News from ಕನ್ನಡಿಗರು

ನಾನು ಮದ್ವೆ ಆದ್ರೇ 60 ವರ್ಷದ ಈ ಅಜ್ಜನನ್ನೇ ಆಗೋದು ಎಂದು ಹಠ ಹಿಡಿದ ಯುವತಿ. ಯಾಕೆ ಗೊತ್ತೇ?? ಕಾರಣ ಏನಂತೆ ಗೊತ್ತೇ??

0 310

ನಮಸ್ಕಾರ ಸ್ನೇಹಿತರೇ ಇತ್ತೀಚಿನ ವರ್ಷಗಳಲ್ಲಿ ಯುವ ಜನತೆಯ ಮನಸ್ಸಿನಲ್ಲಿ ಏನೂ ಮೂಡಿಬರುತ್ತಿದೆಯೋ ಗೊತ್ತಿಲ್ಲ ಹಿಂದೆ ಮುಂದೆ ನೋಡದೆ ಆಕರ್ಷಣೆಗೆ ಒಳಗಾಗಿ ಮದುವೆಯಾಗಿ ನಂತರದ ದಿನಗಳಲ್ಲಿ ಕಷ್ಟ ಪಡುವ ಸಂದರ್ಭಗಳು ಎದುರು ಆಗುತ್ತಿವೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಕಿರುತೆರೆಯ ವಾಹಿನಿಗಳಲ್ಲಿ ಮೂಡಿ ಬರುತ್ತಿರುವ ಜೊತೆ ಜೊತೆಯಲಿ ಹಾಗೂ ಹಿಟ್ಲರ್ ಕಲ್ಯಾಣ ಧಾರವಾಹಿಯ ರೀತಿಯಲ್ಲಿ ತಂದೆ ಹಾಗೂ ತಾತನ ವಯಸ್ಸಿನ ವ್ಯಕ್ತಿಗಳನ್ನು ಮದುವೆ ಆಗುವ ಹುಡುಗಿಯರು ಕೂಡ ಈಗಾಗಲೇ ಈ ಸಮಾಜದಲ್ಲಿ ಇದ್ದಾರೆ.

ಅದೇ ರೀತಿಯ ಒಂದು ಕಥೆಯನ್ನು ನಾವು ಈಗ ಹೇಳಲು ಹೊರಟಿರುವುದು. 60 ವರ್ಷದ ಒಬ್ಬ ವ್ಯಕ್ತಿ ತನ್ನ ಪತ್ನಿಯನ್ನು ಕಳೆದುಕೊಂಡಿರುತ್ತಾನೆ ಹೀಗಾಗಿ ದಂಪತಿಗಳ ಮನೆಗೆ ಆಗಾಗ ಬಂದು ಹೋಗುತ್ತಾನೆ. ಈ ಸಂದರ್ಭದಲ್ಲಿ ಆ ದಂಪತಿಗಳಿಗೆ ಹದಿಹರೆಯದ ಮಗಳು ಕೂಡ ಇರುತ್ತಾಳೆ. ಸ್ವಲ್ಪ ದಿನಗಳ ನಂತರ ತಿಳಿಯುತ್ತದೆ ಆ ಮುದುಕ ಬರುತ್ತಿದ್ದಿದ್ದೆ ಆ ಹದಿಹರೆಯದ ಯುವತಿಯ ಜೊತೆಗೆ ಸಂಬಂಧವನ್ನು ಬೆಳೆಸಲು. ಇದನ್ನು ತಿಳಿದ ಪೋಷಕರು ಇಬ್ಬರನ್ನು ಕೂಡ ಬೇರೆ ಬೇರೆ ಮಾಡಲು ಸಾಕಷ್ಟು ಪ್ರಯತ್ನ ಪಡುತ್ತಾರೆ ಆದರೆ ಆ ಹುಡುಗಿ ಮಾತ್ರ ಅವನನ್ನೇ ಮದುವೆಯಾಗಬೇಕು ಎನ್ನುವುದಾಗಿ ಪಟ್ಟು ಹಿಡಿದು ಕುಳಿತುಕೊಳ್ಳುತ್ತಾಳೆ.

ಕೊನೆಗೆ ದಿಕ್ಕು ತೋಚದೆ ಪೋಷಕರು ಪೊಲೀಸ್ ಠಾಣೆಯ ಮೆಟ್ಟಿಲೇರುತ್ತಾರೆ. ಅಲ್ಲಿ ಮುದುಕ ಆಕೆ ನನ್ನ ಹೆಂಡತಿ ಆಕೆಯನ್ನು ನನ್ನ ಜೊತೆಗೆ ಕಳುಹಿಸಿಕೊಡಿ ಎಂಬುದಾಗಿ ಹೇಳುತ್ತಾನೆ. ಸದ್ಯಕ್ಕೆ ಕೋರ್ಟ್ ಅಂಗಳದಲ್ಲಿರುವ ಈ ಪ್ರಕರಣ ಕೋರ್ಟಿಗೂ ಕೂಡ ನುಂಗಲಾರದ ಕಬ್ಬಿಣದ ಕಡಲೆಯಾಗಿದೆ. ಮುಂದಿನ ದಿನಗಳಲ್ಲಿ ಇದು ಯಾವ ಫಲಿತಾಂಶವನ್ನು ಕಾಣುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

Leave A Reply

Your email address will not be published.