ಸಾವಿರಾರು ಕೋಟಿ ಆಸ್ತಿ ಹೊಂದಿದ್ದರೂ ಕೂಡ ನಾಗಾರ್ಜುನ ಹೆಂಡತಿ, ಮೈ ಮೇಲೆ ಬಂಗಾರ ಹಾಕಲ್ಲ. ಯಾಕೆ ಗೊತ್ತೇ?? ತಿಳಿದರೆ ಊಟ ಮಾಡೋದೇ ಬಿಡ್ತೀರಾ.
ನಟಿ ಅಮಲಾ ಅವರು ದಕ್ಷಿಣ ಭಾರತ ಚಿತ್ರರಂಗದ ಎವರ್ ಗ್ರೀನ್ ನಟಿ ಎಂದೇ ಹೇಳಬಹುದು. ಇವರು ಚಿತ್ರರಂಗಕ್ಕೆ ಬಂದು 35ವರ್ಷಕ್ಕಿಂತ ಹೆಚ್ಚಿನ ಸಮಯ ಆಗಿದೆ. ಅಮಲಾ ಅವರು ಮೂಲತಃ ವೆಸ್ಟ್ ಬೆಂಗಾಲ್ ಗೆ ಸೇರಿದವರು, ನಟನೆ ಶುರು ಮಾಡಿದ್ದು ತಮಿಳು ಸಿನಿಮಾ ಮೂಲಕ. ತಮಿಳಿನಲ್ಲಿ ಎಲ್ಲಾ ಸೂಪರ್ ಸ್ಟಾರ್ ಗಳ ಜೊತೆಗೆ ಸಿನಿಮಾದಲ್ಲಿ ನಟಿಸಿ, ಬಳಿಕ ತೆಲುಗು ಚಿತ್ರರಂಗಕ್ಕೂ ಎಂಟ್ರಿ ಕೊಟ್ಟರು. ನಾಗಾರ್ಜುನ ಅವರೊಡನೆ ಶಿವ ಸಿನಿಮಾದಲ್ಲಿ ನಟಿಸಿ ಸೂಪರ್ ಹಿಟ್ ಬ್ಲಾಕ್ ಬಸ್ಟರ್ ಪಡೆದರು..
ಆ ಸಿನಿಮಾ ಶೂಟಿಂಗ್ ಆಗುವಾಗ ನಾಗಾರ್ಜುನ ಅವರನ್ನು ಪ್ರೀತಿಸಿದರು ಅಮಲಾ. ಅದಾಗಲೇ ರಾಮಾನಾಯ್ಡು ಅವರ ಮಗಳು ಲಕ್ಷ್ಮಿ ಅವರೊಡನೆ ಮದುವೆಯಾಗಿ ನಾಗಚೈತನ್ಯ ಅವರು ಕೂಡ ಹುಟ್ಟಿದ ನಂತರ ನಾಗಾರ್ಜುನ ಅವರು ಪತ್ನಿಯ ಜೊತೆಗೆ ಭಿನ್ನಾಭಿಪ್ರಾಯದಿಂದ ವಿಚ್ಛೇದನ ಪಡೆದು ನಂತರ ಅಮಲಾ ಅವರೊಡನೆ ಮದುವೆಯಾದರು. ಈ ಜೋಡಿಯ ಮಗ ಅಖಿಲ್ ಅಕ್ಕಿನೇನಿ. ಅಮಲಾ ಅವರು ಮದುವೆ ನಂತರ ಚಿತ್ರರಂಗದಿಂದ ದೂರ ಉಳಿದಿದ್ದಾರೆ. ಆದರೆ ಅಮಲಾ ಅವರಿಗೆ ಪ್ರಾಣಿಗಳು ಅಂದ್ರೆ ತುಂಬಾ ಇಷ್ಟ. ಅವುಗಳಿಗಾಗಿ ಒಂದು ಟ್ರಸ್ಟ್ ಮಾಡಿಕೊಂಡು, ಸೇವೆ ಮಾಡುತ್ತಿದ್ದಾರೆ.
ಅಮಲಾ ಅವರು ಅನೇಕ ಸಮಾಜಸೇವಾ ಕಾರ್ಯಕ್ರಮಗಳನ್ನು ಮಾಡುತ್ತಾರೆ. ಹಾಗೆಯೇ, ಅಮಲಾ ಅವರ ಬಗ್ಗೆ ಒಂದು ವಿಚಾರ ಗಮನಿಸಿದ್ದರೆ, ಅಮಲಾ ಅವರು ಎಂದಿಗೂ ಕೂಡ ಬಂಗಾರ ಧರಿಸುವುದಿಲ್ಲ. ಅವರ ಕತ್ತಲ್ಲಿ ಒಂದು ಕರಿಮಣಿ ಸರ ಬಿಟ್ಟರೆ ಬೇರೆ ಏನು ಕೂಡ ಇರುವುದಿಲ್ಲ. ಕೋಟಿ ಕೋಟಿ ಆಸ್ತಿಗೆ ಒಡತಿ ಆಗಿದ್ದರು ಕೂಡ ಅಮಲಾ ಅವರು ಯಾಕೆ ಬಂಗಾರ ಧರಿಸುವುದಿಲ್ಲ ಎಂದು ನೀವು ಅಂದುಕೊಳ್ಳಬಹುದು. ಅದಕ್ಕೆ ಒಂದು ಮುಖ್ಯ ಕಾರಣ ಇದೆ, ಅಮಲಾ ಅವರಿಗೆ ಸ್ಕಿನ್ ಅಲರ್ಜಿ ಇದೆ, ಬಂಗಾರ ಧರಿಸಿದರೆ ರಾಶಸ್ ಆಗುತ್ತದೆ. ಅದೇ ಕಾರಣಕ್ಕೆ ಅವರು ಬಂಗಾರ ಧರಿಸುವುದಿಲ್ಲ.
Comments are closed.