ಅಪ್ಪು ಕಂಠದಲ್ಲಿ ವಿಷ್ಣು ದಾದ ಅವರ ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು ಹಾಡನ್ನು ನೋಡಿದ್ದೀರಾ?? ಮೊದಲ ಬಾರಿಗೆ ತೋರಿಸ್ತೇವೆ ನೋಡಿ.

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕನ್ನಡ ಚಿತ್ರರಂಗದ ಅಜಾತಶತ್ರು ನಟ ಎಂದರೆ ಖಂಡಿತವಾಗಿಯೂ ತಪ್ಪಾಗಲಾರದು. ಯಾಕೆಂದರೆ ಕನ್ನಡ ಚಿತ್ರರಂಗದ ಪ್ರತಿಯೊಬ್ಬ ನಟರು ಕೂಡ ಅವರನ್ನು ಇಷ್ಟಪಡುತ್ತಿದ್ದರು ಹಾಗೂ ಅವರು ಕೂಡ ಯಾರ ಬಗ್ಗೆಯೂ ಇಲ್ಲಸಲ್ಲದ ಮಾತುಗಳನ್ನು ಆಡುತ್ತಿರಲಿಲ್ಲ. ಕನ್ನಡ ಚಿತ್ರರಂಗದ ನಿಜವಾದ ಜಂಟಲ್ ಮ್ಯಾನ್ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಎನ್ನಬಹುದಾಗಿದೆ. ಪ್ರತಿಯೊಬ್ಬ ನಟರು ಕೂಡ ಪುನೀತ್ ರಾಜಕುಮಾರ್ ಅವರ ಕುರಿತಂತೆ ಈ ವಿಚಾರದಲ್ಲಿ ಹೊಗಳಿ ಮಾತನಾಡುತ್ತಾರೆ.

ಇನ್ನು ನಿಮಗೆಲ್ಲ ತಿಳಿದಿರಬಹುದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ನೆಚ್ಚಿನ ನಟ ಸಾಹಸಸಿಂಹ ವಿಷ್ಣುವರ್ಧನ್ ರವರು ಆಗಿದ್ದರು. ಚಿಕ್ಕವಯಸ್ಸಿನಿಂದಲೂ ಕೂಡ ಅಭಿನಯ ಭಾರ್ಗವ ವಿಷ್ಣುವರ್ಧನ್ ರವರನ್ನು ನೋಡಿಕೊಂಡು ಬೆಳೆದವರು ನಮ್ಮ ಅಪ್ಪು. ಹಲವಾರು ಬಾರಿ ಭೇಟಿಯಾದಾಗಲೂ ಕೂಡ ವಿಷ್ಣುವರ್ಧನ್ ರವರ ಬಳಿ ಈ ಕುರಿತಂತೆ ವಿಚಾರ ವಿನಿಮಯವನ್ನು ಅಪ್ಪು ಮಾಡಿಕೊಳ್ಳುತ್ತಿದ್ದರು. ವಿಷ್ಣುವರ್ಧನ್ ರವರು ಕೂಡ ಕನ್ನಡ ಚಿತ್ರರಂಗದಲ್ಲಿ ಸೌಮ್ಯ ಸ್ವಭಾವದಲ್ಲಿ ಹೆಸರಾದವರು. ಒಂದು ಲೆಕ್ಕದಲ್ಲಿ ಹೇಳುವುದಾದರೆ ವ್ಯಕ್ತಿಗತ ಸ್ವಭಾವದಲ್ಲಿ ಅಪ್ಪು ಹಾಗೂ ವಿಷ್ಣುವರ್ಧನ್ ಇಬ್ಬರೂ ಕೂಡ ಸರಿಸಮಾನರು ಎಂದರೆ ಅತಿಶಯೋಕ್ತಿಯಲ್ಲ.

ಇತ್ತೀಚಿನ ದಿನಗಳಲ್ಲಿ ಅಪ್ಪು ರವರು ವಿಷ್ಣುವರ್ಧನ್ ರವರ ಸಿನಿಮಾದ ಹಾಡೊಂದನ್ನು ಹಾಡಿರುವುದು ಯೂಟ್ಯೂಬ್ನಲ್ಲಿ ವೈರಲ್ ಆಗುತ್ತಿದೆ. ಸಾಹಸಸಿಂಹ ವಿಷ್ಣುವರ್ಧನ್ ರವರ ಸಿನಿಮಾದ ನೀರಬಿಟ್ಟು ನೆಲದ ಮೇಲೆ ದೋಣಿ ಸಾಗದು ಎನ್ನುವ ಹಾಡನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ತಮ್ಮ ಸ್ನೇಹಿತರೊಂದಿಗೆ ಹಾಡಿರುವ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಂಚಲನವನ್ನು ಸೃಷ್ಟಿಸಿದೆ. ನೀವು ಕೂಡ ಈ ಹಾಡನ್ನು ನೋಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ವ್ಯಕ್ತಪಡಿಸಬಹುದಾಗಿದೆ. ತಂದೆಯಂತೆ ಕೇವಲ ನಟನಾಗಿ ಮಾತ್ರವಲ್ಲದೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಗಾಯಕನಾಗಿ ಕೂಡ ಹಲವಾರು ಅಭಿಮಾನಿಗಳನ್ನು ಸಂಪಾದಿಸಿದವರು ಎಂಬುದನ್ನು ನಾವು ಇಲ್ಲಿ ನೆನಪಿಸಿಕೊಳ್ಳಬಹುದು ಆಗಿದೆ.

Comments are closed.