ಗಟ್ಟಿಮೇಳ ರೌಡಿ ಬೇಬಿ ಅಮೂಲ್ಯ ರವರು 10ನೇ ತರಗತಿಯಲ್ಲಿ ಪಡೆದ ಅಂಕಗಳು ಎಷ್ಟು ಗೊತ್ತಾ??

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಧಾರವಾಹಿಗಳು ಪ್ರಸಾರವಾಗುತ್ತಿದ್ದು ಅಂತಹ ಧಾರವಾಹಿಗಳಲ್ಲಿ ಗಟ್ಟಿಮೇಳ ಧಾರಾವಾಹಿ ಕೂಡ ಒಂದು. ಹೌದು ಇದೀಗ ಪ್ರಸಾರವಾಗುತ್ತಿರುವ ಕನ್ನಡ ಕಿರುತೆರೆಯ ಧಾರವಾಹಿಗಳಲ್ಲಿ ಗಟ್ಟಿಮೇಳ ಕೂಡ ಒಂದು. ಇನ್ನು ಈ ಧಾರಾವಾಹಿ ಪ್ರಾರಂಭವಾದ ದಿನದಿಂದಲೂ ಕೂಡ ಟಾಪ್ ಧಾರವಾಹಿಯಾಗಿ ಜನರ ಮೆಚ್ಚುಗೆಯನ್ನು ಪಡೆದುಕೊಂಡಿದೆ. ಇನ್ನು ಇದರಲ್ಲಿ ನಿಶಾ ರವಿಕೃಷ್ಣನ್ ಅವರು ನಟಿಯಾಗಿ ಅಭಿನಯಿಸುತ್ತಿದ್ದಾರೆ.

ಹೌದು ಗಟ್ಟಿಮೇಳ ಧಾರಾವಾಹಿಯಲ್ಲಿ ನಾಯಕ ನಟಿ ಅಮೂಲ್ಯ ಪಾತ್ರದಲ್ಲಿ ನಿಶಾ ರವಿಕೃಷ್ಣನ್ ಅವರು ಅದ್ಭುತವಾಗಿ ನಟಿಸಿದ್ದಾರೆ. ಇದೀಗಾಗಲೇ ಇವರ ನಟನೆಗೆ ಹಾಗೂ ಇವರ ಸೌಂದರ್ಯಕ್ಕೆ ಮಾರುಹೋದ ಸಾಕಷ್ಟು ಜನರು ಇವರ ಅಭಿಮಾನಿಗಳಾಗಿದ್ದಾರೆ. ಇನ್ನು ಇಷ್ಟೆಲ್ಲ ಜನಪ್ರಿಯತೆ ಪಡೆದಿರುವ ನಟಿ ನಿಶಾ ರವಿಕೃಷ್ಣನ್ ಅವರು 10ನೇ ತರಗತಿ ಯಾವ ಶಾಲೆಯಲ್ಲಿ ಹಾಗೂ ಎಷ್ಟು ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾರೆ ಎಂಬುದು ಅಷ್ಟೊಂದು ಯಾರಿಗೂ ತಿಳಿದಿಲ್ಲ ಅನಿಸುತ್ತದೆ. ಹಾಗಾದರೆ ಅವರು 10ನೇ ತರಗತಿಯಲ್ಲಿ ಪಡೆದ ಅಂಕಗಳು ಎಷ್ಟು ಎಂಬುದನ್ನು ಈ ಕೆಳಗೆ ತಿಳಿದುಕೊಳ್ಳೋಣ ಬನ್ನಿ.

ನಟಿ ನಿಶಾ ರವಿಕೃಷ್ಣನ್ ಅವರು ಜುಲೈ 9, 2000 ರಲ್ಲಿ ಜನಿಸಿದರು. ಬಾಲ್ಯದಿಂದಲೇ ತಮ್ಮ ಶಾಲಾ ದಿನಗಳಲ್ಲಿ ಉತ್ತಮ ಅಭ್ಯಾಸ ಮಾಡುತ್ತಾ ಒಳ್ಳೆಯ ಅಂಕಗಳನ್ನು ಪಡೆದುಕೊಳ್ಳುತ್ತಿದ್ದರು. ಇದೀಗ ಇವರಿಗೆ 20 ವರ್ಷ ವಯಸ್ಸು. ಇನ್ನು ಕಾಮರ್ಸ್ ಕಾಲೇಜಿನಲ್ಲಿ ಪಿಯುಸಿ ಮಾಡುತ್ತಿದ್ದಾಗಲೇ ಅವರಿಗೆ ಚಿಂಟು ಟಿವಿಯಲ್ಲಿ ನಿರೂಪಣೆ ಮಾಡುವ ಒಂದು ಅವಕಾಶ ಒದಗಿಬಂತು. ಇನ್ನು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಂಡ ನಟಿ ನಿಶಾ ರವಿಕೃಷ್ಣನ್ ಅವರು ಅದ್ಭುತವಾಗಿ ನಿರೂಪಣೆ ಮಾಡಿದರು.

ನಂತರ ಅವರಿಗೆ ನಟನೆಯಲ್ಲಿ ಆಸಕ್ತಿ ಹೆಚ್ಚಾಗಿ ಅವರು ಧಾರಾವಾಹಿಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸಿದರು. ಹೀಗೆ ಮೊದಮೊದಲು ಅನೇಕ ಧಾರವಾಹಿಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಅಭಿನಯಿಸಿದ ನಟಿ ನಿಶಾ ರವಿಕೃಷ್ಣನ್ ಅವರಿಗೆ ದೊಡ್ಡ ಬ್ರೇಕ್ ನೀಡಿದ್ದು ಗಟ್ಟಿಮೇಳ ಧಾರಾವಾಹಿ. ಹೌದು ಗಟ್ಟಿಮೇಳ ಧಾರಾವಾಹಿಯಲ್ಲಿ ನಾಯಕನಟಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ನಿಶಾ ರವಿಕೃಷ್ಣನ್ ಅವರು ಸಾಕಷ್ಟು ಜನಪ್ರಿಯತೆ ಪಡೆದರು. ಇನ್ನು ಇವರಿಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಅಭಿಮಾನಿಗಳು ಇದ್ದಾರೆ.

ಅಷ್ಟೇ ಅಲ್ಲದೆ ಸಾಕಷ್ಟು ಫ್ಯಾನ್ ಪೇಜ್ ಗಳು ಕೂಡ ಇವೆ. ಹೀಗೆ ಸಾಕಷ್ಟು ಕನ್ನಡಿಗರ ಮನೆಮಾತಾಗಿರುವ ನಟಿ ನಿಶಾ ರವಿಕೃಷ್ಣನ್ ಅವರು ಇದೀಗ ಕನ್ನಡ ಕಿರುತೆರೆಯ ಟಾಪ್ ನಟಿಯರಲ್ಲಿ ಒಬ್ಬರು. ಇನ್ನು ತಾವು ನಾಯಕನಟಿಯಾಗಿ ಅಭಿನಯಿಸಿದ ಮೊದಲ ಧಾರವಾಹಿಯಲ್ಲಿ ಯಶಸ್ಸನ್ನು ಪಡೆದಿರುವ ನಿಶಾ ರವಿಕೃಷ್ಣನ್ ಅವರು 2016ರಲ್ಲಿ ತಮ್ಮ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಉತ್ತೀರ್ಣರಾದರು. ಈ ಪರೀಕ್ಷೆಯಲ್ಲಿ ನಟಿ ನಿಶಾ ರವಿಕೃಷ್ಣನ್ ಅವರು 625ಕ್ಕೆ 540 ಅಂಕಗಳನ್ನು ಪಡೆದುಕೊಂಡು ಡಿಸ್ಟಿಂಕ್ಷನ್ ನಲ್ಲಿ ಪಾಸಾಗಿದ್ದಾರೆ. ಹೀಗೆ ವಿದ್ಯಾಭ್ಯಾಸದಲ್ಲಿ ಕೂಡ ಮುಂದಿರುತ್ತಿದ್ದ ನಟಿ ನಿಶಾ ರವಿಕೃಷ್ಣನ್ ಅವರು ಇದೀಗ ಕನ್ನಡ ಕಿರುತೆರೆಯಲ್ಲಿ ಮಿಂಚುತ್ತಿದ್ದಾರೆ. ಇನ್ನು ಇವರಿಗೆ ಇದೇ ರೀತಿ ಯಶಸ್ಸು ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಿಗಲಿ ಎಂದು ನಾವು ಈ ಮೂಲಕ ಹಾರೈಸೋಣ.

Comments are closed.