News from ಕನ್ನಡಿಗರು

ಮೊದಲ ಪತ್ನಿಗೆ ವಿಚ್ಚೇದನ ನೀಡಿ, ಅಮಲಾ ರವರನ್ನು ಮದುವೆಯಾದ ಬಳಿಕ ತಬು ರವರನ್ನು ಪ್ರೀತಿ ಮಾಡಿದ್ದ ನಾಗಾರ್ಜುನ ಬಗ್ಗೆ ಪತ್ನಿ ಅಮಲಾ ಹೇಳಿದ್ದೇನು ಗೊತ್ತೇ??

137

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತೆಲುಗು ಚಿತ್ರರಂಗದ ಯಂಗ್ ಅಂಡ್ ಎವರ್ ಗ್ರೀನ್ ನಟ ಅಕ್ಕಿನೇನಿ ನಾಗಾರ್ಜುನ ಅವರ ಬಗ್ಗೆ ಗೊತ್ತಿದೆ. ಕಳೆದ ವರ್ಷವಷ್ಟೇ ಅವರ ಮಗ ನಾಗ ಚೈತನ್ಯ ಹಾಗೂ ಸೊಸೆ ಸಮಂತಾ ಇಬ್ಬರೂ ಕೂಡ ವಿವಾಹ ವಿಚ್ಛೇದನವನ್ನು ಪಡೆದುಕೊಂಡಿದ್ದರು ಎಂಬುದು ನಿಮಗೆ ತಿಳಿದಿರುವ ವಿಚಾರ.

ಇನ್ನು ನಟ ನಾಗಾರ್ಜುನ ಕೂಡ ಒಂದು ಕಾಲದಲ್ಲಿ ತಮ್ಮ ಮೊದಲನೇ ಪತ್ನಿಗೆ ವಿವಾಹ ವಿಚ್ಛೇದನವನ್ನು ನೀಡಿ ಅಮಲಾ ಅವರನ್ನು ಮದುವೆಯಾಗಿದ್ದರು. ಈ ಸಂದರ್ಭದಲ್ಲಿ ಚಿತ್ರರಂಗದಲ್ಲಿ ಅವರ ಬಗ್ಗೆ ಒಂದು ಗಾಸಿಪ್ ಹರಡಿತ್ತು. ನಾಗಾರ್ಜುನ ಹಾಗೂ ನಟಿ ತಬು ಇಬ್ಬರೂ ಕೂಡ ಹಲವಾರು ಸಿನಿಮಾಗಳಲ್ಲಿ ಜೊತೆಯಾಗಿ ಸತತವಾಗಿ ಕಾಣಿಸಿಕೊಂಡಿದ್ದರು. ಹೀಗಾಗಿ ನಾಗಾರ್ಜುನ ಹಾಗೂ ನಟಿ ತಬು ಅವರ ನಡುವೆ ಏನೋ ಇದೆ ಎಂಬುದಾಗಿ ಎಲ್ಲರೂ ಕೂಡ ಮಾತನಾಡಿಕೊಳ್ಳುವಂತೆ ಆಗಿತ್ತು. ಇದು ಕೇವಲ ಚಿತ್ರರಂಗದಲ್ಲಿ ಮಾತ್ರವಲ್ಲದೆ ನಾಗಾರ್ಜುನ ಅವರ ಪತ್ನಿ ಆಗಿರುವ ಅಮಲಾ ಅಕ್ಕಿನೇನಿ ಅವರಿಗೂ ಕೂಡ ತಲುಪಿತ್ತು. ಈ ಬಗ್ಗೆ ಅವರು ಏನು ಹೇಳಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ.

ಇದರ ಬಗ್ಗೆ ಮಾತನಾಡುತ್ತಾ, ಅಮಲ ಅಕ್ಕಿನೇನಿ, ” ತಬು ನನ್ನ ಬೆಸ್ಟ್ ಫ್ರೆಂಡ್. ನಾನು ನನ್ನ ಪತಿ ನಾಗಾರ್ಜುನ ಅವರ ಮೇಲೆ ಇಟ್ಟಿರುವ ಪ್ರೀತಿ ಹಾಗೂ ನಂಬಿಕೆಯನ್ನು ಯಾರೂ ಕೂಡ ತೊಡೆದು ಹಾಕುವುದು ಸಾಧ್ಯವಿಲ್ಲ. ಅವರಿಬ್ಬರ ನಡುವಿನ ವಿಚಾರದ ಬಗ್ಗೆ ನಾನಾಗಲಿ ನನ್ನ ಪತಿಯಾಗಲಿ ಯಾವತ್ತೂ ಕೂಡ ದೇವಸ್ಥಾನದಂತೆ ಪವಿತ್ರವಾಗಿರುವ ಮನೆಯಲ್ಲಿ ಮಾತನಾಡಿಲ್ಲ” ಎಂಬುದಾಗಿ ಹೇಳಿದ್ದಾರೆ. ಈ ಸುದ್ದಿ ಹರಡಿದ್ದಾಗ ನಟಿ ತಬು ಕೂಡ ನಾವಿಬ್ಬರೂ ಕೇವಲ ಉತ್ತಮ ಸ್ನೇಹಿತರಷ್ಟೇ ಎಂಬುದಾಗಿ ಹೇಳಿದ್ದರು.

Leave A Reply

Your email address will not be published.