ಏಕ್ ಲವ್ ಯಾ ಸಿನಿಮಾ ಭರ್ಜರಿಯಾಗಿ ಗೆದ್ದರೂ ಕೂಡ ಇದ್ದಕ್ಕಿದ್ದ ಹಾಗೆ ಬೇಸರ ವ್ಯಕ್ತ ಪಡಿಸಿದ ಪ್ರೇಮ್, ನಮ್ಮಲ್ಲಿ ಇನ್ನು ಒಗ್ಗಟ್ಟಿಲ್ಲ ಎಂದದ್ದು ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲ ಗೊತ್ತಿರುವ ಹಾಗೆ ಈ ಪ್ರೇಮ್ ರವರು ಹಲವಾರು ವರ್ಷಗಳ ನಂತರ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ಕರುನಾಡ ಚಕ್ರವರ್ತಿ ಶಿವಣ್ಣ ನಟನೆಯ ದಿ ವಿಲನ್ ಚಿತ್ರದ ಮೂಲಕ ನಿರ್ದೇಶಕ ಸ್ಥಾನದಲ್ಲಿ ಕಂಬ್ಯಾಕ್ ಮಾಡಿದ್ದರು. ಆದರೆ ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಕೋಟ್ಯಂತರ ರೂಪಾಯಿ ಗಳಿಸಿದರು ಕೂಡ ಮಿಶ್ರ ಪ್ರತಿಕ್ರಿಯೆ ಯನ್ನು ಪಡೆಯಿತು. ಇದಾದ ನಂತರ ತಮ್ಮ ಪತ್ನಿಯಾಗಿರುವ ರಕ್ಷಿತಾ ರವರ ಸಹೋದರ ನಾಗಿರುವ ರಾಣಾ ರವರಿಗೆ ಸಿನಿಮಾವನ್ನು ನಿರ್ದೇಶನ ಮಾಡುತ್ತಾರೆ. ಅದೇ ಇತ್ತೀಚೆಗೆ ಬಿಡುಗಡೆಯಾಗಿರುವ ಏಕ್ ಲವ್ ಯಾ ಚಿತ್ರ. ಈ ಚಿತ್ರದಲ್ಲಿ ಬಹುತೇಕ ಎಲ್ಲಾ ಹೊಸ ಪ್ರತಿಭೆಗಳ ನಟಿಸಿದ್ದಾರೆ.

ಉದಾಹರಣೆಗೆ ನಾಯಕನಟನಾಗಿ ರಾಣ ಹಾಗೂ ನಾಯಕಿಯಾಗಿ ರೀಶ್ಮಾ ನಾಣಯ್ಯ. ಮೊದಲ ಚಿತ್ರದಲ್ಲೇ ಈ ಪ್ರತಿಭೆಗಳಿಗೆ ಉತ್ತಮ ಪ್ರತಿಕ್ರಿಯೆ ದೊರಕಿದ್ದು ಚಿತ್ರವು ಕೂಡ ಬಾಕ್ಸ್ ಆಫೀಸಲ್ಲಿ ಗೆದ್ದಿದೆ ಎಂಬುದಾಗಿ ಚಿತ್ರತಂಡ ಹೇಳಿಕೊಂಡಿದೆ. ಆದರೆ ಇತ್ತೀಚಿಗಷ್ಟೇ ಸುದ್ದಿಗೋಷ್ಠಿ ನಡೆಸಿರುವ ಚಿತ್ರತಂಡ ಗೆಲುವಿನ ಸಿಹಿಯನ್ನು ಹಂಚಿಕೊಳ್ಳುವುದರ ಜೊತೆಗೆ ಕೆಲವೊಂದು ದುಃಖಕರ ವಿಚಾರವನ್ನು ಹೇಳಿಕೊಂಡಿದೆ. ಅದನ್ನು ನಿರ್ದೇಶಕ ಪ್ರೇಮ್ ಈ ಹಿಂದೆಯೂ ಕೂಡ ಅನುಭವಿಸಿದ್ದು. ಹಾಗಿದ್ದರೆ ಅದೇನೆಂಬುದು ತಿಳಿದುಕೊಳ್ಳೋಣ ಬನ್ನಿ.

ek love ya | ಏಕ್ ಲವ್ ಯಾ ಸಿನಿಮಾ ಭರ್ಜರಿಯಾಗಿ ಗೆದ್ದರೂ ಕೂಡ ಇದ್ದಕ್ಕಿದ್ದ ಹಾಗೆ ಬೇಸರ ವ್ಯಕ್ತ ಪಡಿಸಿದ ಪ್ರೇಮ್, ನಮ್ಮಲ್ಲಿ ಇನ್ನು ಒಗ್ಗಟ್ಟಿಲ್ಲ ಎಂದದ್ದು ಯಾಕೆ ಗೊತ್ತೇ??
ಏಕ್ ಲವ್ ಯಾ ಸಿನಿಮಾ ಭರ್ಜರಿಯಾಗಿ ಗೆದ್ದರೂ ಕೂಡ ಇದ್ದಕ್ಕಿದ್ದ ಹಾಗೆ ಬೇಸರ ವ್ಯಕ್ತ ಪಡಿಸಿದ ಪ್ರೇಮ್, ನಮ್ಮಲ್ಲಿ ಇನ್ನು ಒಗ್ಗಟ್ಟಿಲ್ಲ ಎಂದದ್ದು ಯಾಕೆ ಗೊತ್ತೇ?? 2

ಹೌದು ಏಕ್ ಲವ್ ಯಾ ಚಿತ್ರ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಪೈರಸಿ ಯಾಗಿತ್ತು. ಕೇವಲ ಪೈರಸಿ ಮಾಡುವುದು ಮಾತ್ರವಲ್ಲದೆ ಆ ಪೈರಸಿ ಲಿಂಕನ್ನು ಪೈರಸಿ ಮಾಡಿದವರು ಸ್ವತಹ ಪ್ರೇಮ್ ರವರಿಗೆ ಕಳಿಸಿದ್ದರಂತೆ. ಈ ಕುರಿತಂತೆ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಸರ್ಕಾರ ಯಾವುದೇ ಕ್ರಮ ವನ್ನು ಕೈಗೊಳ್ಳುತ್ತಿಲ್ಲ. ಚಿತ್ರರಂಗದ ದೊಡ್ಡ ದೊಡ್ಡ ಹೆಸರುಗಳು ಕೂಡ ತಮ್ಮ ಕಾರ್ಯದಲ್ಲಿ ನಿರತರಾಗಿದ್ದಾರೆ ಈ ಕುರಿತಂತೆ ಯಾವುದೇ ಮಾತನಾಡುತ್ತಿಲ್ಲ ಎಂಬುದಾಗಿ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಪೈರಸಿಯನ್ನು ನಿಲ್ಲಿಸಬೇಕಾಗಿ ಇರುವುದು ಆದ್ಯ ಕರ್ತವ್ಯವಾಗಿದೆ ಆದರೆ ಅದನ್ನು ಮಾಡಲು ಸಾಧ್ಯವಾಗುತ್ತಿಲ್ಲ ಎಂಬುದಾಗಿ ಪ್ರೇಮ್ ಹಾಗೂ ರಕ್ಷಿತಾ ಇಬ್ಬರೂ ಕೂಡ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Comments are closed.