ಈ ಬಾರಿಯ ಬಿಗ್ ಬಾಸ್ 9 ರಲ್ಲಿ ಕಾಣಿಸಿಕೊಳ್ಳುತ್ತಿರುವ ಸ್ಪರ್ದಿಗಳು ಯಾರ್ಯಾರು ಗೊತ್ತೇ?? ಲೀಕ್ ಆಯಿತು ಪಟ್ಟಿ. ಯಾರ್ಯಾರು ಇದ್ದಾರೆ ಗೊತ್ತೇ??
ನಮಸ್ಕಾರ ಸ್ನೇಹಿತರೆ ಇನ್ನೇನು ಕೆಲವೇ ದಿನಗಳಲ್ಲಿ ಅಂದರೆ ಸೆಪ್ಟೆಂಬರ್ 24 ರಿಂದ ಬಿಗ್ ಬಾಸ್ ಕನ್ನಡ ಸೀಸನ್ 9 ಪ್ರಾರಂಭ ಆಗಲಿದ್ದು ದೊಡ್ಮನೆಗೆ ಯಾರೆಲ್ಲ ಬರ್ತಾರೆ ಅನ್ನೋ ಕುತೂಹಲ ಹೆಚ್ಚಾಗಿದೆ. ಹಾಗಿದ್ದರೆ ಈ ಬಾರಿಯ ಬಿಗ್ ಬಾಸ್ ಗೆ ಯಾರೆಲ್ಲ ಬರಲಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಮೊದಲಿಗೆ ಬಿಗ್ ಬಾಸ್ ಮನೆಗೆ ಹೋಗುವ ಸ್ಪರ್ಧಿಗಳಲ್ಲಿ ನನ್ನರಸಿ ರಾಧೆ ಧಾರವಾಹಿ ಖ್ಯಾತಿಯ ಅಭಿನವ್ ವಿಶ್ವನಾಥ್ ಹೋಗುತ್ತಾರೆ ಎಂಬುದಾಗಿ ಕೂಡ ಕೇಳಿಬಂದಿದೆ.
ಮತ್ತೊಬ್ಬ ಸ್ಪರ್ಧಿ ಬೈಕ್ ರೇಸರ್ ಸಂದೇಶ್ ಪ್ರಸನ್ನ ಕುಮಾರ್ ಕೂಡ ಬಿಗ್ ಬಾಸ್ ಮನೆಗೆ ಹೋಗುತ್ತಾರೆ ಎಂಬುದಾಗಿ ಸುದ್ದಿ ಇದೆ. ಇದೇ ಸಾಲಿನಲ್ಲಿ ಕೇಳಿ ಬರುವ ಮತ್ತೊಂದು ಹೆಸರು ಸೂಪರ್ ಹಿಟ್ ಧಾರವಾಹಿ ಸೀತ ವಲ್ಲಭ ಧಾರವಾಹಿಯ ಸುಪ್ರೀತಾ ಸತ್ಯನಾರಾಯಣ್. ಸೋಶಿಯಲ್ ಮೀಡಿಯಾ ಸ್ಟಾರ್ ಭೂಮಿಕಾ ಬಸವರಾಜ್. ಕನ್ನಡತಿ ಧಾರವಾಹಿಯಲ್ಲಿ ಸಾನಿಯಾ ಪಾತ್ರಧಾರಿ ಆಗಿರುವ ರಾಮೋಲ. ಕಾಗೆ ಪ್ರಾಂಕ್ ಖ್ಯಾತಿಯ ಆರ್ ಜೆ ಸುನಿಲ್ ಮತ್ತು ಕಮಲಿ ಧಾರವಾಹಿ ಖ್ಯಾತಿಯ ಅಮೂಲ್ಯ ಕೂಡ ಪಾರ್ಟಿಸಿಪೇಟ್ ಮಾಡಲಿದ್ದಾರಂತೆ. ಪೇಟೆ ಮಂದಿ ಕಾಡಿಗೆ ಬಂದ್ರು ರಿಯಾಲಿಟಿ ಶೋ ಮೂಲಕ ಜನಪ್ರಿಯರಾಗಿ ಸಿನಿಮಾರಂಗದಲ್ಲಿ ಉದಯೋನ್ಮುಖ ನಟನಾಗಿ ಕಾಣಿಸಿಕೊಳ್ಳುತ್ತಿರುವ ಪ್ರವೀಣ್.
ಇವರ ಜೊತೆಗೆ ಇದುವರೆಗೂ ಎಂಟು ಬಿಗ್ ಬಾಸ್ ಸೀಸನ್ ಗಳಲ್ಲಿ ಯಾರೆಲ್ಲಾ ಈಗಾಗಲೇ ಭಾಗವಹಿಸಿದ್ದಾರೋ ಅವರಲ್ಲಿ ಐದು ಮಂದಿಯನ್ನು ಈ ಬಾರಿಯ ಬಿಗ್ ಬಾಸ್ ನಲ್ಲಿ ಆಯ್ಕೆ ಮಾಡಲಾಗುತ್ತದೆ ಎಂಬ ಸುದ್ದಿ ಕೂಡ ಇದೆ. ಅವರಲ್ಲಿ ಯಾರು ಬರಬಹುದು ಎನ್ನುವುದಾಗಿ ನಿಮ್ಮ ನಿರೀಕ್ಷೆಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ.
Comments are closed.