ಈ ಅದ್ಭುತ ಮರದ ಔಷಧೀಯ ಗುಣಗಳನ್ನು ತಿಳಿದರೇ ಇವತ್ತು ಹುಡುಕೊಂಡು ಹೋಗುತ್ತೀರಿ. ಶಿವನಿ ಮರದ ಲಾಭಗಳೇನು ಗೊತ್ತೇ?

ಬೇಸಿಗೆಯಲ್ಲಿ ಎಲೆಯುದುರುವ ಮಲೆನಾಡು ಬಯಲುಸೀಮೆಗಳಲ್ಲಿ ಕಾಣಬರುವ ಬಹುಪಯೋಗಿ ಶಿವನಿಮರ ಔಷಧೀಯ ಗುಣಗಳನ್ನೂ ಹೊಂದಿದೆ. Gmelina arborea ಇದರ ವೈಜ್ಞಾನಿಕ ಹೆಸರು. ಗಾಂಧಾರಿಗಿಡ,ಗುಮ್ಮಿ,ಗುಂಭಾರಿ ಇದರ ಇತರ ಹೆಸರುಗಳು. ಸಂಸ್ಕೃತದಲ್ಲಿ ಶ್ರೀಪರ್ಣಿ,ಮಧುಪರ್ಣಿಕ ಇತ್ಯಾದಿ ಹೆಸರುಗಳಿವೆ.ಹಿಂದಿಯಲ್ಲಿ ಗುಂಭಾರ್,ಗುಮಾರಿ ಇಂಗ್ಲಿಷ್ ನಲ್ಲಿ ಮೆಲೈನ ಟ್ರೀ. ಹೃದಯಾಕಾರದ ಎಲೆಗಳು,ಕಂದುಮಿಶ್ರಿತ ಹೂಗಳು,ತಿಳಿಅರಿಸಿನ ಬಣ್ಣದ ಗೋಳಾಕಾರದ ಹಣ್ಣುಗಳು ಬಾದಾಮಿಬಣ್ಣದ ಕಾಂಡದಿಂದ ಇದನ್ನು ಗುರ್ತಿಸಬಹುದು.

ಈ ಮರದ ಬೇರಿನ ಚೂರ್ಣ ಅಥವಾ ಹಣ್ಣಿನ ಸೇವನೆಯಿಂದ ನರದೌರ್ಬಲ್ಯ ದೂರಾಗುವುದು. ಜ್ವರದಿಂದ ತಲೆನೋವು ಬರುತ್ತಿದ್ದರೆ ಇದರ ಎಲೆಗಳನ್ನು ಅರೆದು ಹಣೆಗೆ ಪಟ್ಟು ಹಾಕಬೇಕು. ಈ ಮರದ ಹಣ್ಣುಗಳನ್ನು ಸೇವಿಸಿದರೆ ವೀರ್ಯ ವೃದ್ಧಿಯಾಗುತ್ತದೆ. ಅತಿಯಾದ ದಾಹ, ಹೃದಯಸಂಬಂಧಿ ಕಾಯಿಲೆಗಳು, ಕ್ಷಯರೋಗ ಶಮನವಾಗುತ್ತದೆ. ಈ ಮರದ ಹಣ್ಣು ಸೇವಿಸುವುದರಿಂದ ಎದೆಹಾಲು ಹೆಚ್ಚುವುದು. ಬೇರಿನ ಹೊರತೊಗಟೆಯನ್ನು ಅರೆದು ಚೇಳು ವಿಷಕ್ರಿಮಿಗಳು ಕಚ್ಚಿದ ಜಾಗಕ್ಕೆ ಹಚ್ಚಿ ಒಂದು ಟೀಸ್ಪೂನ್ ನಷ್ಟು ಕುಡಿಯುವುದರಿಂದ ವಿಷ ಇಳಿಯುವುದು.

ಎಲೆಯ ರಸವನ್ನು ಹಾಲು ಸಕ್ಕರೆ ಬೆರೆಸಿ ಕುಡಿಯುವುದರಿಂದ ಮೂತ್ರಾಂಗದ ಉರಿ ಊತಗಳು, ಪ್ರಮೇಹ ಗುಣವಾಗುತ್ತದೆ. ಬೇರಿನ ಗಂಧ ಅಥವಾ ಕಷಾಯ ಅಥವಾ ಚೂರ್ಣ ಸೇವನೆಯಿಂದ ಅಜೀರ್ಣ, ಮೂಲವ್ಯಾದಿ ಗುಣವಾಗುತ್ತದೆ. ಈ ಮರದ ಬೀಜಗಳು ಭವಿಷ್ಯದ ಪರ್ಯಾಯ ಇಂಧನದ ಮೂಲವಾಗುವ ಭರವಸೆಯಿದೆ.ಈ ಮರದ ಬೆಳೆದ ಕಾಂಡವನ್ನು ಮರದ ಆಟಿಕೆಗಳು,ಪೀಠೋಪಕರಣ,ಫ್ಲೈವುಡ್,ವಾದ್ಯಗಳು,ಕೃತಕಕಾಲು,ಬ್ರಷ್ ಹ್ಯಾಂಡಲ್ ,ಸ್ಲೇಟ್ ಚೌಕಟ್ಟು ಇತ್ಯಾದಿಗಳಿಗೆ ಬಳಸಲಾಗುವುದು.ದೇವರ ವಿಗ್ರಹಗಳನ್ನು ಮಾಡಲು ಕೂಡಾ ಬಳಸಲಾಗುತ್ತದೆ. ಇದರ ಎಲೆಗಳು ಎರಿ ತಳಿಯ ರೇಷ್ಮೆಹುಳುಗಳಿಗೆ ಆಹಾರವಾಗಿ ಬಳಸಬಹುದು. ಈ ಬಹೂಪಯೋಗಿ ಸಸ್ಯವನ್ನು ಬಂಜರುಭೂಮಿಯಲ್ಲೂ ಬೆಳೆಯಲು ಸಾಧ್ಯವಿದ್ದು ಅರಣ್ಯ ಸಂರಕ್ಷಣೆಗೆ ವನ್ಯಜೀವಿಗಳ ಆಹಾರ ಪೂರೈಕೆಗೆ ಬೆಳೆಸಬೇಕಿದೆ.

Comments are closed.