ ವೇಳೆ ಅನೇಕ ಸ್ಥಳೀಯ ಆಟಗಾರರಿಗೆ ಅವಕಾಶ ಒದಗಿ ಬರಲಿದ್ದು, ಯಾವ ಆಟಗಾರರಿಗೆ ಬಿಡುಗಡೆ ದೊರೆಯಲಿದೆ ಎನ್ನುವುದು ಕೂಡ ಕುತೂಹಲ ಮೂಡಿಸಿದೆ. ದಕ್ಷಿಣ ಆಫ್ರಿಕಾದ ಸೂಪರ್ ಸ್ಟಾರ್ ಕ್ರಿಕೆಟರ್ ಎಬಿಡಿ ಅವರು ಆರ್‌ಸಿಬಿ ತಂಡದಲ್ಲಿ ಬ್ಯಾಟಿಂಗ್ ಕೋಚ್ ಪಾತ್ರವನ್ನು ನಿಭಾಯಿಸಲಿದ್ದಾರೆ. ಒಟ್ಟಿನಲ್ಲಿ ಅವರು ಮೈದಾನಕ್ಕಿಳಿದು ಆಡುವುದಿಲ್ಲ. ಎಬಿಡಿ ಆಗಮನ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸ ತಂದಿದೆ. ಕಳೆದ ಐಪಿಎಲ್ ನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಕ್ವಾಲಿಫಿಯರ್ – 2 ಪಂದ್ಯದಲ್ಲಿ ಆರ್ ಸಿ ಬಿ ಸೋತಿತ್ತು. ಹೀಗಾಗಿ ಕಪ್ ಗೆಲ್ಲುವ ಕನಸು ಇಂದಿಗೂ ಕನಸಾಗಿಯೇ ಉಳಿದಿದೆ. ಹೀಗಾಗಿ ಈ ಬಾರಿಯ ಐಪಿಎಲ್ ನಲ್ಲಿ ತಂಡವನ್ನು ಗೆಲ್ಲಿಸುವ ಉದ್ದೇಶದಿಂದ ಎಬಿಡಿ ತಂಡಕ್ಕೆ ಮಾರ್ಗದರ್ಶನ ನೀಡಲಿದ್ದಾರೆ.

ad rcb | ಆರ್ಸಿಬಿ ತಂಡಕ್ಕೆ ಬ್ಯಾಟಿಂಗ್ ಕೋಚ್ ಆಗುತ್ತಿರುವ ಎಬಿಡಿ, ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತೇ??
ಆರ್ಸಿಬಿ ತಂಡಕ್ಕೆ ಬ್ಯಾಟಿಂಗ್ ಕೋಚ್ ಆಗುತ್ತಿರುವ ಎಬಿಡಿ, ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತೇ?? 2

ಬ್ಯಾಟಿಂಗ್ ವಿಭಾಗದಲ್ಲಿ ಎಬಿಡಿ ಕೆಲಸ ಮಾಡಲಿದ್ದಾರೆ. ಅವರು ತಂಡದಲ್ಲಿ ಬ್ಯಾಟಿಂಗ್ ಮಾರ್ಗದರ್ಶಕರಾಗಿ ಪಾತ್ರ ನಿರ್ವಹಿಸುವರು. ಅವರ ಮಾರ್ಗದರ್ಶನ ಸಾಕಷ್ಟು ಯುವ ಆಟಗಾರರಿಗೆ ಉತ್ತೇಜನ ನೀಡುವುದರ ಜೊತೆಗೆ ತಂಡವು ಗೆಲುವಿನ ಕಡೆಗೆ ಗಮನ ಹರಿಸುವುದರಲ್ಲಿ ಸಹಾಯಕ ಆಗಲಿದೆ. ಬ್ಯಾಟಿಂಗ್ ಕೋಚ್ ಆಗಿ ಕಾಣಿಸಿಕೊಂಡಿರುವ ಎಬಿಡಿ ಈ ಸೀಸನ್ ಅನ್ನು ಗೆಲ್ಲುವುದಕ್ಕಾಗಿ ವಿವಿಧ ತಂತ್ರಗಳನ್ನು ರೂಪಿಸುತ್ತಿದ್ದಾರೆ. ಅಂದ ಹಾಗೆ ಈ ಸೀಸನ್ ನ ಕೋಚ್ ಆಗಿ ಮುಂದುವರೆಯಲು ಅವರು ತೆಗೆದುಕೊಳ್ಳುತ್ತಿರುವ ಸಂಭಾವನೆ ನಾಲ್ಕು ಕೋಟಿ ರೂಪಾಯಿ. ಹೌದು ಒಂದು ಸೀಸನ್ ನಲ್ಲಿ ಅವರು ಬ್ಯಾಟಿಂಗ್ ಕೋಚ್ ಆಗಿ ಮಾರ್ಗದರ್ಶನ ನೀಡಲು, ಆಟಗಾರರಿಗೆ ಮಾರ್ಗದರ್ಶನ ನೀಡಲು ಅವರು ಬರೋಬ್ಬರಿ ನಾಲ್ಕು ಕೋಟಿ ರೂಪಾಯಿ ಸಂಭಾವನೆಯನ್ನು ಪಡೆಯುತ್ತಿದ್ದಾರೆ.

Comments are closed.