ಬಿಗ್ ನ್ಯೂಸ್: ಇದ್ದಕ್ಕಿದ್ದ ಹಾಗೇ ಬಿಗ್ ಬಾಸ್ ಖ್ಯಾತಿಯ ಸ್ವಾಮೀಜಿಗಳು ಅಪ್ಪು ಸಮಾಧಿಗೆ ಬಂದು ಮಾಡಿದ್ದೇನು ಗೊತ್ತಾ?? ಆಮೇಲೆ ನಡೆದ್ದದೇನು ಗೊತ್ತೇ?

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಇಲ್ಲ ಎನ್ನುವ ಕಹಿ ನೆನಪನ್ನು ಕನಸಿನಲ್ಲಿ ನೆನಪಿಸಿಕೊಳ್ಳುವುದಕ್ಕೆ ಕೂಡ ಮನಸ್ಸು ಹಿಂಜರಿಯುತ್ತಿರುವ ಸಂದರ್ಭ ಪ್ರತಿಯೊಬ್ಬ ಕನ್ನಡಿಗನ ಮನಸ್ಥಿತಿಯಲ್ಲಿ ಕೂಡ ಹುದುಗಿದೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡು ಈಗಾಗಲೆ ಹಲವಾರು ತಿಂಗಳುಗಳು ಕಳೆದಿದ್ದರೂ ಕೂಡ ಕಂಠೀರವ ಸ್ಟುಡಿಯೋದಲ್ಲಿರುವ ಅವರ ಸಮಾಧಿಗೆ ದೇಶವಿದೇಶಗಳಿಂದ ದಿನಕ್ಕೆ ಸಾವಿರಾರು ಅಭಿಮಾನಿಗಳು ಅವರ ದರ್ಶನಕ್ಕಾಗಿ ಬರುತ್ತಿದ್ದಾರೆ‌. ಒಬ್ಬ ನಟನಾಗಿ ಜೀವಂತವಿದ್ದಾಗ ಎಷ್ಟು ಪ್ರೀತಿಯನ್ನು ಪಡೆದುಕೊಳ್ಳುತ್ತಾರೆ ಗೊತ್ತಿಲ್ಲ.

ಆದರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಮರಣದ ನಂತರ ಅವರ ಒಳ್ಳೆಯ ಕಾರ್ಯಗಳ ಕುರಿತು ತಿಳಿದು ಜನರು ಅವರನ್ನು ದೇವರಿಗಿಂತ ಹೆಚ್ಚಾಗಿ ಕಾಣುತ್ತಿದ್ದಾರೆ. ತಾವು ಬದುಕಿದಷ್ಟು ದಿನ ಪರರಿಗೆ ಉಪಕಾರಿಯಾಗಿ ಒಳ್ಳೆಯ ವ್ಯಕ್ತಿತ್ವದ ಮೂಲಕ ಸಾಮಾಜಿಕ ಸಂದೇಶಗಳನ್ನು ನೀಡುವ ಮೂಲಕ ಬಂಗಾರದ ಮನಸ್ಸಿನ ವ್ಯಕ್ತಿತ್ವ ಉಳ್ಳವರಾಗಿದ್ದರು. ಈಗಾಗಲೇ ಪುನೀತ್ ರಾಜಕುಮಾರ್ ರವರ ಸಮಾಧಿಗೆ ಬೇರೆಬೇರೆ ಭಾಷೆಗಳ ಕಲಾವಿದರು ಕೂಡ ಬಂದು ಗೌರವವನ್ನು ಸಲ್ಲಿಸಿ ಹೋಗಿದ್ದಾರೆ.

appu samadhi | ಬಿಗ್ ನ್ಯೂಸ್: ಇದ್ದಕ್ಕಿದ್ದ ಹಾಗೇ ಬಿಗ್ ಬಾಸ್ ಖ್ಯಾತಿಯ ಸ್ವಾಮೀಜಿಗಳು ಅಪ್ಪು ಸಮಾಧಿಗೆ ಬಂದು ಮಾಡಿದ್ದೇನು ಗೊತ್ತಾ?? ಆಮೇಲೆ ನಡೆದ್ದದೇನು ಗೊತ್ತೇ?
ಬಿಗ್ ನ್ಯೂಸ್: ಇದ್ದಕ್ಕಿದ್ದ ಹಾಗೇ ಬಿಗ್ ಬಾಸ್ ಖ್ಯಾತಿಯ ಸ್ವಾಮೀಜಿಗಳು ಅಪ್ಪು ಸಮಾಧಿಗೆ ಬಂದು ಮಾಡಿದ್ದೇನು ಗೊತ್ತಾ?? ಆಮೇಲೆ ನಡೆದ್ದದೇನು ಗೊತ್ತೇ? 2

ಇನ್ನೀಗ ಸುದ್ದಿಯಾಗುತ್ತಿರುವುದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಸಮಾಧಿಗೆ ಬಿಗ್ಬಾಸ್ ಖ್ಯಾತಿಯ ಅಕ್ಕಿ ಮಠದ ಗುರು ಲಿಂಗ ಸ್ವಾಮೀಜಿಗಳು ಆಗಮಿಸಿದ್ದಾರೆ ಅದಕ್ಕೆ ಒಂದು ಮಹತ್ವದ ಕಾರಣವೂ ಕೂಡ ಇದೆ. ಹೌದು ಅಕ್ಕಿ ಮಠದ ಗುರು ಲಿಂಗ ಸ್ವಾಮೀಜಿಗಳು ಈ ಹಿಂದೆ 51000 ಗಿಡಗಳನ್ನು ನೆಡುವ ಕುರಿತಂತೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಹೇಳಿದ್ದರಂತೆ. ಆ ಸಂದರ್ಭದಲ್ಲಿ ಪುನೀತ್ ರಾಜಕುಮಾರ್ ಅವರು ನನಗೆ ಎರಡು ತಿಂಗಳ ಮುಂಚೆ ಹೇಳಬೇಕು ಎನ್ನುವುದಾಗಿ ಕೋರಿಕೊಂಡಿದ್ದರಂತೆ. ಇದೇ ಕಾರಣಕ್ಕಾಗಿ ಅಕ್ಕಿ ಮಠದ ಗುರು ಲಿಂಗ ಸ್ವಾಮೀಜಿಗಳು ಕಾರ್ಯಕ್ರಮದ ಎರಡು ತಿಂಗಳು ಮುಂಚೆಯೇ ಮೊದಲ ಆಹ್ವಾನ ಪತ್ರಿಕೆಯನ್ನು ಅವರ ಸಮಾಧಿಗೆ ಇಟ್ಟು ಬಂದಿದ್ದಾರೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Comments are closed.