ನಿಮ್ಮ ಊರಿನಲ್ಲಿ ಸುತ್ತ ಮುತ್ತ ಬೆಳೆಯುವ ಅಂಕೋಲಾ ಮರದ ಲಾಭಗಳೇನು ಗೊತ್ತೇ?

ತಾಮ್ರ ಫಲ ಪೀತಧಾರ ನಿರೋಚಕ ಗುಪ್ತಸ್ನೇಹ ವಿರೇಚಿ ಭೂ ಸುಧಾ ದೀರ್ಘ ಕೀಲಕ ಅಂಕೋಲೆ ಅಂಕೋಲಂ, ಅಂಕೋಲಮು, ಅಂಕೋಲ, ಶೋಧನಂ, ಅಲಾಂಜಿ, ಊಡುಗ ಚೆಟ್ಟು(ಮಾನು), ಕಲ್ಲುಮಾವು, ಗುಡ್ಡದಗೋಣಿ ಎಂಬ ಹೆಸರುಗಳಿಂದ ಕರೆಯುತ್ತಾರೆ. ಕಾಡು ಮೇಡುಗಳು,ಕುರಚಲು ಕಾಡುಗಳು, ಬೆಟ್ಟ ಗುಡ್ಡಗಳಲ್ಲಿ ನೈಸರ್ಗಿಕವಾಗಿ ಪೊದೆಯಂತೆ ಬೆಳೆಯುತ್ತದೆ.ಕೆಲವು ಪ್ರಾಂತ್ಯಗಳಲ್ಲಿ ಬೇಲಿಗಿಡವಾಗಿ ಬೆಳಿಸಿದರೆ,ಕೆಲವು ಕಡೆ ಹೊಲ ಗದ್ದೆಗಳ ಬದಿಗಳ ಮೇಲೆ ಮರಗಳಂತೆ ಬೆಳೆಸುತ್ತಾರೆ.ಮರವು ತುಂಬಾ ಗಟ್ಟಿಯಾಗಿದ್ದು,ಮುಳ್ಳುಗಳಿಂದ ಕೂಡಿದ್ದು,8 ರಿಂದ 15 ಅಡಿವರಿಗೂ ಬೆಳೆಯುತ್ತೆ.ಬಿಳಿ ಕೆಂಪು ಹಾಗೂ ಕಪ್ಪು ಎಂಬ ಮೂರು ಪ್ರಭೇದಗಳಿದ್ದು,ಬಿಳಿ ಕೆಂಪು ಹೆಚ್ಚಿಗೆ ಕಾಣಿಸುತ್ತೆ, ಕಪ್ಪು ತುಂಬಾ ಅಪರೂಪವಾಗಿ ಕಾಣುತ್ತೆ.

ಅಂಕೋಲೆ ಎಷ್ಟು ಪವಿತ್ರ ಹಾಗೂ ಶಕ್ತಿಶಾಲಿ ಮರವೆಂದರೆ ವರ್ಣಿಸಲು ಅಸಾಧ್ಯ…! ಗ್ರಾಮಾಂತರ ಪ್ರದೇಶಗಳಲ್ಲಿ ಈಗಲೂ ಮನೆ ನಿರ್ಮಿಸುವಾಗ ಮುಖ ದ್ವಾರದ ಪೀಠಕ್ಕೆ ಬಲಿತ ಅಂಕೋಲೆ ಮರವನ್ನೇ ಉಪಯೋಗಿಸುತ್ತಾರೆ.ಮನೆಗೆ ಕೆಡಕು, ಮಾಯ ಮಂತ್ರಗಳ ಪ್ರಯೋಗ,ಭೂತ ಪ್ರೇತಗಳ ಕಾಟದಿಂದ ತಮ್ಮನ್ನು ರಕ್ಷಿಸುತ್ತದೆ ಎಂಬ ಅಚಲ ನಂಬಿಕೆ ಜನರದ್ದು. ಅಂಕೋಲೆ ಸರ್ವ ವಶೀಕರಣ,ಆಕರ್ಷಣೆಗೆ ಮಂತ್ರ ತಂತ್ರಗಳಲ್ಲಿ ಮಾಂತ್ರಿಕರು ಜ್ಯೋತಿಷಿಗಳು ಉಪಯೋಗಿಸೊ ಮಾಹಾ ಶಕ್ತಿದಾಯಕ ಗಿಡ.ಇಂದ್ರ ಜಾಲ ಮಾಡುವವರ ಕೈಯಲ್ಲಿರುವ ಮಂತ್ರ ದಂಡ ಸಹಾ ಅಂಕೋಲೆಯಲ್ಲೇ ಮಾಡಿರುವಂತದ್ದು.

ಅದೃಶ್ಯಕರಣೀ ವಿದ್ಯೆ,ನೀರಿನ ಮೇಲೆ ನಡಿಗೆ,ಬೆಂಕಿಯನ್ನು ಉಗುಳುವುದು ಮುಂತಾದ ಯಕ್ಷಣಿ ವಿದ್ಯೆಗಳ ಪ್ರದರ್ಶನ ಹಾಗೂ ಪ್ರಯೋಗಗಳಿಗೆ ಇದರ ಅಗತ್ಯ ಬಹಳ ಅವಶ್ಯ. ಜಾದು ಮಾಡುವವರು ಅಂಕೋಲೆ ಎಣ್ಣೆಯಲ್ಲಿ ಮಾವಿನ ಓಟೆ ನೆನಸಿಟ್ಟುಕೊಂಡು, ಜಾದು ಮಾಡುವಾಗ ಮಾವಿನ ಓಟೆಯನ್ನು ಮಣ್ಣಿನಲ್ಲಿಟ್ಟು ನೀರು ಹಾಕಿದರೆ, ತಕ್ಷಣ ಮಾವಿನ ಗಿಡ ಉದ್ಭವಿಸುವುದನ್ನ, ತೋರಿಸಿ ಜನರನ್ನು ಬೆರಗುಗೊಳಿಸುತ್ತಾರೆ. ಅಂಕೋಲೆಯ ಬಗ್ಗೆ ಇಷ್ಟೆಲ್ಲಾ ಹೇಳಲು ಕಾರಣ….! ಈ ವೃಕ್ಷದಲ್ಲಿರುವ ಅದ್ಭುತವಾದ ಶಕ್ತಿಯನ್ನು ಅಂದಾಜು ಮಾಡಬಹುದುದಾಗಿದೆ.

ಅಂಕೋಲೆ ಬೀಜದ ಎಣ್ಣೆಯನ್ನು ತೆಗೆದು, ಅದರಿಂದ ದೇಹಕ್ಕೆ ಮಸಾಜ್ ಮಾಡಿಕೊಂಡರೆ ನರಗಳು ಗಡುಸಾಗಿ, ಮಾಂಸ ಖಂಡಗಳು ಬಲಿಷ್ಠವಾಗುತ್ತವೆ.ಇದು ಬಹು ಬಲಕಾರಕ ಹಾಗೂ ವಿರೇಚಕ. ಸುಂದರವಾದ ಅಂಗ ಸೌಷ್ಠವವನ್ನು ಪಡೆಯಲು ಅಂಕೋಲೆ ಎಣ್ಣೆ ಸಹಕರಿಸಬಲ್ಲದು. ಜೋತು ಬಿದ್ದಿರುವ ಸ್ತನಗಳಿಗೆ ದಿನ ಬಿಟ್ಟು ದಿನ ಕ್ರಮ ತಪ್ಪದೆ, ಅಂಕೋಲೆ ಎಣ್ಣೆಯಲ್ಲಿ ಮಸಾಜ್ ಮಾಡಿಕೊಳ್ಳುತ್ತಾ ಬಂದರೆ, ಸ್ತನಗಳು ದೃಢತೆಯನ್ನು ಹೊಂದಿ ಯಥಾ ಸ್ಥಿತಿಗೆ ಬರುತ್ತವೆ. ತುಂಬಾ ರುಚಿಕರವಾದ ಅಂಕೋಲೆ ಹಣ್ಣುಗಳನ್ನು ಪಕ್ಷಿಗಳು ಇಷ್ಟ ಪಟ್ಟು ತಿನ್ನುತ್ತವೆ.ಹಳ್ಳಿಗಳಲ್ಲಿ ಮಕ್ಕಳು,ಹಿರಿಯರೆನ್ನದೆ ಇದರ ಹಣ್ಣುಗಳನ್ನು ತಿನ್ನುತ್ತಾರೆ.

ಈ ಹಣ್ಣಿನ ಸೇವನೆಯಿಂದ ಮಕ್ಕಳ ಆರೋಗ್ಯ ಸುಧಾರಿಸಿ,ತುಂಬಾ ಬಲಿಷ್ಠರಾಗಿ ಬೆಳೆಯುತ್ತಾರೆ. ಮಾ’ನಸಿಕ ಉಲ್ಲಾಸ ಬೆಳೆದು, ದೇಹಕ್ಕೆ ಬೇಕಾದ ಪೌಷ್ಟಿಕತೆ ದೊರೆತು ಆರೋಗ್ಯವಂತರಾಗಿರುತ್ತಾರೆ. ಇದರ ಸೇವನೆಯಿಂದ ಯಾವುದೇ ಅಡ್ಡ ಪರಿಣಾಮಗಳು ಆಗುವುದಿಲ್ಲ. ಇದರಲ್ಲಿ ಕೊಬ್ಬಿನಾಂಶ ಕಡಿಮೆ ಇದ್ದು ನಾರಿನಾಂಶ ಹೆಚ್ಚು ಇರುವುದರಿಂದ, ಮಾ’ನಸಿಕ ಒ’ತ್ತಡ ಕಡಿಮೆ ಮಾಡಿ ಜ್ಞಾಪಕ ಶಕ್ತಿ ಹೆಚ್ಚಿಸುತ್ತೆ.ಮೆದಳು ಯಾವಾಗಲೂ ತೀಕ್ಷ್ಣವಾಗಿ ಕಾರ್ಯ ನಿರ್ವಹಿಸುತ್ತೆ.ಕಣ್ಣಿನ ಷ್ಠಿಹೆಚ್ಚಿಸುವುದಲ್ಲದೇ,ಕ್ಯಾನ್ಸರ್ ರೋಗವನ್ನು ಸಹಾ ತಡೆಗಟ್ಟುತ್ತೆ, ಚರ್ಮ ರೋಗಗಳಿಂದಲೂ ಕಾಪಾಡುತ್ತೆ.ಮಧುಮೇಹ ಸಹಾ ಅತೋಟಿಗೆ ಬರುತ್ತೆ.

ಅಂಕೋಲೆಯ ಚಿಗರನ್ನು ತಂದು, ಮೇಕೆ ಅಥವಾ ಕುರಿಯ ಹಾಲಿನಲ್ಲಿ ನುಣ್ಣಗೆ ಅರೆದು,ಬಟಾಣಿಕಾಳಿನಷ್ಟು ಮಾತ್ರೆಗಳು ಮಾಡಿ, ನೆರಳಲ್ಲಿ ಒಣಗಿಸಿ, ಬೆಳಿಗ್ಗೆ ಸಂಜೆ ಒಂದು ಮಾತ್ರೆಯನ್ನು ಹೊಟ್ಟೆಗೆ ತೆಗೆದು ಕೊಂಡರೆ ಉಬ್ಬಸ ಕೆಮ್ಮು ಕಫ ಶಮನವಾಗುತ್ತೆ. (ವಾಂತಿಯಾದರೆ ಹಸುವಿನ ತುಪ್ಪದಲ್ಲಿ ತೆಗೆದುಕೊಳ್ಳಬೇಕು).

ಅಂಕೋಲೆ ಬೇರನ್ನು ತಂದು ನಾಟಿ ಹಸುವಿನ ಹಾಲಿನಲ್ಲಿ ಗಂಧ ತೇಯ್ದು 1 ಚಮಚದಂತೆ ಬೆಳಿಗ್ಗೆ ಸಂಜೆ ಹೊಟ್ಟೆಗೆ ಸೇವಿಸಿದರೆ, ನಾಯಿ ಕಡಿತದ ವಿಷ ನಿವಾರಣೆಯಾಗುತ್ತೆ. ದೇಹದ ಆರೋಗ್ಯ ಕೆಟ್ಟಾಗ, ಅಂಕೋಲೆ ಬೇರಿನ ಚೂರ್ಣವನ್ನು ಮಾಡಿಟ್ಟುಕೊಂಡು 2 ಚಿಟಿಕೆ ಚೂರ್ಣವನ್ನು 1 ಚಮಚ ಜೇನುತುದಲ್ಲಿ ತೆಗಿದುಕೊಂಡರೆ, ದೇಹದ ಆರೋಗ್ಯ ಸುಧಾರಿಸುತ್ತೆ. ಅಂಕೋಲೆಯ ಉಪಯೋಗಗಳ ಬಗ್ಗೆ ಹೇಳಲು, ಸಮಯ,ಸ್ಥಳದ ಅಭಾವದ ಕಾರಣ ಇಲ್ಲಿ ಹೇಳಲು ಆಗುತ್ತಿಲ್ಲ.ಅಷ್ಟೊಂದು ಅಮೂಲ್ಯವಾದ, ಶ್ರೇಷ್ಠವಾದ ವೃಕ್ಷವಿದು.

Comments are closed.