ಡಿ ಬಾಸ್, ಟಾಪ್ ಕಲಾವಿದರ ಪ್ರಮೋಷನ್, 100 ಕೋಟಿ ಬಜೆಟ್ ಹಾಕಿದರೂ, ಬನಾರಸ್ ಮಾಡಿದ ಚಿಲ್ಲರೆ ಕಲೆಕ್ಷನ್ ಎಷ್ಟು ಗೊತ್ತೇ??

ಮಾಜಿ ಸಚಿವ ಜಮೀರ್ ಅಹಮದ್ ಅವರ ಪುತ್ರನ ಸಿನಿಮಾ ಬನಾರಸ್ ನೆನ್ನೆ ನವೆಂಬರ್ 4ರಂದು ಬಿಡುಗಡೆಯಾಗಿದೆ. ಜಯತೀರ್ಥ ಅವರು ಈ ಚಿತ್ರ ನಿರ್ದೇಶಿಸಿದ್ದಾರೆ. ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ಈ ಚಿತ್ರ ಹೇಳಿಕೊಳ್ಳುವಂತಹ ಸದ್ದೇನು ಮಾಡಿಲ್ಲ. ಮೊದಲ ದಿನವೇ ಅದೆಷ್ಟೋ ಚಿತ್ರಮಂದಿರಗಳು ಜನರಿಲ್ಲದೆ ಖಾಲಿಯಾಗಿದ್ದವು. ಚಿತ್ರಕ್ಕೆ ಕೆಲವು ಕಡೆ ಜನರು ಒಳ್ಳೆಯ ಪ್ರತಿಕ್ರಿಯೆ ನೀಡುತ್ತಿದ್ದರೆ ಇನ್ನೂ ಬೆಂಗಳೂರಿನ ಸಾಕಷ್ಟು ಕಡೆ ಈ ಚಿತ್ರವನ್ನು ನೋಡಲು ಜನರೇ ಇಲ್ಲ. ಚಿತ್ರದ ಕುರಿತಾಗಿ ಮಿಶ್ರ ಪ್ರತಿಕ್ರಿಯೆಗಳು ಕೇಳಿ ಬರುತ್ತಿವೆ.

ಸಾಮಾಜಿಕ ಜಾಲತಾಣಗಳಲ್ಲಿಯೂ ಕೂಡ ಚಿತ್ರದ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತವೆ. ಸಾಕಷ್ಟು ಕಡೆ ಚಿತ್ರಕ್ಕೆ ಕೇವಲ ಮೂರು ಸ್ಟಾರ್ ನೀಡಲಾಗಿದೆ. ಬೆಂಗಳೂರಿನಲ್ಲೇ ಸಾಕಷ್ಟು ಚಿತ್ರಮಂದಿರಗಳಲ್ಲಿ ಚಿತ್ರದ ಬಗ್ಗೆ ಒಳ್ಳೆಯ ಪ್ರತಿಕ್ರಿಯೆಗಳು ವ್ಯಕ್ತವಾಗಿಲ್ಲ. ಬುಕ್ ಮೈ ಶೋನಲ್ಲೂ ಕೂಡ ಇದೇ ರೀತಿಯ ಮಿಶ್ರ ಪ್ರತಿಕ್ರಿಯೆಗಳು ಮುಂದುವರಿದಿವೆ. ಚಿತ್ರದ ಬಿಡುಗಡೆಗು ಮೊದಲು ಅದ್ದೂರಿಯಾಗಿ ಪ್ರೀ ರಿಲೀಸ್ ಈವೆಂಟ್ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಜಮೀರ್ ಅಹಮದ್ ಅವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರನ್ನು ಆಹ್ವಾನಿಸಿದ್ದರು. ಇದರ ಹಿಂದಿನ ದಿನ ಗಂಧದಗುಡಿ ಕಾರ್ಯಕ್ರಮಕ್ಕೆ ಶೂಟಿಂಗ್ ನೆಪ ಹೇಳಿ ಗೈರಾಗಿದ್ದ ನಟ ದರ್ಶನ್ ಈ ಕಾರ್ಯಕ್ರಮಕ್ಕೆ ಮಾತ್ರ ಹಾಜರಿಯಾಗಿದ್ದರು.

banaras col | ಡಿ ಬಾಸ್, ಟಾಪ್ ಕಲಾವಿದರ ಪ್ರಮೋಷನ್, 100 ಕೋಟಿ ಬಜೆಟ್ ಹಾಕಿದರೂ, ಬನಾರಸ್ ಮಾಡಿದ ಚಿಲ್ಲರೆ ಕಲೆಕ್ಷನ್ ಎಷ್ಟು ಗೊತ್ತೇ??
ಡಿ ಬಾಸ್, ಟಾಪ್ ಕಲಾವಿದರ ಪ್ರಮೋಷನ್, 100 ಕೋಟಿ ಬಜೆಟ್ ಹಾಕಿದರೂ, ಬನಾರಸ್ ಮಾಡಿದ ಚಿಲ್ಲರೆ ಕಲೆಕ್ಷನ್ ಎಷ್ಟು ಗೊತ್ತೇ?? 2

ಈ ಸಿನಿಮಾ ದೊಡ್ಡ ಸದ್ದು ಮಾಡಲಿದೆ ಎಂದೆಲ್ಲ ಭಾಗಿಯಾಗಿದ್ದ ಎಲ್ಲ ಅತಿಥಿಗಳು ನಟರು ಹೇಳಿದ್ದರು. “ಈ ಚಿತ್ರವನ್ನು ನಾನು ಈಗಾಗಲೇ ನೋಡಿದ್ದೇನೆ, ನನಗೆ ಈ ಚಿತ್ರ ಬಹಳ ಇಷ್ಟವಾಯಿತು. ಹಾಗಾಗಿಯೇ ನಾನು ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ” ಎಂದೆಲ್ಲ ಅಂದು ನಟ ದರ್ಶನ್ ಹೇಳಿದ್ದರು. ಆದರೆ ಇದೀಗ ತೆರೆಕಂಡಿರುವ ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆಗಳು ಕಂಡುಬರುತ್ತಿವೆ. ಇನ್ನು ಚಿತ್ರ ಮೊದಲ ದಿನ ಮೂರು ಕೋಟಿ ಕಲೆಕ್ಷನ್ ಮಾಡಿದೆ ಎಂಬುದು ತಿಳಿದು ಬಂದಿದೆ. ಅಂತ ದೊಡ್ಡ ಮಟ್ಟದ ಒಳ್ಳೆಯ ರಿವ್ಯೂ ಚಿತ್ರಕ್ಕೆ ಕೇಳಿ ಬರುತ್ತಿಲ್ಲ. ಆದರೆ ಚಿತ್ರತಂಡ ಇನ್ನು ಮುಂದೆ ಚಿತ್ರ ಒಳ್ಳೆಯ ಪ್ರದರ್ಶನ ಕಾಣಲಿದೆ ಎನ್ನುವ ನಿರೀಕ್ಷೆಯಲ್ಲಿ ಇದ್ದೇವೆ ಎಂದಿದ್ದಾರೆ. ಜನರು ನಮ್ಮ ಚಿತ್ರವನ್ನು ಖಂಡಿತ ನೋಡುತ್ತಾರೆ ಎನ್ನುವ ಭರವಸೆಯ ಮಾತುಗಳನ್ನು ಆಡಿದ್ದಾರೆ. ಆದರೆ ಬಾಯ್ ಕೋಟ್ ಕೂಗು ಜೋರಾಗಿ ಕೇಳಿ ಬರುತ್ತಿರುವ ಕಾರಣ, ಸಿನಿಮಾ ನೋಡುವುದು ಅನುಮಾನವೇ ಸರಿ.

Comments are closed.