ಮತ್ತೊಮ್ಮೆ ಎಲ್ಲರ ಮನಗೆಲ್ಲುತ್ತಿರುವ ಯುವರಾಣಿ ಅಂಕಿತ ಅಮರ್, ಹೊಸ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ಎಲ್ಲಿ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಕಿರುತೆಯಲ್ಲಿ ಅನೇಕ ಪ್ರತಿಭಾವಂತ ನಟಿಯರಿದ್ದಾರೆ. ಜನರ ಮನೆ ಮನ ಗೆದ್ದ ಈ ನಟಿಯರು ನಟನೆಯಲ್ಲಂತೂ ಎತ್ತಿದ ಕೈ. ಅವರು ಎಲ್ಲಿ ಹೋದರೂ ಅವರನ್ನು ಧಾರವಾಹಿಯ ಹೆಸರಿನಿಂದಲೇ ಗುರುತಿಸಿಕೊಳ್ಳುತ್ತಾರೆ. ಎಷ್ಟೋ ಜನ ನಟಿಯರು ತಮ್ಮ ಉದ್ಯೋಗ ಬಿಟ್ಟು ನಟನಾ ಕ್ಷೇತ್ರಕ್ಕೆ ಬಂದು ನೆಲೆಕಂಡುಕೊಂಡಿದ್ದೂ ಇದೆ. ಆದರೆ ಇಲ್ಲಿ ಅವಕಾಶಗಳು ಕಡಿಮೆಯಾದಾಗ ಅಥವಾ ಪರಭಾಷೆಯಲ್ಲಿ ಬೇಡಿಕೆ ಹೆಚ್ಚಾದಾಗ ಪರಭಾಷೆಗೆ ಹೋಗುತ್ತಿದ್ದಾರೆ. ಹೀಗೆ ಕನ್ನಡದಲ್ಲಿ ಹೆಸರು ಗಳಿಸಿ ಈಗ ಪರಭಾಷೆಯಲ್ಲೂ ಮಿಂಚುತ್ತಿರುವ ನಟಿ ಅಂಕಿತಾ ಅಮರ್.

ಅಂಕಿತಾ ಅಮರ್ ಬೆಂಗಳೂರಿನ ಬೆಡಗಿ. ಓದಿದ್ದು ಮೆಡಿಕಲ್. ಬಂದಿದ್ದು ಮಾತ್ರ ನಟನಾ ಲೋಕಕ್ಕೆ. ನಮ್ಮನೆ ಯುವರಾಣಿ ಸಿರಿಯಲ್‌ನಲ್ಲಿ ಮೀರಾ ರಾಜಗುರು ಪಾತ್ರದಲ್ಲಿ ಅಂಕಿತಾ ಕಾಣಿಸಿಕೊಂಡಿದ್ದರು. ಮೀರಾ ಪಾತ್ರ ಜನರ ಮನಸ್ಸಿನಲ್ಲಿ ಎಷ್ಟು ಬೇರೂರಿತ್ತು ಎಂದರೆ ಅಂಕಿತಾ ಅವರು ಎಲ್ಲೆ ಹೋದರೂ ಜನರು ಮೀರಾ ಎಂದೆ ಕರೆದು ಮಾತನಾಡಿಸುತ್ತಿದ್ದರು. ಮುದ್ದು ಮುದ್ದಾಗಿ, ಇನೋಸೆಂಟ್ ಆಗಿರುವ ಅಂಕಿತಾ ಬಹುಮುಖ ಪ್ರತಿಭೆ. ಅಂಕಿತಾ ಅವರು ಉತ್ತಮ ಹಾಡುಗಾರರು, ನೃತ್ಯಗಾರ್ತಿ, ನಿರೂಪಕಿಯೂ ಹೌದು. ಇವರ ನಿರೂಪಣಾ ಶೈಲಿ ನೋಡಿಯೇ ಕಲರ್ಸ್ ಕನ್ನಡ ವಾಹಿನಿಯವರು ಎದೆ ತುಂಬಿ ಹಾಡುವೆನು ರಿಯಾಲಿಟಿ ಶೋನ ನಿರೂಪಕಿಯಾಗಿ ಆಯ್ಕೆ ಮಾಡಿದ್ದರು. ಈ ಶೋವನ್ನು ಅಂಕಿತಾ ಯಶಸ್ವಿಯಾಗಿ ನಿರೂಪಿಸಿದ್ದರು. ಉಳಿದ ಎಲ್ಲಾ ನಿರೂಪಕರಿಗಿಂತಲೂ ವಿಬಿನ್ನವಾಗಿತ್ತು ಅವರ ನಿರೂಪಣಾ ಶೈಲಿ.

ankita amar | ಮತ್ತೊಮ್ಮೆ ಎಲ್ಲರ ಮನಗೆಲ್ಲುತ್ತಿರುವ ಯುವರಾಣಿ ಅಂಕಿತ ಅಮರ್, ಹೊಸ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ಎಲ್ಲಿ ಗೊತ್ತೇ??
ಮತ್ತೊಮ್ಮೆ ಎಲ್ಲರ ಮನಗೆಲ್ಲುತ್ತಿರುವ ಯುವರಾಣಿ ಅಂಕಿತ ಅಮರ್, ಹೊಸ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ಎಲ್ಲಿ ಗೊತ್ತೇ?? 2

ಅಂಕಿತಾ ಅವರು ಈಗ ಪರಭಾಷೆಯಲ್ಲೂ ಬೇಡಿಕೆಯ ನಟಿ. ಸ್ಟಾರ್ ಮಾ ವಾಹಿನಿಯಲ್ಲಿ ಪ್ರಸಾರವಾಗುವ ಶ್ರೀಮತಿ ಶ್ರೀನಿವಾಸ ಎನ್ನುವ ಧಾರವಾಹಿಯಲ್ಲಿ ಈಗ ಅಭಿನಯಿಸುತ್ತಿದ್ದಾರೆ. ಈ ಧಾರವಾಹಿಯ ನಾಯಕ ನಟ ಕೂಡ ಕನ್ನಡಿಗ. ಹೌದು ನಮ್ಮ ಚಂದನ್ ಕುಮಾರ್ ಅವರು ಈ ಧಾರವಾಹಿಯ ನಾಯಕ ನಟ. ಅಂಕಿತಾ ಅವರು ಈಗ ತೆಲುಗಿನಲ್ಲೂ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ. ಸ್ಟಾರ್ ಮಾ ವಾಹಿನಿಯಲ್ಲಿ ಪ್ರಸಾರವಾಗುವ ಸ್ಟಾರ್ ಪರಿವಾರ್ ಲೀಗ್ -೩ ರಿಯಾಲಿಟಿ ಶೋನಲ್ಲಿ ಅಂಕಿತಾ ಅವರು ಭಾಗವಹಿಸಿದ್ದರು. ಮಹಿಳಾ ದಿನದ ಪ್ರಯುಕ್ತ ನಡೆದ ಈ ಶೋನಲ್ಲಿ ಗೇಮ್ ಟಾಸ್ಕ್ ಮೂಲಕ ಅಂಕಿತಾ ಹಲವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Comments are closed.