ಷಾಕಿಂಗ್ ವಿಚಾರ ಬಹಿರಂಗ ಪಡಿಸಿದ ನಿರ್ಮಾಪಕ ಕೆ ಮಂಜು: ಯಶ್ ಮೇಲಿನ ಕೋಪ ನನ್ನ ಮೇಲೆ ಹಾಕಿದ್ರು ಎಂದದ್ದು ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಸದ್ಯದ ಮಟ್ಟಿಗೆ ಕೆಜಿಎಫ್ ಚಿತ್ರದ ನಂತರ ರಾಕಿಂಗ್ ಸ್ಟಾರ್ ಯಶ್ ಅವರ ಜನಪ್ರಿಯತೆ ಎನ್ನುವುದು ಕೇವಲ ಕನ್ನಡದಲ್ಲಿ ಮಾತ್ರವಲ್ಲದೆ ಭಾರತೀಯ ಚಿತ್ರರಂಗದ ಎಲ್ಲೆಡೆ ಬಲಾಢ್ಯವಾಗಿ ಹರಡಿದೆ. ಇನ್ನು ಮುಂದೆ ರಾಕಿಂಗ್ ಸ್ಟಾರ್ ಯಶ್ ಅವರು ಯಾವುದೇ ಭಾಷೆಯಲ್ಲಿ ಸಿನಿಮಾ ಮಾಡಿದರೂ ಕೂಡ ಖಂಡಿತವಾಗಿ ದಾಖಲೆಯ ಮೊತ್ತದ ಬಾಕ್ಸ್ ಆಫೀಸ್ ಕಲೆಕ್ಷನ್ ಆ ಸಿನಿಮಾ ಗಳಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

ಆದರೆ, ಒಂದು ಕಾಲದಲ್ಲಿ ಅವರ ಸಿನಿಮಾವನ್ನು ನಿರ್ಮಾಣ ಮಾಡಿದ್ದ ನಿರ್ಮಾಪಕ ಆಗಿದ್ದ ಕೆ ಮಂಜು ಅವರು ಈ ಹಿಂದೆ ನಡೆದಿರುವ ಘಟನೆ ಒಂದನ್ನು ಸಂದರ್ಶನ ಒಂದರಲ್ಲಿ ಇತ್ತೀಚಿಗಷ್ಟೇ ಮಾತನಾಡಿದ್ದಾರೆ. ಹೌದು ಈ ಘಟನೆ ನಡೆದಿದ್ದು ಸಂತು ಸ್ಟ್ರೈಟ್ ಫಾರ್ವರ್ಡ್ ಸಿನಿಮಾದ ಬಿಡುಗಡೆ ಸಂದರ್ಭದಲ್ಲಿ. ರಾಕಿಂಗ್ ಸ್ಟಾರ್ ಯಶ್ ಹಾಗೂ ಮಾಧ್ಯಮಗಳ ನಡುವೆ ನಡೆದ ಹಗ್ಗ ಜಗ್ಗಾಟದ ಬಗ್ಗೆ ನಿಮಗೆ ನೆನಪಿರಬಹುದು. ಈ ಸಂದರ್ಭವನ್ನು ನೆನಪಿಸಿಕೊಂಡು ಕೆ ಮಂಜು ಅವರು ತನ್ನ ಅನುಭವವನ್ನು ಬಿಚ್ಚಿಡುತ್ತಾರೆ.

k manju yash | ಷಾಕಿಂಗ್ ವಿಚಾರ ಬಹಿರಂಗ ಪಡಿಸಿದ ನಿರ್ಮಾಪಕ ಕೆ ಮಂಜು: ಯಶ್ ಮೇಲಿನ ಕೋಪ ನನ್ನ ಮೇಲೆ ಹಾಕಿದ್ರು ಎಂದದ್ದು ಯಾಕೆ ಗೊತ್ತೇ??
ಷಾಕಿಂಗ್ ವಿಚಾರ ಬಹಿರಂಗ ಪಡಿಸಿದ ನಿರ್ಮಾಪಕ ಕೆ ಮಂಜು: ಯಶ್ ಮೇಲಿನ ಕೋಪ ನನ್ನ ಮೇಲೆ ಹಾಕಿದ್ರು ಎಂದದ್ದು ಯಾಕೆ ಗೊತ್ತೇ?? 2

ಯಶ್ ಅವರ ಮೇಲಿನ ಕೋಪಕ್ಕೆ ಮಾಧ್ಯಮ ಮಿತ್ರರು ತಮ್ಮ ಕಾರ್ಯಕ್ರಮದಲ್ಲಿ ಸಂತು ಸ್ಟ್ರೈಟ್ ಫಾರ್ವರ್ಡ್ ಸಿನಿಮಾ ಖಾಲಿ ಖಾಲಿ ಓಡುತ್ತಿದೆ ಎಂಬುದಾಗಿ ತೋರಿಸುತ್ತಿದ್ದರು. ಇದರಿಂದಾಗಿ ಸಂತು ಸ್ಟ್ರೈಟ್ ಫಾರ್ವರ್ಡ್ ಸಿನಿಮಾ ಇನ್ನು 10 ಕೋಟಿ ಹೆಚ್ಚಿಗೆ ದುಡಿಯಬೇಕಾಗಿತ್ತು ಆದರೆ ಇದೇ ಕಾರಣದಿಂದಾಗಿ ಅಲ್ಲಿ ನನಗೆ ಲಾಸ್ ಆಯಿತು ಆದರೆ ಸಿನಿಮಾ ಮಾತ್ರ ಸೋಲಲಿಲ್ಲ ಎಂಬುದಾಗಿ ಕೆ ಮಂಜು ಅವರು ಈ ವಿಚಾರವನ್ನು ಬಿಚ್ಚಿಡುತ್ತಾರೆ. ಈ ಘಟನೆಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Comments are closed.