ರಕ್ಷಿತ್ ಶೆಟ್ಟಿ ರವರ ಸಂಭಾವನೆ ಬಗ್ಗೆ ಮಾತನಾಡಿದ ರಿಷಬ್ ಶೆಟ್ಟಿ: ಬಿಚ್ಚಿಟ್ಟ ಅಸಲಿ ಸತ್ಯವೇನು ಗೊತ್ತೇ??
ನಮಸ್ಕಾರ ಸ್ನೇಹಿತರೆ ಶೆಟ್ಟಿ ಬ್ರದರ್ಸ್ ಕನ್ನಡ ಚಿತ್ರರಂಗದಲ್ಲಿ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಹೊಸ ಜನರೇಶನ್ ಸಿನಿಮಾಗಳ ಕ್ರಾಂತಿಯನ್ನೇ ಎಬ್ಬಿಸಿದ್ದಾರೆ. ರಕ್ಷಿತ್ ಶೆಟ್ಟಿ ಹಾಗೂ ರಿಸರ್ಚ್ ಶೆಟ್ಟಿ ಜೋಡಿ ಎಂದರೆ ಪಕ್ಕ ಸೂಪರ್ ಹಿಟ್ ಎನ್ನುವಷ್ಟರ ಮಟ್ಟಿಗೆ ಕನ್ನಡ ಚಿತ್ರರಂಗದಲ್ಲಿ ತಮ್ಮ ಚಿತ್ರಗಳ ಮೂಲಕ ಪ್ರೇಕ್ಷಕರಲ್ಲಿ ಭರವಸೆಯನ್ನು ಮೂಡಿಸಿದ್ದಾರೆ.
ಸದ್ಯಕ್ಕೆ ರಿಷಬ್ ಶೆಟ್ಟಿ ಅವರು ತಮ್ಮ ಮುಂದಿನ ಸಿನಿಮಾ ಆಗಿರುವ ಕಾಂತಾರ ಚಿತ್ರದ ಬಿಡುಗಡೆಗೆ ಕಾಯುತ್ತಿದ್ದಾರೆ ಸಿನಿಮಾ ಇದೇ ಸೆಪ್ಟೆಂಬರ್ 30ರಂದು ಬಿಡುಗಡೆ ಆಗಲಿದೆ. ಇನ್ನು ರಕ್ಷಿತ್ ಶೆಟ್ಟಿ ನಟನೆ ಹಾಗೂ ನಿರ್ದೇಶನದ ರಿಚರ್ಡ್ ಆಂಟೋನಿ ಸಿನಿಮಾದ ಚಿತ್ರೀಕರಣವು ಕೂಡ ಅತಿ ಶೀಘ್ರದಲ್ಲಿ ನಡೆಯಲಿದೆ ಎನ್ನುವ ಮಾತುಗಳು ಕೇಳಿ ಬರುತ್ತದೆ. ಇನ್ನು ಕಿರಿಕ್ ಪಾರ್ಟಿ ಚಿತ್ರದ ನಂತರ ಮತ್ತೊಮ್ಮೆ ರಿಷಬ್ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿ ಜೋಡಿ ಒಂದಾಗುತ್ತಿದೆ. ಹೌದು ಬ್ಯಾಚುಲರ್ ಪಾರ್ಟಿ ಸಿನಿಮಾಗಾಗಿ ಈ ಜೋಡಿ ಒಂದಾಗುತ್ತಿದ್ದು ನಿರ್ಮಾಪಕನಾಗಿ ರಕ್ಷಿತ್ ಶೆಟ್ಟಿ ಕಾಣಿಸಿಕೊಳ್ಳಲಿದ್ದಾರೆ.
ಈ ಸಿನಿಮಾದಲ್ಲಿ ರಿಷಬ್ ಶೆಟ್ಟಿ, ಅಚ್ಯುತಣ್ಣ ಹಾಗೂ ದಿಗಂತ್ ಅವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ರಕ್ಷಿತ್ ಶೆಟ್ಟಿ ಅವರ ಸಂಭವನ ಬಗ್ಗೆ ಮಾತನಾಡುತ್ತಾ, ಈಗ ಬೇಡ ಮುಂದೆ ಹೇಳುವ ಎನ್ನುವುದಾಗಿ ತಮಾಷೆಯಿಂದ ಮಾತನಾಡುತ್ತಾ ರಿಷಬ್ ಶೆಟ್ಟಿ ಅವರು ಆ ವಿಚಾರವನ್ನು ಅಲ್ಲಿಯೇ ಮುಚ್ಚಿಟ್ಟಿದ್ದಾರೆ. ರಕ್ಷಿತ್ ಶೆಟ್ಟಿ ಅವರ ಸಂಭಾವನೆ ಎಷ್ಟಿರಬಹುದು ಎಂಬುದನ್ನು ನೀವೇ ಗೆಸ್ ಮಾಡಿ ಕಾಮೆಂಟ್ ಮಾಡಿ ನೋಡೋಣ. ವಿಶೇಷವೇನೆಂದರೆ ಇಬ್ಬರೂ ನಟರ ಮುಂದಿನ ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವುದು ಹೊಂಬಾಳೆ ಫಿಲಂಸ್ ಎನ್ನುವುದು ವಿಶೇಷ.
Comments are closed.