ಜ್ಯೋತಿಷ್ಯ ಶಾಸ್ತ್ರ: ಈ ರಾಶಿಗಳಿಗೆ ದೀಪಾವಳಿಯ ಸಮಯದಲ್ಲಿ ಅದೃಷ್ಟದ ಬಾಗಿಲು ತೆರೆಯಲಿದೆ ! ರಾಶಿ ಫಲಾಫಲಗಳನ್ನು ತಿಳಿಯಿರಿ.

ಹಿಂದೂ ಪುರಾಣಗಳ ಪ್ರಕಾರ ದೀಪಾವಳಿ ತಿಂಗಳನ್ನು ಅದೃಷ್ಟದ ತಿಂಗಳು ಎಂದು ಕರೆಯಲಾಗುತ್ತದೆ. ಆರ್ಥಿಕವಾಗಿ ಈ ತಿಂಗಳು ಬಹಳ ಶ್ರೇಷ್ಠ ಎನಿಸಿದೆ. ದೀಪಾವಳಿ ಸಂದರ್ಭದಲ್ಲಿ ಹಲವಾರು ವ್ಯಾಪಾರಿಗಳು ತಮ್ಮ ಅಂಗಡಿಗಳಿಗೆ ಪೂಜೆ ಮಾಡುವ ಮೂಲಕ ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗುತ್ತಾರೆ. ದೀಪಾವಳಿ ತಿಂಗಳಿನಲ್ಲಿ ತುಳಸಿ ಹಾಗೂ ಲಕ್ಷ್ಮೀ ದೇವಿಗೆ ವಿಶೇಷ ಪೂಜೆಗಳು ಕೂಡ ನಡೆಯುತ್ತವೆ. ಆದ ಕಾರಣದಿಂದ ದೀಪಾವಳಿ ತಿಂಗಳನ್ನು ಆರ್ಥಿಕವಾಗಿ ಬಹಳ ವಿಶೇಷ ಎಂದು ಪರಿಗಣಿಸಲಾಗುತ್ತದೆ. ಇನ್ನು ಈ ಬಾರಿಯೂ ಪ್ರತಿವರ್ಷದಂತೆ ದೀಪಾವಳಿ ತಿಂಗಳಿನಲ್ಲಿ ವಿಶೇಷವಾಗಿ 5 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆಯಲಿದೆ. ಇಷ್ಟು ದಿವಸ ನಿಮ್ಮ ಜೀವನದಲ್ಲಿ ಕಂಡ ಏರಿಳಿತಗಳು ಎಲ್ಲವೂ ದೂರವಾಗಿ ನೀವು ಸುಖಪಡುವ ಸಂದರ್ಭ ಇದೀಗ ಒದಗಿಬಂದಿದೆ. ಬನ್ನಿ ಅಷ್ಟಕ್ಕೂ ಆ ರಾಶಿಗಳು ಯಾವುವು ಹಾಗೂ ಯಾವ ರೀತಿ ಅದೃಷ್ಟದ ಬಾಗಿಲು ತೆರೆಯುತ್ತದೆ ಎಂಬುದನ್ನು ತಿಳಿಸಿಕೊಡುತ್ತೇವೆ.

ಮೊದಲನೆಯದಾಗಿ ಮೇಷ ರಾಶಿ, ಈ ತಿಂಗಳಿನಲ್ಲಿ ಆರಂಭವಾಗುವ ದೀಪಾವಳಿ ನಿಮಗೆ ಅದೃಷ್ಟದ ಬಾಗಿಲನ್ನು ತೆರೆಯುತ್ತದೆ. ನಿಮ್ಮ ಉದ್ಯೋಗ ಕ್ಷೇತ್ರದಲ್ಲಿ ನಿಮಗೆ ಹೊಸ ಹೊಸ ಅವಕಾಶಗಳು ಹುಡುಕಿಕೊಂಡು ಬರಲಿವೆ ಹಾಗೂ ನಿಮ್ಮ ಮೇಲಿನ ಅಧಿಕಾರಿಗಳು ಅಥವಾ ಮಾಲೀಕರು ನಿಮಗೆ ಹೆಚ್ಚಿನ ಜವಾಬ್ದಾರಿಗಳನ್ನು ನೀಡುತ್ತಾರೆ. ನೀವು ಎಲ್ಲಾ ಜವಾಬ್ದಾರಿಗಳನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿದ್ದೀರೀ, ಆದ ಕಾರಣದಿಂದ ನಿಮ್ಮ ಸಾಧನೆಗೆ ಅಕ್ಷರಸಹ ಎಲ್ಲರೂ ಫಿದಾ ಆಗುತ್ತಾರೆ. ಇನ್ನು ನೀವು ಈ ಸಮಯದಲ್ಲಿ ಮಾರ್ಗದರ್ಶಕರಾಗಿ ಬಡ್ತಿ ಪಡೆಯುವ ಸಾಧ್ಯತೆಗಳಿವೆ. ನಿಮ್ಮ ಕೆಲಸಕ್ಕೆ ತಕ್ಕಂತೆ ನಿಮ್ಮ ವೇತನ ಹಾಗೂ ಭಕ್ತಿಗಳಲ್ಲಿ ಹೇರಿಕೆ ಕಂಡುಬರುತ್ತದೆ. ಈ ಸಮಯದಲ್ಲಿ ಉತ್ತಮ ಫಲವನ್ನು ಪಡೆಯಲು ತಾಯಿ ಲಕ್ಷ್ಮೀದೇವಿಗೆ ತಪ್ಪದೇ ಪೂಜೆ ಮಾಡಿ. ಸಾಧ್ಯವಾದರೆ ಬೆಳ್ಳಿ ಅಥವಾ ಕಂಚಿನಿಂದ ಮಾಡಿದ ಲಕ್ಷ್ಮೀದೇವಿಯ ಪ್ರತಿಮೆಯನ್ನು ತಂದು ಪೂಜಿಸುವುದು ಬಹಳ ಉತ್ತಮ.

ಇನ್ನು ಮಿಥುನರಾಶಿ ಜನರ ಕುರಿತು ಮಾತನಾಡುವುದಾದರೆ ಈ ಬಾರಿಯ ದೀಪಾವಳಿ ಅಕ್ಷರಸಹ ನಿಮ್ಮ ಬಾಳಿನಲ್ಲಿ ಹೊಸ ಬೆಳಕನ್ನು ತರಲಿದೆ. ಕೌಟುಂಬಿಕವಾಗಿ ಸಮಯ ಬಹಳ ಉತ್ತಮವಾಗಿದ್ದು ಸಂತೋಷ ನಿಮ್ಮ ಮನೆಯಲ್ಲಿ ಕಾಣಲಿದೆ. ಇನ್ನು ಗ್ರಹಗಳ ಸ್ಥಾನಮಾನಗಳ ಕುರಿತು ಮಾತನಾಡುವುದಾದರೆ ಸೂರ್ಯ ಚಂದ್ರ ಮತ್ತು ಶನಿ ಗ್ರಹಗಳು ನಿಮಗೆ ಬಹಳ ಅನುಕೂಲಕರವಾದ ಸ್ಥಾನಗಳಲ್ಲಿ ಇರುವ ಕಾರಣ ಕೌಟುಂಬಿಕವಾಗಿ ಸಮಯ ಅತ್ಯುತ್ತಮವಾಗಿದೆ. ನಿಮಗೆ ಮಕ್ಕಳಿದ್ದರೆ ನಿಮ್ಮ ಮಕ್ಕಳ ಕಡೆಯಿಂದ ಖಂಡಿತ ಸಂತೋಷದ ಸುದ್ದಿ ಕೇಳಿ ಬರುತ್ತದೆ. ಅಷ್ಟೇ ಅಲ್ಲದೆ ಸಂಬಂಧಿಕರು ಹಾಗೂ ಸ್ನೇಹಿತರು ಕೂಡ ನಿಮಗೆ ಶುಭಸುದ್ದಿ ಗಳನ್ನು ಹೊತ್ತು ತರುತ್ತಾರೆ. ನೀವು ಹಲವಾರು ವರ್ಷಗಳಿಂದ ಕಾಯುತ್ತಿದ್ದ ಶುಭಸುದ್ದಿ ಈ ಸಮಯದಲ್ಲಿ ನಿಮಗೆ ಕೇಳಿಬರುತ್ತದೆ. ಇನ್ನು ದೀಪಾವಳಿಯ ಸಂದರ್ಭದಲ್ಲಿ ಲಕ್ಷ್ಮಿ ಪೂಜೆ ಮಾಡಿ ಸಾಧ್ಯವಾದರೆ ಧನ ದಾನ್ಯಗಳನ್ನು ಅಗತ್ಯವಿರುವ ಜನರಿಗೆ ನಿಮ್ಮ ಕೈಲಾದಷ್ಟು ದಾನ ಮಾಡಿ ಸಿರಿದೇವಿಯ ಕೃಪೆ ಪಡೆಯಬಹುದಾಗಿದೆ.

ಇನ್ನು ಸಿಂಹ ರಾಶಿಯ ಜನರ ಕುರಿತು ಮಾತನಾಡುವುದಾದರೇ, ಈ ಸಂದರ್ಭದಲ್ಲಿ ನಿಮಗೆ ನಿಮ್ಮ ಸ್ನೇಹಿತರು ಅನುಕೂಲಕರವಾಗಿ ನಡೆದುಕೊಳ್ಳಲಿದ್ದಾರೆ. ಅಷ್ಟೇ ಅಲ್ಲದೆ ನಿಮ್ಮ ಪ್ರೀತಿಪಾತ್ರರು ನಿಮಗೆ ಶುಭಸುದ್ದಿ ಗಳನ್ನು ಹೊತ್ತು ತರುತ್ತಾರೆ. ಇನ್ನು ಈ ಸಂದರ್ಭದಲ್ಲಿ ಹಲವಾರು ದಿನಗಳಿಂದ ಉಳಿತಾಯ ಮಾಡಬೇಕು ಎಂದು ಆಲೋಚನೆ ನಡೆಸುತ್ತಿರುವ ನಿಮಗೆ ಖಂಡಿತ ಉಳಿತಾಯ ಮಾಡಲು ಸಾಧ್ಯವಾಗುತ್ತದೆ. ಯಾಕೆಂದರೆ ಹಲವಾರು ಅನಿರೀಕ್ಷಿತ ಸಂದರ್ಭಗಳಿಂದ ನಿಮಗೆ ಹಣ ಬರುತ್ತದೆ. ಈ ಸಂದರ್ಭದಲ್ಲಿ ನಿಮಗೆ ಆತ್ಮವಿಶ್ವಾಸ ಹೆಚ್ಚಾಗಲಿದ್ದು ಇತರರು ನಿಮ್ಮನ್ನು ಒಬ್ಬ ಮಾರ್ಗದರ್ಶಿಯಂತೆ ನೋಡುತ್ತಾರೆ. ಯಾಕೆಂದರೆ ಈ ಸಂದರ್ಭದಲ್ಲಿ ನಿಮ್ಮ ರಾಶಿಗೆ ಗುರು ಗ್ರಹ ಅನುಕೂಲಕರವಾದ ಸ್ಥಾನದಲ್ಲಿದೆ. ಈ ಸಂದರ್ಭದಲ್ಲಿ ನೀವು ಹೆಚ್ಚಿನ ಫಲ ಪಡೆಯಲು ಗೋಮಾತೆಯನ್ನು ಪೂಜೆ ಮಾಡಿ ಹಾಗೂ ಸಾಧ್ಯವಾದರೇ ಬಡವರಿಗೆ ನಿಮ್ಮ ಕೈಲಾದಷ್ಟು ದಾನ ಮಾಡಿ.

ಇನ್ನು ಕನ್ಯಾ ರಾಶಿ ಜನರ ಕುರಿತು ಮಾತನಾಡುವುದಾದರೇ, ಈ ಸಂದರ್ಭದಲ್ಲಿ ನಿಮಗೆ ಗುರು ಮತ್ತು ಶನಿ ಗ್ರಹಗಳ ಬಹಳ ಅನುಕೂಲಕರವಾದ ಸ್ಥಾನದಲ್ಲಿ ಇರುತ್ತವೆ. ಆದ್ದರಿಂದ ಜ್ಞಾನಕ್ಕೆ ಸಂಬಂಧಿಸಿದ ಎಲ್ಲ ಕೆಲಸಗಳು ಯಶಸ್ವಿಯಾಗಿ ನೆರವೇರುತ್ತವೆ. ಅಷ್ಟೇ ಅಲ್ಲದೆ ನಿಮ್ಮ ಕಚೇರಿಗೆ ಸಂಬಂಧಿಸಿದ ವಿಷಯಗಳು ಹಾಗೂ ನಿಮ್ಮ ಕುಟುಂಬಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳು ಬಹಳ ಸುರಕ್ಷಿತ ಹಾಗೂ ಸುಖಕರವಾಗಿ ನೆರವೇರಲಿವೆ. ಈ ಸಂದರ್ಭದಲ್ಲಿ ಅಕ್ಷರಸಹ ನಿಮ್ಮ ಅದೃಷ್ಟದ ಬಾಗಿಲು ತೆರೆಯಲಿ ಎಂದೂ ಮುಂದಿನ ವರ್ಷ ನಿಮ್ಮನ್ನು ಹುಡುಕಿಕೊಂಡು ಹಲವಾರು ಶುಭ ಸುದ್ದಿಗಳು ಕೇಳಿ ಬರಲಿವೆ. ನಿಮಗೆ ಒಂದು ವೇಳೆ ವಿವಾಹವಾಗಿದ್ದರೆ ಸಂತಾನ ಭಾಗ್ಯ, ವಿವಾಹ ಆಗದೇ ಇದ್ದರೆ ಕಂಕಣಭಾಗ್ಯ ಕೂಡಿ ಬರಲಿದೆ. ಇನ್ನು ಒಂದು ವೇಳೆ ನೀವು ನಿರುದ್ಯೋಗಿ ಆಗಿದ್ದರೆ ಉದ್ಯೋಗ ನಿಮ್ಮನ್ನು ಹುಡುಕಿಕೊಂಡು ಬರಲಿದೆ. ಇನ್ನು ದೀಪಾವಳಿಯ ಸಂದರ್ಭದಲ್ಲಿ ತಾಯಿ ಲಕ್ಷ್ಮಿ ದೇವಿಗೆ ಪೂಜೆ ಮಾಡಿ ಶಿವ ಪಂಚಾಕ್ಷರಿ ಮಂತ್ರವನ್ನು ಜಪಿಸುವುದರಿಂದ ನಿಮಗೆ ಹೆಚ್ಚಿನ ಫಲ ಸಿಗುತ್ತದೆ.

ಇನ್ನು ಕುಂಭ ರಾಶಿ ಜನರಿಗೆ ದೀಪಾವಳಿಯ ಸಂದರ್ಭದಲ್ಲಿ ಅದೃಷ್ಟದ ಬಾಗಿಲು ತೆರೆಯಲಿದ್ದು ದೇವರ ಕೃಪೆಯಿಂದ ನಿಮಗೆ ಮುಂದೆ ಎಲ್ಲಾ ಕಾರ್ಯಗಳು ಯಶಸ್ವಿಯಾಗಿ ನೆರವೇರಲಿವೆ. ನೀವು ಶನಿ ಹಾಗೂ ಸೂರ್ಯದೇವನ ಅನುಗ್ರಹ ಸಂಪೂರ್ಣವಾಗಿ ಪಡೆದುಕೊಂಡಿರುವ ಕಾರಣ ನಿಮಗೆ ಇನ್ಯಾವುದೇ ಗ್ರಹಗಳ ಸ್ಥಾನಮಾನವು ತಡೆಯಲು ಸಾಧ್ಯವಿಲ್ಲ. ಆದಕಾರಣ ಈ ಸಂದರ್ಭದಲ್ಲಿ ನೀವು ನಿಮ್ಮ ಜೀವನದಲ್ಲಿ ಉನ್ನತ ಸ್ಥಾನವನ್ನು ಅಲಂಕರಿಸುತ್ತೀರೀ. ಕೇವಲ ಉದ್ಯೋಗ ಕ್ಷೇತ್ರದಲ್ಲಿ ಅಷ್ಟೇ ಅಲ್ಲದೆ ನೀವು ಕೌಟುಂಬಿಕವಾಗಿ ಮಾಡಬೇಕು ಎಂದು ಕೊಂಡಿರುವ ಎಲ್ಲಾ ಕೆಲಸಗಳು ನೀವು ಅಂದುಕೊಂಡಂತೆ ನಡೆಯುತ್ತದೆ. ಇನ್ನೊಂದು ದೀಪಾವಳಿಯ ಸಂದರ್ಭದಲ್ಲಿ ತಾಯಿ ಲಕ್ಷ್ಮಿ ದೇವಿಗೆ ಪೂಜೆ ಸಲ್ಲಿಸಿ, ಗೋಮಾತೆಯನ್ನು ಪೂಜೆ ಮಾಡುವ ಮೂಲಕ ಹೆಚ್ಚಿನ ಫಲ ಪಡೆದುಕೊಳ್ಳಿ. ಇನ್ನು ಸಾಧ್ಯವಾದರೆ ನಿಮ್ಮ ಮನೆಯಲ್ಲಿರುವ ವಾಸ್ತುದೋಷ ಗಳನ್ನು ತೆಗೆದು ಹಾಕಲು ಪ್ರಯತ್ನಿಸಿ.

Comments are closed.