ಬಿಗ್ ನ್ಯೂಸ್: ಕೋಚ್ ಆಗಲು ಬೆಂಗಳೂರಿಗೆ ಬಂದ ABD: ಬಂದಿಳಿದ ತಕ್ಷಣ ಹೇಳಿದ್ದೇನು ಗೊತ್ತೇ??

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಟಗಾರರಾದ ಎ ಬಿ ಡೆವಿಲಿಯರ್ಸ್ ಬಹಳ ವರ್ಷಗಳ ನಂತರ ಮತ್ತೆ ಬೆಂಗಳೂರಿಗೆ ಆಗಮಿಸಿದ್ದಾರೆ. ಐಪಿಎಲ್ 2023ರ ಟೂರ್ನಿ ಸಂಬಂಧ ಪಟ್ಟಂತೆ ಚರ್ಚಿಸಲು ಆಟಗಾರರೊಂದಿಗೆ ಮಾತನಾಡಲು ಬಂದಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಈ ಹಿಂದೆ ಅವರು 2023ರ ಐಪಿಎಲ್ ನಲ್ಲಿ ತಾನು ಆರ್‌ಸಿಬಿ ಜೊತೆಗೆ ಇರುವುದಾಗಿ ಹೇಳಿಕೊಂಡಿದ್ದರು ಆದರೆ ಆಟಗಾರನಾಗಿ ಇರುವುದಿಲ್ಲ ಎಂದು ಸಹ ಹೇಳಿ ನಿರಾಸೆ ಮೂಡಿಸಿದ್ದರು. ನವೆಂಬರ್ 15ರೊಳಗೆ ಆಟಗಾರರನ್ನು ಅಂತಿಮಗೊಳಿಸಲು ಕೊನೆಯ ದಿನಾಂಕವಾಗಿದೆ. ಈ ವೇಳೆ ಎಬಿಡಿ ಆಗಮನ ಕುತೂಹಲ ಹುಟ್ಟಿಸಿರುವುದಲ್ಲದೆ ಅವರು ಈ ಬಾರಿಯ ಟೂರ್ನಿಯಲ್ಲಿ ಅತ್ಯಂತ ಪ್ರಮುಖ ಪಾತ್ರ ನಿಭಾಯಿಸಲಿದ್ದಾರೆ. ಐಪಿಎಲ್ ಮಿನಿ ಹರಾಜಿಗೆ ಮೊದಲು ತಂಡವನ್ನು ಬಲಗೊಳಿಸಲು ಅವರು ಬಂದಿದ್ದಾರೆ. ಎಬಿಡಿ ಅವರು ಆಗಮಿಸಿರುವ ವಿಡಿಯೋವನ್ನು ಆರ್‌ಸಿಬಿ ತಂಡವು ಹಂಚಿಕೊಂಡಿದೆ.

ಬೆಂಗಳೂರಿಗೆ ಅವರು ಆಗಮಿಸಿರುವ ವಿಡಿಯೋ ಇದೀಗ ಆರ್‌ಸಿಬಿ ಟ್ವಿಟ್ಟರ್ ಖಾತೆಯಲ್ಲಿ ವೈರಲ್ ಆಗುತ್ತಿದೆ. ತಂಡದಲ್ಲಿ ಕೆಲವು ಮಹತ್ವದ ಬದಲಾವಣೆಗಳನ್ನು ಮಾಡುವ ಕುರಿತು ಚರ್ಚೆ ಮಾಡಲು ಎಬಿಡಿ ಅವರನ್ನು ಕರೆಸಿಕೊಳ್ಳಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ವೇಳೆ ಅನೇಕ ಸ್ಥಳೀಯ ಆಟಗಾರರಿಗೆ ಅವಕಾಶ ಒದಗಿ ಬರಲಿದ್ದು, ಯಾವ ಆಟಗಾರರಿಗೆ ಬಿಡುಗಡೆ ದೊರೆಯಲಿದೆ ಎನ್ನುವುದು ಕೂಡ ಕುತೂಹಲ ಮೂಡಿಸಿದೆ. ದಕ್ಷಿಣ ಆಫ್ರಿಕಾದ ಸೂಪರ್ ಸ್ಟಾರ್ ಕ್ರಿಕೆಟ್ ಎಬಿಡಿ ಅವರು ಆರ್‌ಸಿಬಿ ತಂಡದಲ್ಲಿ ಯಾವ ಪಾತ್ರವನ್ನು ನಿಭಾಯಿಸಲಿದ್ದಾರೆ ಎನ್ನುವುದು ಇನ್ನೂ ಅಂತಿಮಗೊಂಡಿಲ್ಲ. ಒಟ್ಟಿನಲ್ಲಿ ಅವರು ಮೈದಾನಕ್ಕಿಳಿದು ಆಡುವುದಿಲ್ಲ. ಹೀಗಿದ್ದರೂ ಕೂಡ ಎಬಿಡಿ ಆಗಮನ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸ ತಂದಿದೆ. ಸದ್ಯ ವಿರಾಟ್ ಕೊಹ್ಲಿ ಭಾರತದಲ್ಲಿಲ್ಲ. ಇನ್ನು ಉಳಿದ ಆಟಗಾರರೊಂದಿಗೆ ಎಬಿಡಿ ಚರ್ಚಿಸಲಿದ್ದಾರೆ ಎಂದು ತಿಳಿದುಬಂದಿದೆ.

abd kohli rcb ipl 2023 | ಬಿಗ್ ನ್ಯೂಸ್: ಕೋಚ್ ಆಗಲು ಬೆಂಗಳೂರಿಗೆ ಬಂದ ABD: ಬಂದಿಳಿದ ತಕ್ಷಣ ಹೇಳಿದ್ದೇನು ಗೊತ್ತೇ??
ಬಿಗ್ ನ್ಯೂಸ್: ಕೋಚ್ ಆಗಲು ಬೆಂಗಳೂರಿಗೆ ಬಂದ ABD: ಬಂದಿಳಿದ ತಕ್ಷಣ ಹೇಳಿದ್ದೇನು ಗೊತ್ತೇ?? 2

ಕಳೆದ ಐಪಿಎಲ್ ನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಕ್ವಾಲಿಫಿಯರ್ – 2 ಪಂದ್ಯದಲ್ಲಿ ಆರ್ ಸಿ ಬಿ ಸೋತಿತ್ತು. ಹೀಗಾಗಿ ಕಪ್ ಗೆಲ್ಲುವ ಕನಸು ಇಂದಿಗೂ ಕನಸಾಗಿಯೇ ಉಳಿದಿದೆ. ಹೀಗಾಗಿ ಈ ಬಾರಿಯ ಐಪಿಎಲ್ ನಲ್ಲಿ ತಂಡವನ್ನು ಗೆಲ್ಲಿಸುವ ಉದ್ದೇಶದಿಂದ ಎಬಿಡಿ ಮಾರ್ಗದರ್ಶನ ನೀಡುವ ಸಾಧ್ಯತೆ ಇದೆ. ಬ್ಯಾಟಿಂಗ್ ವಿಭಾಗದಲ್ಲಿ ಎಬಿಡಿ ಕೆಲಸ ಮಾಡುವ ನಿರೀಕ್ಷೆ ಹೆಚ್ಚಾಗಿದೆ. ಅವರು ತಂಡದಲ್ಲಿ ಪವರ್ ಸ್ಪೆಷಲಿಸ್ಟ್ ಆಗಿ ಅಥವಾ ಬ್ಯಾಟಿಂಗ್ ಮಾರ್ಗದರ್ಶಕರಾಗಿ ಪಾತ್ರ ನಿರ್ವಹಿಸುವ ಸಾಧ್ಯತೆ ಎದ್ದು ಕಾಣುತ್ತಿದೆ. ಅವರ ಮಾರ್ಗದರ್ಶನ ಸಾಕಷ್ಟು ಯುವ ಆಟಗಾರರಿಗೆ ಉತ್ತೇಜನ ನೀಡುವುದರ ಜೊತೆಗೆ ತಂಡವು ಗೆಲುವಿನ ಕಡೆಗೆ ಗಮನ ಹರಿಸುವುದರಲ್ಲಿ ಸಹಾಯಕ ಆಗಲಿದೆ.

Comments are closed.