ದಿವ್ಯ ಉರುಡುಗ ಗೆ ಶಾಕ್ ಕೊಟ್ಟ ಆರ್ಯವರ್ಧನ್ ಗುರೂಜಿ, ಅಪ್ಪಿ ತಪ್ಪಿ ಅರವಿಂದ್ ಜೊತೆ ಮದುವೆಯಾದ್ರೆ ಏನಾಗುತ್ತದೆ ಅಂತೇ ಗೊತ್ತೇ??

ಬಿಗ್ ಬಾಸ್ ಸೀಸನ್ 9 ರಲ್ಲಿ ಮತ್ತೊಮ್ಮೆ ಸ್ಪರ್ಧಿಯಾಗಿ ದಿವ್ಯ ಉರುಡುಗ ಭಾಗವಹಿಸಿದ್ದಾರೆ. ಕಳೆದ ಬಾರಿ ಗ್ರಾಂಡ್ ಫಿನಾಲೆಯವರೆಗೂ ತಲುಪಿದ್ದ ದಿವ್ಯ ಉರುಡುಗ ಇದೀಗ ಮತ್ತೆ ಪ್ರವೀಣರು ನವೀನರು ಕಾನ್ಸೆಪ್ಟ್ ಅಡಿಯ ಈ ಸೀಸನ್ ನಲ್ಲಿ ಪ್ರವೀಣರಾಗಿ ಮತ್ತೆ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಈಗಾಗಲೇ ತಮ್ಮ ಆಟದ ಮೂಲಕ ಇನ್ನಷ್ಟು ಜನರಿಗೆ ಹತ್ತಿರವಾಗಿರುವ ದಿವ್ಯ ರವರು ಉತ್ತಮವಾಗಿ ಮನೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕಳೆದ ಸೀಸನ್ ನಲ್ಲಿ ದಿವ್ಯ ಮತ್ತು ಅರವಿಂದ್ ಅವರ ಜೋಡಿ ಸದ್ದು ಮಾಡಿತ್ತು. ಎಲ್ಲ ಸೀಸನ್ನಲ್ಲೂ ಯಾವುದಾದರೂ ಜೋಡಿ ಜನರ ಕಣ್ಣಿಗೆ ಬೀಳುತ್ತದೆ. ಆನಂತರ ಸಾಮಾನ್ಯವಾಗಿ ಅವರು ದೂರಾಗುತ್ತಾರೆ ಅಥವಾ ತಮ್ಮ ಪಾಡಿಗೆ ತಾವು ಇದ್ದು ಬಿಡುತ್ತಾರೆ. ಆದರೆ ಮನೆಯಿಂದ ಹೊರಗೆ ಹೋದ ನಂತರವೂ ಅಷ್ಟೇ ಪ್ರೀತಿ ಗೌರವದಿಂದ ಇದ್ದ ಜೋಡಿ ಎಂದರೆ ಅದು ದಿವ್ಯ ಮತ್ತು ಅರವಿಂದ್.

ಮನೆಯಲ್ಲಿ ಎಷ್ಟು ಗೌರವ ಮತ್ತು ಪ್ರೀತಿಯಿಂದ ಇದ್ದರೂ ಅದೇ ಭಾವನೆಯಿಂದ ಹೊರಗಡೆಯೂ ಕೂಡ ಗುರುತಿಸಿಕೊಂಡಿದ್ದು ಈ ಜೋಡಿ. ಸೀಸನ್ ಒಂಬತ್ತಕ್ಕೆ ದಿವ್ಯ ಒಬ್ಬರೇ ಎಂಟ್ರಿ ಕೊಟ್ಟಿದ್ದಾರೆ. ಶೋ ಶುರುವಾಗುವ ಮೊದಲೇ ಅರವಿಂದ್ ಅವರು ಅತಿಥಿಯಾಗಿ ದಿವ್ಯ ಅವರನ್ನು ಮನೆಯೊಳಗೆ ಕಳಿಸಿಕೊಡಲು ಬಂದಿದ್ದರು. ದಿವ್ಯ ಅವರು ಅದ್ಭುತವಾಗಿ ಅಡುತ್ತಿದ್ದು, ಕಳೆದ ಬಾರಿ ಅರವಿಂದ ಅವರ ಜೊತೆಗೆ ಇದ್ದಿದ್ದಕ್ಕೆ ನಾನು ಅಷ್ಟು ದಿನ ಇದ್ದೆ ಎನ್ನುವ ಮಾತು ಕೇಳಿ ಬಂದಿತ್ತು. ಆದರೆ ಈ ಬಾರಿ ಒಬ್ಬಳೇ ಗೆಲ್ಲಲು ಬಂದಿದ್ದೇನೆ ಎಂದು ಹೇಳಿದ್ದಾರೆ. ಇನ್ನು ಓಟಿಟಿ ಸೀಸನ್ ಅಲ್ಲಿ ಗುರುತಿಸಿಕೊಂಡ ಆರ್ಯ ವರ್ಧನ್ ಗುರೂಜಿ ಅವರು ಕೂಡ ಈ ಸೀಸನ್ಗೆ ಎಂಟ್ರಿ ಕೊಟ್ಟಿದ್ದು. ತಮ್ಮ ಆಟ, ತಮಾಷೆ, ಜ್ಯೋತಿಷ್ಯದ ಮೂಲಕ ಸದ್ದು ಮಾಡುತ್ತಿದ್ದಾರೆ. ಅವರ ಜ್ಯೋತಿಷ್ಯವನ್ನು ಕೆಲವರು ನಂಬುತ್ತಾರೆ ಕೆಲವರು ನಂಬುವುದಿಲ್ಲ. ಆದರೂ ಅವರು ಆಗಾಗ ತಮ್ಮ ಜ್ಯೋತಿಷ್ಯ ಜ್ಞಾನದ ಮೂಲಕ ಭವಿಷ್ಯ ಹೇಳುತ್ತಾರೆ.

divya aravind aryavardhan | ದಿವ್ಯ ಉರುಡುಗ ಗೆ ಶಾಕ್ ಕೊಟ್ಟ ಆರ್ಯವರ್ಧನ್ ಗುರೂಜಿ, ಅಪ್ಪಿ ತಪ್ಪಿ ಅರವಿಂದ್ ಜೊತೆ ಮದುವೆಯಾದ್ರೆ ಏನಾಗುತ್ತದೆ ಅಂತೇ ಗೊತ್ತೇ??
ದಿವ್ಯ ಉರುಡುಗ ಗೆ ಶಾಕ್ ಕೊಟ್ಟ ಆರ್ಯವರ್ಧನ್ ಗುರೂಜಿ, ಅಪ್ಪಿ ತಪ್ಪಿ ಅರವಿಂದ್ ಜೊತೆ ಮದುವೆಯಾದ್ರೆ ಏನಾಗುತ್ತದೆ ಅಂತೇ ಗೊತ್ತೇ?? 2

ಇದೀಗ ದಿವ್ಯ ಅವರ ಬಗ್ಗೆ ಅವರೊಂದು ಶಾಕಿಂಗ್ ಭವಿಷ್ಯ ನುಡಿದಿದ್ದಾರೆ. ನೀನು ಅರವಿಂದ್ ಮದುವೆಯಾದರೆ ನಿಮ್ಮಿಬ್ಬರಿಗೂ ಡಿವೋರ್ಸ್ ಆಗುತ್ತೆ ಎಂದು ಅವರು ಶಾಕಿಂಗ್ ಭವಿಷ್ಯ ನುಡಿದಿದ್ದಾರೆ. ಹೌದು ಸ್ನೇಹಿತರೆ ಹೀಗೆ ಹೇಳುವ ಮೂಲಕ ಎಲ್ಲರಿಗೂ ಆಶ್ಚರ್ಯವಾಗುವಂತೆ ಗುರೂಜಿ ಮಾತನಾಡಿದ್ದಾರೆ. ನಿನ್ನ ಹುಟ್ಟಿದ ದಿನಾಂಕಕ್ಕೂ ಅರವಿಂದ್ ಹುಟ್ಟಿದ ದಿನಾಂಕ ಹೋಲಿಕೆಯಾಗುವುದಿಲ್ಲ. ನೀವಿಬ್ಬರೂ ಮದುವೆಯಾದರೆ ಡಿವೋರ್ಸ್ ಆಗುತ್ತೆ ಎಂದು ಹೇಳಿದ್ದಾರೆ. 7ನೇ ತಾರೀಕು ಹುಟ್ಟಿದವರು 8ನೇ ತಾರೀಕಿನಲ್ಲಿ ಹುಟ್ಟಿದವರೊಂದಿಗೆ ಮದುವೆಯಾದರೆ ಅವರು ಒಟ್ಟಿಗೆ ಬಾಳುವುದಿಲ್ಲ. ಡಿವೋರ್ಸ್ ಆಗುತ್ತೆ, ನೀವಿಬ್ಬರು ಒಳ್ಳೆಯ ಫ್ರೆಂಡ್ಸ್ ಆಗಿರಬಹುದು ಆದರೆ ಮದುವೆಯಾಗಿ ಒಟ್ಟಿಗೆ ಜೀವಿಸಲು ಸಾಧ್ಯವಾಗುವುದಿಲ್ಲ ಎಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಇದನ್ನು ದಿವ್ಯ ಉರುಡುಗ ನಂಬಿದ್ದಾರೋ ಅಥವಾ ಇಲ್ಲವೋ ಗೊತ್ತಿಲ್ಲ. ಆದರೆ ಈ ಭವಿಷ್ಯವನ್ನು ಕೇಳಿ ಅವರು ಸಾಕಷ್ಟು ನೊಂದುಕೊಂಡರು.

Comments are closed.