ಮೂವರ ಖತರ್ನಾಕ್ ಆಟದಿಂದ ಬಾಂಗ್ಲಾದೇಶ ವಿರುದ್ಧ ಭಾರತ ಏನೋ ಗೆದ್ದು ಬಿಡ್ತು, ಆದರೆ ಗೆದ್ದ ಮೇಲೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಸಿಕ್ಕಿದು ಯಾರಿಗೆ ಗೊತ್ತೇ??
ಇಂದು ಭಾರತ ತಂಡ ವಿಶ್ವಕಪ್ ನಲ್ಲಿ ತನ್ನ ನಾಲ್ಕನೇ ಪಂದ್ಯವನ್ನಾಡಿತು, ಇದರಲ್ಲಿ ಬಾಂಗ್ಲಾದೇಶ್ ವಿರುದ್ಧ 5 ರನ್ ಗಳ ಜಯ ಗಳಿಸಿತು ಭಾರತ ತಂಡ. ಇಂದಿನ ಪಂದ್ಯದಲ್ಲಿ ಭಾರತ ತಂಡ ಗೆಲ್ಲಲು ವಿರಾಟ್ ಕೋಹ್ಲಿ ಅವರು ಮತ್ತು ಕೆ.ಎಲ್.ರಾಹುಲ್ ಅವರು ಸಿಡಿಸಿದ ಅರ್ಧಶತಕ ಮುಖ್ಯ ಕಾರಣವಾಯಿತು. ಇಂದಿನ ಪಂದ್ಯದಲ್ಲಿ ಜಯ ಗಳಿಸಿ, 2 ಪಾಯಿಂಟ್ಸ್ ಗಳಿಸಿದ ಭಾರತ ತಂಡ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಏರಿದೆ. ಬಾಂಗ್ಲಾದೇಶ್ ತಂಡದ ಬೌಲರ್ ಗಳನ್ನು ಎದುರಿಸಿದ ಭಾರತ 184 ರನ್ ಗಳ ಗುರಿ ನೀಡಿತು. ಕೆ.ಎಲ್.ರಾಹುಲ್ ಅವರು ಈ ಮೂಲಕ ಫಾರ್ಮ್ ಗೆ ಮರಳಿದ್ದಾರೆ. ಇನ್ನು ವಿರಾಟ್ ಅವರು ವಿರಾಟ ರೂಪವನ್ನ ಮತ್ತೊಮ್ಮೆ ತೋರಿಸಿದ್ದಾರೆ. ಮೊದಲ ಇನ್ನಿಂಗ್ಸ್ ನಲ್ಲಿ ಒಂದು ಸಾರಿ ಮಳೆ ಅಡ್ಡಿ ಆಯಿತು.
ಎರಡನೇ ಇನ್ನಿಂಗ್ಸ್ ನಲ್ಲಿ ಬಾಂಗ್ಲಾದೇಶ್ ತಂಡ ಅತ್ಯುತ್ತಮ ಆರಂಭ ಪಡೆದುಕೊಂಡಿತು, ಪವರ್ ಪ್ಲೇ ನಲ್ಲಿ 60 ರನ್ ಗಳಿಸಿಕೊಂಡಿತು, ಲಿಟ್ಟೊನ್ ದಾಸ್ ಅವರ ಅರ್ಧಶತಕದ ಬಳಿಕ, 7ನೇ ಓವರ್ ನಂತರ ಕೆ.ಎಲ್.ರಾಹುಲ್ ಅವರು ಡೈರೆಕ್ಟ್ ರನ್ ಔಟ್ ಮಾಡಿದರು. ನಂತರ ಒಂದೊಂದಾಗಿ ಬಾಂಗ್ಲಾದೇಶ್ ತಂಡದ ವಿಕೆಟ್ಸ್ ಗಳನ್ನು ಉರುಳಿಸಲು ಶುರು ಮಾಡಿತು ಭಾರತ ತಂಡ, ಆರ್ಷದೀಪ್ ಸಿಂಗ್ ಅವರು ಮತ್ತು ಮೊಹಮ್ಮದ್ ಶಮಿ ಅವರು ಒಂದು ಓವರ್ ನಲ್ಲಿ ಎರಡು ವಿಕೆಟ್ಸ್ ಪಡೆದರು. ಹೀಗೆ ಭಾರತ ತಂಡ ಬಾಂಗ್ಲಾದೇಶದ 6 ವಿಕೆಟ್ ಉರುಳಿಸಿತು ಭಾರತ ತಂಡ. ಇಂದಿನ ಮ್ಯಾಚ್ ಕೊನೆಯ ಓವರ್ ನ ಕೊನೆಯ ಎಸೆತದವರೆಗು ಹೋಗಿ, ಲಾಸ್ಟ್ ಬಾಲ್ ನಲ್ಲಿ ಒಂದು ಬಾಲ್ ಗೆ 7 ರನ್ ಗಳ ಅವಶ್ಯಕತೆ ಇದ್ದಾಗ, ಬಾಂಗ್ಲಾದೇಶ್ ತಂಡ ಈ ಪಂದ್ಯವನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಭಾರತ ತಂಡ ಮತ್ತೊಂದು ಜಯ ಸಾಧಿಸಿತು.
ಇಂದಿನ ಪಂದ್ಯದಲ್ಲಿ ಭಾರತ ತಂಡದ ಅದ್ಭುತ ಪ್ರದರ್ಶನದಿಂದ, 62 ರನ್ ಗಳಿಸಿದ ವಿರಾಟ್ ಕೋಹ್ಲಿ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ, ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಗಳಿಸಿದ್ದು, ಪಂದ್ಯದ ಬಳಿಕ ಪ್ರಶಸ್ತಿ ಸ್ವೀಕರಿಸಿದ ವಿರಾಟ್ ಅವರು ಹೇಳಿದ್ದು ಹೀಗೆ, “ಇಂದು ಬಹಳ ಕ್ಲೋಸ್ ಗೇಮ್ ಆಗಿತ್ತು, ನಾವು ಇಷ್ಟು ಕ್ಲೋಸ್ ಆಗುತ್ತೆ ಎಂದು ಅಂದುಕೊಂಡಿರಲಿಲ್ಲ. ಬ್ಯಾಟಿಂಗ್ ಉತ್ತಮವಾಗಿತ್ತು, ನಾನು ಹೋದಾಗ ಸ್ವಲ್ಪ ಪ್ರೆಶರ್ ಇತ್ತು, ಆದರೆ ಅದು ನನ್ನ ಆಟದ ಮೇಲೆ ಪರಿಣಾಮ ಬೀರಿ, ಸಣ್ಣ ತಪ್ಪು ಕೂಡ ನಡೆಯಬಾರದು ಎಂದು ಅನ್ನಿಸಿತ್ತು. ಈಗ ನಾನು ಸಂತೋಷವಾಗಿದ್ದೇನೆ, ಹಳೆಯ ಘಟನೆಗಳ ನೆನಪು ಮಾಡಿಕೊಳ್ಳುವುದಿಲ್ಲ. ವಿಶ್ವಕಪ್ ಆಸ್ಟ್ರೇಲಿಯಾದಲ್ಲಿ ನಡೆಯುತ್ತದೆ ಎಂದು ಗೊತ್ತಾದಾಗ ನನಗೆ ಬಹಳ ಸಂತೋಷವಾಗಿತ್ತು. ಒಳ್ಳೆಯ ಶಾಟ್ ಗಳು ಉತ್ತಮ ಪ್ರದರ್ಶನ ತರುತ್ತದೆ ಎಂದು ನನಗೆ ಗೊತ್ತಿತ್ತು. ಲೈನ್ ಗೆ ಹಿಟ್ ಮಾಡುವ ಫಾರ್ಮೇಟ್ ನಲ್ಲಿ ನಾನು ಯಾವಾಗಲೂ ಆಡುತ್ತೇನೆ. ಈ ಗ್ರೌಂಡ್ ನಲ್ಲಿ ಆಡುವುದು ನನಗೆ ಸಂತೋಷ ನೀಡುತ್ತದೆ, ಮತ್ತೆ ಮನೆಗೆ ಬಂದಿದ್ದೇನೆ ಎಂದು ಅನ್ನಿಸುತ್ತದೆ..” ಎಂದು ಹೇಳಿದ್ದಾರೆ ಕಿಂಗ್ ಕೋಹ್ಲಿ.
Comments are closed.