ಪುನೀತ್ ರಾಜಕುಮಾರ್ ಯಾರಿಗೂ ಗೊತ್ತಾಗದೆ ಮಾಡಿದ ಕೆಲಸ ನೋಡಿ ಅಶ್ವಿನಿ ಮೇಡಂ ಕಣ್ಣೀರು. ಏನು ಗೊತ್ತೇ??

ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲ ಆಗಲಿ ಈಗಾಗಲೇ ಒಂದು ವರ್ಷ ಕಳೆದಿದೆ. ಹೀಗಿದ್ದರೂ ಕೂಡ ಅವರ ನೆನಪು ಇನ್ನೂ ಮಾಸಿಲ್ಲ. ಬಹುಶ ಬೇರೆ ಯಾವ ವ್ಯಕ್ತಿಗೂ ಸಿಗದಷ್ಟು ಗೌರವ, ಮರ್ಯಾದೆ ಅವರಿಗೆ ಸಿಗುತ್ತಿದೆ. ಇಂದಿಗೂ ಅವರನ್ನು ಕಳೆದುಕೊಂಡು ಇಡೀ ಕರುನಾಡೆ ದುಃಖಿಸುತ್ತಿದೆ ಎಂದು ಹೇಳಬಹುದು. ಅವರು ಮಾಡಿ ಹೋದ ಒಳ್ಳೆಯ ಕೆಲಸಗಳು, ಸಮಾಜ ಸೇವೆಯಿಂದ ಅವರನ್ನು ಜನ ಇನ್ನು ನೆನೆಯುತ್ತಾರೆ. ಹೌದು ಸ್ನೇಹಿತರೆ ಕೇವಲ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ನಟನಾಗಿದ್ದರೆ ಪುನೀತ್ ರಾಜಕುಮಾರ್ ಅವರನ್ನು ಇಷ್ಟು ದಿನಗಳ ಕಾಲ ನೆನಪಿಸಿಕೊಂಡು ಜನ ಕೊರಗುತ್ತಿರಲಿಲ್ಲ. ಆದರೆ ಅವರು ಯಾರಿಗೂ ತಿಳಿಸದ ಮಟ್ಟಿಗೆ ಮಾಡಿದ ಸಹಾಯಕ್ಕೆ, ಪ್ರತಿಫಲ ಬಯಸದೆ ನಿಷ್ಕಲ್ಮಶವಾಗಿ ಸಾವಿರಾರು ಜನರಿಗೆ ಸಹಾಯ ಮಾಡಿದ್ದಾರೆ. ಅವರು ಮಾಡಿದ ಸಹಾಯ ಒಂದೆರಡಲ್ಲ.

ನಟ ಪುನೀತ್ ರಾಜಕುಮಾರ್ ಅವರು ಈ ಕೈಯಲ್ಲಿ ಮಾಡಿದ್ದು ಇನ್ನೊಂದು ಕೈಗೆ ಗೊತ್ತಾಗಬಾರದು ಎಂಬಂತೆ ಬದುಕಿದ ಮಹಾನ್ ವ್ಯಕ್ತಿ. ತಾವು ಮಾಡಿದ ಸಹಾಯವನ್ನು ಯಾರಿಗೂ ಹೇಳಬಾರದೆಂದು ಸಹಾಯ ಪಡೆದವರಿಗೆ ಅವರು ಹೇಳುತ್ತಿದ್ದರು. ತಾವು ಯಾರಿಗಾದರೂ ಸಹಾಯ ಮಾಡುವಾಗ ಯಾರಾದರೂ ಜೊತೆಗಿದ್ದರೆ ಈ ವಿಷಯವನ್ನು ಯಾರಿಗೂ ಹೇಳಬಾರದಾಗಿ ಮಾತು ತೆಗೆದುಕೊಳ್ಳುತ್ತಿದ್ದರು. ಗುಟ್ಟಾಗಿ ದಾನ ಧರ್ಮ ಮಾಡಿದ ಮಹಾತ್ಮ ಪುನೀತ್ ಅವರು. ಒಂದು ಸಣ್ಣಪುಟ್ಟ ಸಹಾಯ ಅಥವಾ ಕೊಡುಗೆಯನ್ನು ನೀಡಿದರೆ ಅದಕ್ಕೆ ತಮ್ಮ ಹೆಸರು ಫೋಟೋ ಹಾಕಿಸಿಕೊಳ್ಳುವ ಜನರ ಮಧ್ಯೆ ಪುನೀತ್ ಯಾವಾಗಲೂ ಪರಮಾತ್ಮನ ಹಾಗೆ, ದೊಡ್ಡ ವ್ಯಕ್ತಿಯಂತೆ ಮಹಾತ್ಮನಂತೆ ಕಾಣುತ್ತಾರೆ. ಅವರು ಎಂದು ತಾವು ಮಾಡುತ್ತಿರುವ ಒಳ್ಳೆಯ ಕೆಲಸಗಳಿಗೆ ಪ್ರಚಾರ ಬಯಸಿದವರೇ ಅಲ್ಲ. ಅವರು ಮಾಡಿದ ಸಹಾಯಗಳಲ್ಲಿ ಒಂದು ಬೆಂಗಳೂರಿನ ಶಾಲೆಯೊಂದರ ಮಕ್ಕಳ ಫೀಸ್ ಅನ್ನು ಸತತ ಮೂರು ವರ್ಷಗಳ ಕಾಲ ಯಾರಿಗೂ ಗೊತ್ತಿಲ್ಲದಂತೆ ಕಟ್ಟುತ್ತಾ ಬಂದಿದ್ದು.

appu ashwini | ಪುನೀತ್ ರಾಜಕುಮಾರ್ ಯಾರಿಗೂ ಗೊತ್ತಾಗದೆ ಮಾಡಿದ ಕೆಲಸ ನೋಡಿ ಅಶ್ವಿನಿ ಮೇಡಂ ಕಣ್ಣೀರು. ಏನು ಗೊತ್ತೇ??
ಪುನೀತ್ ರಾಜಕುಮಾರ್ ಯಾರಿಗೂ ಗೊತ್ತಾಗದೆ ಮಾಡಿದ ಕೆಲಸ ನೋಡಿ ಅಶ್ವಿನಿ ಮೇಡಂ ಕಣ್ಣೀರು. ಏನು ಗೊತ್ತೇ?? 2

ಬೆಂಗಳೂರಿನಲ್ಲಿ ಬಿಬಿಎಂಪಿ ಶಾಲೆಯೊಂದಕ್ಕೆ ಪುನೀತ್ ಅವರು ನಿರಂತರವಾಗಿ ಮೂರು ವರ್ಷಗಳ ಕಾಲ ಶಾಲಾ ಮಕ್ಕಳ ಫೀಸ್ ತುಂಬುತ್ತಾ ಬಂದಿದ್ದರು. ಅಲ್ಲಿ ಓದುತ್ತಿರುವ ಸುಮಾರು 400 ಮಕ್ಕಳು ಅತ್ಯಂತ ಬಡ ಮಕ್ಕಳಾಗಿದ್ದು ವಾರ್ಷಿಕವಾಗಿ 3000 ಫೀಸ್ ಕಟ್ಟುವ ಸಾಮರ್ಥ್ಯ ಕೂಡ ಅವರಿಗೆ ಇರಲಿಲ್ಲ. ಅಲ್ಲಿನ ಪಾಲಿಕೆ ಸದಸ್ಯರೊಬ್ಬರು ಈ ವಿಷಯವನ್ನು ಸಾಕಷ್ಟು ನಟರಿಗೆ ರಾಜಕಾರಣಿಗಳಿಗೆ ತಿಳಿಸಿದರು, ಯಾರು ಸಹಾಯಕ್ಕೆ ಬಂದಿರಲಿಲ್ಲ. ಈ ವಿಷಯ ತಿಳಿದ ಪುನೀತ್ ಅವರು ತಾವೇ ಸ್ವತಃ ಸಹಾಯ ಮಾಡುವುದಾಗಿ ತಿಳಿಸಿದರು. ಆದರೆ ಈ ವಿಷಯವನ್ನು ಯಾರಿಗೂ ಹೇಳಬಾರದೆಂದು ಅವರು ಹೇಳಿಕೊಂಡಿದ್ದರು. ಪ್ರತಿ ವಿದ್ಯಾರ್ಥಿಗೆ 3000 ಫೀಸ್ನಂತೆ ಒಟ್ಟು 400 ವಿದ್ಯಾರ್ಥಿಗಳಿಗೆ ಅವರು ತೀರಿಹೋಗುವ ಮೊದಲು ಮೂರು ವರ್ಷಗಳ ಕಾಲ ಸತತವಾಗಿ ಆ ವಿದ್ಯಾರ್ಥಿಗಳ ಫೀಸ್ ಕಟ್ಟುತ್ತಾ ಬಂದಿದ್ದರು. ಯಾರಿಗೂ ಗೊತ್ತಾಗದ ಹಾಗೆ ಪುನೀತ್ ಅವರೇ ವಿದ್ಯಾರ್ಥಿಗಳ ಫೀಸ್ ಹಣವನ್ನು ತಲೆಗೆ ಹೆಲ್ಮೆಟ್ ಧರಿಸಿ ಬಂದು ಕೊಟ್ಟು ಹೋಗುತ್ತಿದ್ದರಂತೆ. ಈ ವಿಷಯವನ್ನು ಇತ್ತೀಚಿಗೆ ಆ ಪಾಲಿಕೆ ಸದಸ್ಯರು ಪಬ್ಲಿಕ್ ಟಿವಿಯಲ್ಲಿ ಹೇಳಿಕೊಂಡಿದ್ದರು. ಹೀಗೆ ಯಾವುದೇ ಪ್ರಚಾರ ಬಯಸದೆ ದಾನ ಧರ್ಮ ಮಾಡಿ ಆದರ್ಶದ ಬದುಕನ್ನು ಬದುಕಿ ಹೋದವರು ಪುನೀತ್ ರಾಜಕುಮಾರ್.

Comments are closed.