ವಿರಾಟ್ ವಿರುದ್ದ ಮುಗಿಬಿದ್ದ DK ಅಭಿಮಾನಿಗಳು: ದಿನೇಶ್ ಜೀವನ ಅಂತ್ಯಗೊಳ್ಳುತ್ತಿರುವುದಕ್ಕೆ ಕೊಹ್ಲಿ ನೇ ಕಾರಣ ಅಂತೇ. ಯಾಕೆ ಗೊತ್ತೆ??

ನಿನ್ನೆ ಬುಧವಾರ ನಡೆದ ಟಿ-20 ವಿಶ್ವಕಪ್ ನಲ್ಲಿ ಭಾರತ ತಂಡವು ಬಾಂಗ್ಲಾದೇಶದ ವಿರುದ್ಧ ಟೂರ್ನಿಯಲ್ಲಿ ರೋಚಕ ಗೆಲುವು ದಾಖಲಿಸಿದೆ. ಈ ಮೂಲಕ ಟೀಮ್ ಇಂಡಿಯ ಫೈನಲ್ ಗೆ ಇನ್ನಷ್ಟು ಸನಿಹಕ್ಕೆ ಬಂದಿದೆ. ಟಾಸ್ ಸೋತು ಬ್ಯಾಟಿಂಗ್ ಮಾಡಬೇಕಾಗಿದ್ದ ಭಾರತ ತಂಡವು 15.1 ಓವರ್‌ಗಳಿಗೆ, 4 ವಿಕೆಟ್‌ ನಷ್ಟದೊಂದಿಗೆ 130 ರನ್‌ ಕಲೆ ಹಾಕಿತ್ತು. ಹಾರ್ದಿಕ್ ಪಾಂಡ್ಯ ವಿಕೆಟ್ ಒಪ್ಪಿಸಿದ ನಂತರ ದಿನೇಶ್ ಕಾರ್ತಿಕ್ ಉತ್ತಮ ಬೌಂಡರಿ ಪ್ರದರ್ಶನ ತೋರಿದರು. 17ನೇ ಓವರ್ ನ ಕೊನೆಯ ಎಸೆತದ ವೇಳೆ ವಿರಾಟ್ ಕೊಹ್ಲಿ ಹೆಚ್ಚುವರಿ ಕವರ್ಸ್ ಮೇಲೆ ಚೆಂಡು ಹೊಡೆದು ರನ್ ಓಡಲು ಮುಂದಾದರು. ಆದರೆ ಕೊನೆ ಕ್ಷಣದಲ್ಲಿ ವಿರಾಟ್ ಕೊಹ್ಲಿ ಮನಸ್ಸು ಬದಲಾಯಿಸಿದರು. ಓಡಲು ಮುಂದಾಗಿದ್ದ ವಿರಾಟ್ ಕೊಹ್ಲಿ ಮತ್ತೆ ಹಿಂದಕ್ಕೆ ತೆರಳಿ ದಿನೇಶ್ ಕಾರ್ತಿಕ್ ರವರನ್ನು ವಾಪಸ್ ಹೋಗುವಂತೆ ಸೂಚಿಸಿದರು. ಇದರಿಂದ ದಿನೇಶ್ ಕಾರ್ತಿಕ್ ರವರು ಹಿಂದಕ್ಕೆ ಹೋಗಲು ತಮ್ಮ ಕೈಲಾದ ಪ್ರಯತ್ನವನ್ನು ಮಾಡಿದರು ಕೂಡ ದುರಾದೃಷ್ಟವಶಾತ್ ರನ್ ಔಟ್ ಆಗಬೇಕಾಯಿತು.

ಶಕಿಬ್ ಅಲ್ ಹಸನ್ ಎಸೆದ ಚೆಂಡನ್ನು ಹಿಡಿಯುವ ವೇಳೆ ಶೋರಿಫುಲ್‌ ಇಸ್ಲಾಮ್ ವೈಫಲ್ಯ ಕಂಡರು. ಹೀಗಿದ್ದರೂ ಚೆಂಡು ಕೈನಿಂದ ಜಾರಿ ಹೋಗಿ ಸ್ಟಂಪ್ಸ್‌ ತಗುಲಿತು. ಇದಾದಮೇಲೆ ಇಸ್ಲಾಂ ತಮ್ಮ ಕೈನಿಂದಲೇ ಸ್ಟಂಪ್ಸ್‌ ತಳ್ಳಿದರು. ವಿಡಿಯೋ ರಿಪ್ಲೈ ನಲ್ಲಿ ಚೆಂಡು ಸ್ಟಂಪ್ಸ್‌ ತಗುಲಿರುವುದನ್ನು ಸ್ಪಷ್ಟವಾಗಿ ಗಮನಿಸಿದ ಮೂರನೇ ಅಂಪೈರ್ ರನ್ ಔಟ್ ಘೋಷಿಸಿದರು. ಈ ಟೂರ್ನಿಯಲ್ಲಿ ದಿನೇಶ್ ಕಾರ್ತಿಕ್ ಅವರು ರಿಷಬ್ ಪಂತ್ ಸ್ಥಾನದಲ್ಲಿ ಆಡುತ್ತಿದ್ದಾರೆ. ಹೀಗಿದ್ದರೂ ಅವರು ಸತತವಾಗಿ ಸೋಲನ್ನೇ ಕಾಣಬೇಕಾಗಿದೆ. ಈ ನಡುವೆ ಅವರು ವಿರಾಟ್ ಕೊಹ್ಲಿ ಅವರ ತಪ್ಪಿನಿಂದಾಗಿ ಮತ್ತೆ ಸೋಲಬೇಕಾಯಿತು. ಇದರಿಂದಾಗಿ ದಿನೇಶ್ ಕಾರ್ತಿಕ್ ಕೊಹ್ಲಿಯ ಮೇಲೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

virat dinesh karthik | ವಿರಾಟ್ ವಿರುದ್ದ ಮುಗಿಬಿದ್ದ DK ಅಭಿಮಾನಿಗಳು: ದಿನೇಶ್ ಜೀವನ ಅಂತ್ಯಗೊಳ್ಳುತ್ತಿರುವುದಕ್ಕೆ ಕೊಹ್ಲಿ ನೇ ಕಾರಣ ಅಂತೇ. ಯಾಕೆ ಗೊತ್ತೆ??
ವಿರಾಟ್ ವಿರುದ್ದ ಮುಗಿಬಿದ್ದ DK ಅಭಿಮಾನಿಗಳು: ದಿನೇಶ್ ಜೀವನ ಅಂತ್ಯಗೊಳ್ಳುತ್ತಿರುವುದಕ್ಕೆ ಕೊಹ್ಲಿ ನೇ ಕಾರಣ ಅಂತೇ. ಯಾಕೆ ಗೊತ್ತೆ?? 2

ಬಾಂಗ್ಲಾದೇಶದ ವಿರುದ್ಧದ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರುವ ನಿರೀಕ್ಷೆ ಇಟ್ಟುಕೊಂಡಿದ್ದ ದಿನೇಶ್ ಕಾರ್ತಿಕ್ ತಮ್ಮದಲ್ಲದ ತಪ್ಪಿನಿಂದಾಗಿ ರನ್ನೌಟ್ ಆಗಿ ಪಂದ್ಯದಿಂದ ಹೊರ ನಡೆಯಬೇಕಾಯಿತು. ಇದರಿಂದ ನೆಟ್ಟಿಗರು ಕೋಪಗೊಂಡಿದ್ದಾರೆ. ವಿರಾಟ್ ಕೊಹ್ಲಿ ಅವರು ಸರಿಯಾಗಿ ಸಂವಹನ ನಡೆಸದೇ ಇದ್ದುದರಿಂದಾಗಿ ಅನ್ಯಾಯವಾಗಿ ದಿನೇಶ್ ಕಾರ್ತಿಕ್ ಸೋಲ ಬೇಕಾಯಿತ್ತು ಎಂದು ಕೊಹ್ಲಿಯ ಮೇಲೆ ಆರೋಪಿಸಿದ್ದಾರೆ. ನೀವು ದಿನೇಶ್ ಕಾರ್ತಿಕ್ ಅವರ ವೃತ್ತಿ ಜೀವನವನ್ನೇ ನಾಶ ಮಾಡಿಬಿಟ್ಟಿರಿ ಎಂದು ಟ್ವೀಟ್ ಮಾಡಿದ್ದಾರೆ. ಹೀಗೆ ಟ್ವಿಟರ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಕೊಹ್ಲಿ ಅವರ ನಡೆಗೆ ಟೀಕೆ, ವಿರೋಧ ವ್ಯಕ್ತವಾಗುತ್ತಿದೆ. ಇದೆಲ್ಲದರ ನಡುವೆಯೂ ಟೀಮ್ ಇಂಡಿಯಾ ಬಾಂಗ್ಲಾದೇಶದ ವಿರುದ್ಧದ ಈ ಪಂದ್ಯದಲ್ಲಿ ಭರ್ಜರಿ 5 ರನ್ ರೋಚಕ ಗೆಲುವು ದಾಖಲಿಸಿದ್ದು ಒಂದು ಮಟ್ಟದ ಸಮಾಧಾನದ ಸಂಗತಿ ಆಗಿದೆ.

Comments are closed.