ಮೊದಲ ಬಾರಿಗೆ ಅಪ್ಪು ಸಿನಿಮಾ ನೋಡಿ ಪ್ರತಿಕ್ರಿಯೆ ನೀಡಿದ ಕನ್ನಡದ ಟಾಪ್ ನಟಿ ರಚಿತಾ ರಾಮ್, ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಕರ್ನಾಟಕ ಜನತೆ ಮಾಡಿರುವಂತಹ ಅತ್ಯಂತ ಸಂತೋಷದ ದಿನವೆಂದರೆ ಅದು ಮಾರ್ಚ್ 17 ಎಂದರೆ ತಪ್ಪಾಗಲಾರದು. ಯಾಕೆಂದರೆ ಇಷ್ಟುದಿನ ಅಪೂರ್ವ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದ ಜನರು ಅವರ ಕೊನೆಯ ಸಿನಿಮಾ ಜೇಮ್ಸ್ ಚಿತ್ರದ ಮೂಲಕ ಅವರನ್ನು ಮತ್ತೊಮ್ಮೆ ದೊಡ್ಡ ಪರದೆ ಮೇಲೆ ನೋಡುವಂತಾಯಿತು. ಈಗಾಗಲೇ ಪಂಚ ಭಾಷೆಗಳಲ್ಲಿ ಬಿಡುಗಡೆಯಾಗಿರುವ ಜೇಮ್ಸ್ ಚಿತ್ರ ಬರೋಬ್ಬರಿ ನಾಲ್ಕು ಸಾವಿರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ವಿಶ್ವಾದ್ಯಂತ ಬಿಡುಗಡೆಯಾಗಿದೆ.

ಕೇವಲ ಕನ್ನಡಿಗರು ಮಾತ್ರವಲ್ಲದೆ ತಮಿಳು ಹಿಂದಿ ಮಲಯಾಳಂ ತೆಲುಗು ಎಲ್ಲಾ ಭಾಷೆಯ ಸಿನಿಮಾ ಪ್ರೇಮಿಗಳು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಕೊನೆಯ ಸಿನಿಮಾವನ್ನು ನೋಡಿ ಆನಂದಿಸಲು ಹಾಗೂ ಅವರಿಗೆ ಸಿನಿಮಾ ಮೂಲಕ ಕೊನೆಯ ವಿದಾಯವನ್ನು ಹೇಳಲು ಕಾತರರಾಗಿದ್ದರು. ಸಿನಿಮಾ ಈಗಾಗಲೇ ಕನ್ನಡ ಸೇರಿದಂತೆ ಪರಭಾಷೆಯ ಸೆಲೆಬ್ರಿಟಿ ಗಳಿಂದಲೂ ಕೂಡ ವೀಕ್ಷಿಸಲ್ಪಟ್ಟಿದೆ. ಈ ಸಂದರ್ಭದಲ್ಲಿ ಕನ್ನಡ ಚಿತ್ರರಂಗದ ಡಿಂಪಲ್ ಕ್ವೀನ್ ಆಗಿರುವ ರಚಿತಾ ರಾಮ್ ರವರು ಕೂಡ ಮೊದಲ ದಿನವೇ ಸಿನಿಮಾವನ್ನು ವೀಕ್ಷಿಸಿದ್ದಾರೆ.

puneeth rachita ram | ಮೊದಲ ಬಾರಿಗೆ ಅಪ್ಪು ಸಿನಿಮಾ ನೋಡಿ ಪ್ರತಿಕ್ರಿಯೆ ನೀಡಿದ ಕನ್ನಡದ ಟಾಪ್ ನಟಿ ರಚಿತಾ ರಾಮ್, ಹೇಳಿದ್ದೇನು ಗೊತ್ತೇ??
ಮೊದಲ ಬಾರಿಗೆ ಅಪ್ಪು ಸಿನಿಮಾ ನೋಡಿ ಪ್ರತಿಕ್ರಿಯೆ ನೀಡಿದ ಕನ್ನಡದ ಟಾಪ್ ನಟಿ ರಚಿತಾ ರಾಮ್, ಹೇಳಿದ್ದೇನು ಗೊತ್ತೇ?? 3

ರಚಿತಾ ರಾಮ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ನಟಸಾರ್ವಭೌಮ ಹಾಗೂ ಚಕ್ರವ್ಯೂಹ ಚಿತ್ರದಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದರು. ಚಿತ್ರವನ್ನು ವೀಕ್ಷಿಸಿದ ನಂತರ ರಚಿತಾ ರಾಮ್ ರವರ ಭಾವನೆ ಕಟ್ಟೆ ಒಡೆದು ಬಂದಿದೆ. ಕಣ್ಣೀರು ಹಾಕುತ್ತಲೇ ನಾನು ಅಪ್ಪು ಅವರ ದೊಡ್ಡ ಅಭಿಮಾನಿ ಮೊದಲಿನಿಂದಲೂ ಕೂಡ ಅವರ ಚಿತ್ರವನ್ನು ನೋಡುತ್ತಲೇ ಬಂದವಳು. ಜೇಮ್ಸ್ ಚಿತ್ರದಲ್ಲಿ ಅಪ್ಪು ಅವರ ನಟನೆ ಸೂಪರ್ ವಿ ಮಿಸ್ ಯು ಅಪ್ಪು ಸರ್ ಎನ್ನುತ್ತ ಭಾವುಕರಾಗಿ ಮಾತನಾಡಿದ್ದಾರೆ.

ನಿಜಕ್ಕೂ ಕೂಡ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರ ಇಂದಿಗೂ ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರೊಂದಿಗೆ ನಟಿಸಿದ್ದಾಗ ಅವರನ್ನು ತಮ್ಮ ನೆಚ್ಚಿನ ನಟ ಎಂಬುದಾಗಿ ಕರೆದುಕೊಂಡಿದ್ದರು. ಆ ಸಂದರ್ಭದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಡಿಂಪಲ್ ಕ್ವೀನ್ ರಚಿತಾ ರಾಮ್ ಜೊತೆಗೆ ನಗುತ್ತ ಮಾತನಾಡಿದ್ದು ಎಲ್ಲವನ್ನೂ ಕೂಡ ಈಗ ನಟಿ ರಚಿತಾ ರಾಮ್ ಮೆಲುಕು ಹಾಕುತ್ತಿದ್ದಾರೆ.

ಚಕ್ರವ್ಯೂಹ ಚಿತ್ರದಲ್ಲಿ ರಚಿತಾರಾಮ್ ರವರು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಜೋಡಿಯಾಗಿ ನಟಿಸಿದ್ದರು. ಚಕ್ರವ್ಯೂಹ ಚಿತ್ರ ಒಳ್ಳೆಯ ರೀತಿಯಲ್ಲಿ ಮೂಡಿಬಂದಿದ್ದರೂ ಕೂಡ ನಿರೀಕ್ಷಿತ ಗೆಲುವನ್ನು ಕಾಣಲಿಲ್ಲ. ಇದೇ ಕಾರಣಕ್ಕಾಗಿ ಅಪ್ಪು ಅಭಿಮಾನಿಗಳು ನಟಸಾರ್ವಭೌಮ ಚಿತ್ರಕ್ಕೆ ರಚಿತಾ ರಾಮ್ ರವರನ್ನು ಹಾಕಿಕೊಳ್ಳಬೇಡಿ ಎಂಬುದಾಗಿ ಆನ್ಲೈನ್ನಲ್ಲಿ ಅಭಿಯಾನವನ್ನು ಆರಂಭಿಸಿದ್ದರು.

puneeth rachita ram 2 | ಮೊದಲ ಬಾರಿಗೆ ಅಪ್ಪು ಸಿನಿಮಾ ನೋಡಿ ಪ್ರತಿಕ್ರಿಯೆ ನೀಡಿದ ಕನ್ನಡದ ಟಾಪ್ ನಟಿ ರಚಿತಾ ರಾಮ್, ಹೇಳಿದ್ದೇನು ಗೊತ್ತೇ??
ಮೊದಲ ಬಾರಿಗೆ ಅಪ್ಪು ಸಿನಿಮಾ ನೋಡಿ ಪ್ರತಿಕ್ರಿಯೆ ನೀಡಿದ ಕನ್ನಡದ ಟಾಪ್ ನಟಿ ರಚಿತಾ ರಾಮ್, ಹೇಳಿದ್ದೇನು ಗೊತ್ತೇ?? 4

ಈ ಸಂದರ್ಭದಲ್ಲಿ ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಅಭಿಮಾನಿಗಳ ಮನವೊಲಿಸಿ ರಚಿತರಾಮ್ ರವರನ್ನು ನಟಸಾರ್ವಭೌಮ ಚಿತ್ರಕ್ಕೆ ಹಾಕಿಕೊಳ್ಳುವಂತೆ ಸೂಚಿಸಿದ್ದರು. ಇದು ನಿಜಕ್ಕೂ ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಚಿನ್ನದಂತಹ ವ್ಯಕ್ತಿತ್ವಕ್ಕೆ ನಾನು ಕೊಡಬಹುದಾದಂತಹ ಒಂದು ಉತ್ತಮ ಉದಾಹರಣೆಯಾಗಿದೆ. ಇಂತಹ ಮನುಷ್ಯ ಕನ್ನಡ ಚಿತ್ರರಂಗದಲ್ಲಿ ಇದ್ದಿದ್ದರೆ ಕನ್ನಡ ಚಿತ್ರರಂಗ ಖಂಡಿತವಾಗಿ ಮುಂದಿನ ದಿನದಲ್ಲಿ ದೊಡ್ಡ ಮೈಲಿಗಲ್ಲನ್ನು ಸಾಧಿಸುತ್ತಿತ್ತು ಎಂದು ಹೇಳಬಹುದಾಗಿದೆ.

ಯಾಕೆಂದರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಾಯಕನಟನಾಗಿ ಎನ್ನುವುದಕ್ಕಿಂತ ಹೆಚ್ಚಾಗಿ ನಿರ್ಮಾಪಕರಾಗಿ ತಮ್ಮ ಸ್ವಂತ ಪ್ರೊಡಕ್ಷನ್ ಸಂಸ್ಥೆಯಿಂದ ಕೂಡ ಹೊಸ ಪ್ರತಿಭೆಗಳಿಗಾಗಿ ಸಿನಿಮಾವನ್ನು ಮಾಡುತ್ತಿದ್ದರು. ಯಾವುದೇ ಲಾಭದ ಅಪೇಕ್ಷೆ ಇಲ್ಲದೆ ಕನ್ನಡ ಸಿನಿಮಾ ರಸಿಕರಿಗೆ ಒಂದು ಒಳ್ಳೆ ಸಿನಿಮಾವನ್ನು ನೀಡಬೇಕೆನ್ನುವ ಹಂಬಲವನ್ನು ಹೊಂದಿದ್ದರು. ನಿಜಕ್ಕೂ ಕೂಡ ಕನ್ನಡಚಿತ್ರರಂಗ ಯುವರತ್ನ ನನ್ನು ಮಿಸ್ ಮಾಡಿಕೊಳ್ಳುವುದು ಪಕ್ಕ.

Comments are closed.