News from ಕನ್ನಡಿಗರು

ಒಂದಲ್ಲ ಎರಡಲ್ಲ ಬರೋಬ್ಬರಿ 9 ಮಕ್ಕಳಾದ ಮೇಲೆ ಮುಸ್ಲಿಂ ದಂಪತಿಗಳು ಮತ್ತೊಮ್ಮೆ ಹಿಂದೂ ಸಂಪ್ರದಾಯದ ಪ್ರಕಾರ ಮದುವೆಯಾಗಿದ್ದು ಯಾಕೆ ಗೊತ್ತೇ??

8

ನಮಸ್ಕಾರ ಸ್ನೇಹಿತರೇ ನಮ್ಮ ಸನಾತನ ಹಿಂದೂ ಸಂಸ್ಕೃತಿ ಅನಾದಿಕಾಲದಿಂದಲೂ ಕೂಡ ಮುಂದುವರೆದುಕೊಂಡು ಬಂದಿರುವ ಸಂಸ್ಕೃತಿ. ಇಲ್ಲಿರುವ ಕಲೆ ಹಾಗೂ ಮಾನವೀಯ ಗುಣಗಳ ಸಂದೇಶ ಸಾರುವಿಕೆಯ ಕಾರಣದಿಂದಲೇ ವಿದೇಶಿಗರು ಕೂಡ ಹಿಂದೂ ಧರ್ಮವನ್ನು ಗೌರವದಿಂದ ಕಾಣುತ್ತಾರೆ. ಸದ್ಯಕ್ಕೆ ಸುದ್ದಿ ಆಗುತ್ತಿರುವುದು ಅಮೆರಿಕ ಮೂಲದ ದಂಪತಿಗಳು ಭಾರತಕ್ಕೆ ಆಗಮಿಸಿ ಈಗ ಹಿಂದೂ ಸಂಸ್ಕೃತಿಯಂತೆ ಮದುವೆ ಆಗಿರುವುದು. ಮದುವೆ ಆಗಿರುವ ಈ ದಂಪತಿಗಳು ಈಗಾಗಲೇ ಒಂಬತ್ತು ಮಕ್ಕಳಿಗೆ ತಂದೆ ತಾಯಿಯಾಗಿದ್ದಾರೆ.

ಭಾರತದ ಪ್ರವಾಸಕ್ಕೆ ಬಂದಿದ್ದಾಗ ಉತ್ತರ ಪ್ರದೇಶದ ಚೌನಪುರದ ತ್ರಿಲೋಚನೆ ಮಹಾದೇವ ದೇವಸ್ಥಾನದಲ್ಲಿ ಮದುವೆ ಆಗುವ ಮೂಲಕ ತಮ್ಮ ಮನದ ಇಚ್ಛೆಯನ್ನು ಪೂರೈಸಿಕೊಂಡಿದ್ದಾರೆ. ಹಿಂದೂ ಸಂಸ್ಕೃತಿಗೆ ಮಾರುಹೋಗಿ ಹಿಂದೂ ಸಂಪ್ರದಾಯದಂತೆ ಮರುಮದುವೆ ಆಗಿರುವ ಜೋಡಿ ಕಿಯಾಮ ದಿನ್ ಖಲೀಫಾ ಹಾಗೂ ಕೇಶಾ ಖಲೀಫಾ ದಂಪತಿಗಳು. ಈಗಾಗಲೇ ಇವರಿಬ್ಬರಿಗೂ ಮದುವೆಯಾಗಿ 18 ವರ್ಷಗಳಾಗಿದ್ದು 9 ಮಕ್ಕಳು ಕೂಡ ಇದೆ ಎಂಬುದಾಗಿ ಸ್ವತಹ ಇವರೇ ಹೇಳಿಕೊಂಡಿದ್ದಾರೆ.

ಭಾರತ ಪ್ರವಾಸದಲ್ಲಿದ್ದ ಈ ಇಬ್ಬರು ದಂಪತಿಗಳು ವಾರಣಾಸಿಯ ದೇವಾಲಯಗಳು ಹಾಗೂ ಇಲ್ಲಿನ ಸಂಸ್ಕೃತಿಯನ್ನು ನೋಡುತ್ತಾ ಹಿಂದೂ ಸಂಸ್ಕೃತಿಗೆ ಸಂಪೂರ್ಣವಾಗಿ ಆಕರ್ಷಿತರಾಗಿದ್ದರು. ಇದಕ್ಕಾಗಿ ಭಾರತೀಯ ಸಂಸ್ಕೃತಿಯಂತೆ ಮತ್ತೆ ಇಬ್ಬರು ಶಾಸ್ತ್ರೋಕ್ತವಾಗಿ ಮದುವೆಯಾಗಿದ್ದಾರೆ ಇದು ಸಾಮಾಜಿಕ ಜಾಲತಾಣಗಳಲ್ಲಿ ಈಗ ಸದ್ದು ಮಾಡುತ್ತಿದೆ. ಪತಿ ಕಿಯಾಮ್ ದಿನ್ ಖಲೀಫಾ ಹೇಳುವ ಪ್ರಕಾರ ಅವರ ತಾತ ಭಾರತ ದೇಶದ ಹಿಂದೂ ಆಗಿದ್ದರಂತೆ ನಂತರ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿದ್ದಾರೆ ಎಂಬುದಾಗಿ ಈ ಸಂದರ್ಭದಲ್ಲಿ ಅವರೇ ಹೇಳಿದ್ದಾರೆ. ಈ ಮದುವೆ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ.

Leave A Reply

Your email address will not be published.