ನಿಮ್ಮ ಮನೆ ಸುತ್ತ ಮುತ್ತ ಬೆಳೆದಿರುವ ಈ ಸೊಪ್ಪಿನ ಲಾಭಗಳನ್ನು ತಿಳಿದರೇ ಆ ಕ್ಷಣವೇ ಬಳಸಲು ಆರಂಭಿಸುತ್ತೀರಿ.

ಹತ್ತರಕಿ ( ಹಕ್ಕರಿಕೆ) ಪಲ್ಲೆ ಎಂದು ಉತ್ತರ ಕರ್ನಾಟಕದ ಆಡುಭಾಷೆಯಲ್ಲಿ ಕರೆಯಲ್ಪಡುವ ಈ ಹತ್ತರಕಿ ಸೊಪ್ಪಿಗೆ ಉರ್ದು ಭಾಷೆಯಲ್ಲಿ ಫತ್ತರೇಕಿ ಭಾಜಿ ಎಂದು ಕರೆಯುತ್ತಾರೆ. ಈ ಸೊಪ್ಪನ್ನು ಬೀಜ ಹಾಕಿ ಉಳುಮೆ ಮಾಡಿ ಬೆಳೆಸುವುದಿಲ್ಲ. ಗಾಳಿಯಿಂದ ಬೀಜ ಪ್ರಸಾರವಾಗಿ ಎಲ್ಲೆಂದರಲ್ಲಿ ಬೆಳೆಯುತ್ತದೆ. ಮೊದಲೆಲ್ಲ ಹೊಲದಲ್ಲಿ ಬುತ್ತಿ ಬಿಚ್ಚಿ ಊಟಕ್ಕೆ ಕುಳಿತಾಗ ಪಕ್ಕದಲ್ಲೇ ನೆಲದಲ್ಲಿ ಹರಡಿದ ಈ ಹತ್ತರಕಿ ಪಲ್ಲೆ ಕಿತ್ತುಕೊಂಡು ತಿನ್ನುವ ರೂಢಿ ಇತ್ತು. ಆಗ ಹಿರಿಯರು ಹತ್ತರಕಿ ಪಲ್ಲೆ ತಿಂದರ ಹೊಟ್ಯಾನ ಹರಳು ಕರಗತಾವ ಎಂದು ಹೇಳ್ತಾ ಇದ್ದರು. ಅದಕ್ಕೆ ಉರ್ದು ಭಾಷೆಯಲ್ಲಿ ಫತ್ತರೇಕಿ ಭಾಜಿ ಎಂದು ಕರೆದಿರಬಹುದು. ಈ ಹತ್ತರಕಿ ಸೊಪ್ಪಿನಲ್ಲಿ ಎಲ್ಲ ಪೌಷ್ಟಿಕಾಂಶಗಳು ಅತ್ಯಧಿಕವಾಗಿವೆ.

ಹಕ್ಕರಿಕೆ ಸೊಪ್ಪಿನ ಔಷಧೀಯ ಗುಣಗಳು: ಹಕ್ಕರಿಕೆ ಎಲೆಗಳಲ್ಲಿ ಗ್ಲಯೋಕ್ಸಿಲೇಟ್ , ರಿಡಕ್ವೇಸ್ ಎಂಬ ಕಿಣ್ವಗಳು ಉತ್ಪತ್ತಿಯಾಗುತ್ತವೆ. ಈ ಕಿಣ್ವಗಳು ಮೂತ್ರ ಪಿಂಡ ಗಳಲ್ಲಿ ಹರಳು ಉಂಟಾಗುವುದನ್ನು ತಡೆ ಗಟ್ಟುತ್ತವೆ . ಇದರ ಸೇವನೆಯಿಂದ ಬಳಲಿಕೆ ಆಯಾಸ ದೂರವಾಗುತ್ತದೆ. ದೇಹಕ್ಕೆ ಬಲ ನೀಡುತ್ತದೆ. ದೇಹದ ತೂಕ ಇಳಿಸಲು ಸಹಕಾರಿಯಾಗಿದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ರ’ಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ. ಚರ್ಮರೋಗ ಗಳಿಗೆ ಉಪಯೋಗಿಸಬಹುದು.

ಮೂಳೆಗಳ ಸವೆತ ತಡೆಗಟ್ಟುತ್ತದೆ. ಗರ್ಭಿಣಿ ಸ್ತ್ರೀಯರು ಹಾಗೂ ಹಾಲುಣಿಸುವ ತಾಯಂದಿರಿಗೆ ಈ ಸೊಪ್ಪಿನ ಸೇವನೆಯಿಂದ ಎಲ್ಲ ಪೌಷ್ಟಿಕಾಂಶ ದೊರೆಯುತ್ತದೆ. ಇತ್ತೀಚಿನ ಸಂಶೋಧನೆ ಪ್ರಕಾರ ಕ್ಯಾನ್ಸರ್ ರೋಗ ಹಾಗೂ ಏಡ್ಸ್ ರೋಗಕ್ಕೆ ಪ್ರಯೋಜನಕಾರಿಯಾಗಿದೆ ಎಂಬ ಮಾಹಿತಿ ಸಿಗುತ್ತದೆ. ನಮ್ಮ ಪೂರ್ವಜರ ಹಾಗೂ ರೈತರ ಅನುಭವ ಜ್ಞಾನ ಎಷ್ಟೊಂದು ಅಗಾಧವಾಗಿತ್ತು. ಹತ್ತರಕಿ ಪಲ್ಲೆ, ಮೆಂತೆ ಪಲ್ಲೆ, ಸೌತೆಕಾಯಿ, ಗಜ್ಜರಿ , ಮೂಲಂಗಿ ಇತ್ಯಾದಿ ಹಸಿಯಾಗಿಯೇ ಬಳಸುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂಬ ಸಂದೇಶವನ್ನು ಸಾವಿರಾರು ವರ್ಷಗಳ ಹಿಂದೆಯೇ ನೀಡಿದ್ದಾರೆ. ಇದೇ ಹೆಸರಿನಿಂದ ಹರ್ಬಲ್ ಔಷಧಿಗಳನ್ನು ತಯಾರಿಸಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಕೊನೆಯಲ್ಲಿ ಒಂದು ಮಾತು ಈ ಹತ್ತರಕಿ ಪಲ್ಲೆ ಊಟದಲ್ಲಿ ಹಸಿಯಾಗಿಯೇ ಬಳಸುವುದರಿಂದ ಲಾಭ ಹೆಚ್ಚು. ಈಗ ಮಳೆಗಾಲ ಹತ್ತರಕಿ ಪಲ್ಲೆ ಸಂತೆಯಲ್ಲಿ ಸಾಕಷ್ಟು ಸಿಗುತ್ತದೆ, ಡಿಸೆಂಬರ್ ವರೆಗೂ ತಿನ್ನಬಹುದು.

Comments are closed.