ಝಮೀರ್ ಪುತ್ರನ ಬನಾರಸ್ ಮೂವಿ ಪ್ರಮೋಷನ್ ಮಾಡಲು ದರ್ಶನ್ ತೆಗೆದುಕೊಂಡ ಚಿಲ್ಲರೆ ಹಣ ಎಷ್ಟು ಗೊತ್ತೇ?? ಇಷ್ಟಕ್ಕೆ ಇಷ್ಟೆಲ್ಲ ನಾ?

ನಟ ದರ್ಶನ್ ಕೆಲವು ದಿನಗಳ ಹಿಂದೆ ಜಮೀರ್ ಪುತ್ರನ ಬನಾರಸ್ ಚಿತ್ರದ ಪ್ರಮೋಷನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮ ನಡೆದು ಸಾಕಷ್ಟು ದಿನಗಳೆ ಕಳೆದರು ದರ್ಶನ್ ರವರು ಈ ಕಾರ್ಯಕ್ರಮಕ್ಕೆ ಭಾಗವಹಿಸಲು ತೆಗೆದುಕೊಂಡ ಸಂಭಾವನೆಯ ಬಗ್ಗೆ ಚರ್ಚೆಯಾಗುತ್ತಿದೆ. ಹಾಗಿದ್ದರೆ ಅವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆಗೆದುಕೊಂಡ ಹಣ ಬರೋಬ್ಬರಿ ಎಷ್ಟು ಗೊತ್ತ, ಆದರೆ ಬಗ್ಗೆ ಇಲ್ಲಿದೆ ಮಾಹಿತಿ. ಜಮೀರ್ ಅಹಮದ್ ಅವರ ಪುತ್ರ ಜೈದ್ಖಾನ್ ಅವರ ಮೊದಲ ಸಿನಿಮಾವಾದ ಬನಾರಸ್ ಚಿತ್ರದ ಪ್ರಿ ರಿಲೀಸ್ ಇವೆಂಟ್ ಕಾರ್ಯಕ್ರಮದಲ್ಲಿ ನಟ ದರ್ಶನ್ ಭಾಗಿಯಾಗಿದ್ದರು. ಎಂದಿನಂತೆ ತಮ್ಮ ಚಪ್ಪಲಿ ತೆಗೆದು ಭಾಷಣ ಶುರು ಮಾಡಿದ ಅವರು ತಮ್ಮ ಅಭಿಮಾನಿಗಳನ್ನು ಪ್ರೀತಿಯಿಂದ ಸೆಲೆಬ್ರಿಟಿಗಳೆಂದು ಕರೆದು ಮಾತು ಶುರು ಮಾಡಿದರು.

ಬನಾರಸ್ ಚಿತ್ರವನ್ನು ಸಾಕಷ್ಟು ಮೆಚ್ಚಿಕೊಂಡರು. ಇದೇ ವೇಳೆ ಪ್ರೀತಿಯಿಂದ ಜೈದ್ ಖಾನ್ ಗೆ ಬೈದ ದರ್ಶನ್ “ಜೈದ್ ಒಂದು ರೀತಿ ಬೆನ್ನಿಗೆ ಹತ್ತಿದ ಬೇತಾಳದಂತೆ, ಅಂಟಿಕೊಂಡರೆ ಬಿಡುವುದೇ ಇಲ್ಲ. ಯಾವಾಗಲೋ ಬನಾರಸ್ ಚಿತ್ರವನ್ನು ನೋಡುವುದಾಗಿ ಹೇಳಿದ್ದೆ, ಅದನ್ನೇ ನೆಚ್ಚಿಕೊಂಡ ಆತ ಆ ಚಿತ್ರ ನೋಡುವವರೆಗೂ ಬಿಡಲೇ ಇಲ್ಲ. ಒಂದು ದಿನ ಜಿಮ್ ಮುಗಿಸಿ ಮನೆಗೆ ಬಂದಾಗ ಆಗಲೇ ಮನೆಯಲ್ಲಿ ಕಾಯುತ್ತಾ ಕುಳಿತಿದ್ದ. ಕೊನೆಗೂ ಚಿತ್ರ ನೋಡಲೇಬೇಕಾಯಿತು” ಎಂದು ತಮಾಷೆಯಾಗಿ ಹೇಳಿದ್ದಾರೆ. ನಾನು ಸಿನಿಮಾ ನೋಡಿದ್ದು ಮಧ್ಯಾಹ್ನ ಊಟ ಮಾಡಿದ ನಂತರ. ನನಗಂತೂ ಊಟ ಮಾಡಿದ ಮೇಲೆ ನಿದ್ದೆ ಹತ್ತುತ್ತದೆ, ಆದರೆ ಈ ಚಿತ್ರ ನನ್ನ ನಿದ್ದೆಯನ್ನು ಹೋಗಿಸಿಬಿಟ್ಟಿತು. ಅಷ್ಟು ಚೆನ್ನಾಗಿದೆ ಚಿತ್ರ, ನನಗೆ ಬಹಳ ಇಷ್ಟವಾಯಿತು. ಇದು ಕಂಟೆಂಟ್ ಇರುವ ಸಿನಿಮಾ. ಚಿತ್ರ ಇಷ್ಟವಾಗಿದ್ದಕ್ಕೆ ನಾನು ಈ ಪ್ರಮೋಷನ್ ಕಾರ್ಯಕ್ರಮಕ್ಕೆ ಬಂದಿದ್ದೇನೆ. ಜಮೀನ್ ನನಗೆ ಅಣ್ಣ ಇದ್ದಹಾಗೆ ಎಂದು ಪ್ರೀತಿಯಿಂದ ಮಾತನಾಡಿದ್ದಾರೆ.

banaras darshan | ಝಮೀರ್ ಪುತ್ರನ ಬನಾರಸ್ ಮೂವಿ ಪ್ರಮೋಷನ್ ಮಾಡಲು ದರ್ಶನ್ ತೆಗೆದುಕೊಂಡ ಚಿಲ್ಲರೆ ಹಣ ಎಷ್ಟು ಗೊತ್ತೇ?? ಇಷ್ಟಕ್ಕೆ ಇಷ್ಟೆಲ್ಲ ನಾ?
ಝಮೀರ್ ಪುತ್ರನ ಬನಾರಸ್ ಮೂವಿ ಪ್ರಮೋಷನ್ ಮಾಡಲು ದರ್ಶನ್ ತೆಗೆದುಕೊಂಡ ಚಿಲ್ಲರೆ ಹಣ ಎಷ್ಟು ಗೊತ್ತೇ?? ಇಷ್ಟಕ್ಕೆ ಇಷ್ಟೆಲ್ಲ ನಾ? 2

ಬನಾರಸ್ ಚಿತ್ರದ ಪ್ರಮೋಷನ್ ನಲ್ಲಿ ಪುನೀತ್ ಅವರ ವಿಡಿಯೋ ಒಂದನ್ನು ಪ್ಲೇ ಮಾಡಲಾಯಿತು. ಆಗ ದರ್ಶನ್ ಅವರು ತಮಗೆ ಅರಿವಿಲ್ಲದಂತೆ ಅತ್ತರು. ಕಾರ್ಯಕ್ರಮದ ನಡುವೆ ಬೊಂಬೆ ಹೇಳುತೈತೆ ಹಾಡನ್ನು ಪ್ಲೇ ಮಾಡಲಾಯಿತು. ಹಾಡು ಶುರುವಾದ ತಕ್ಷಣ ದರ್ಶನ್ ರವರು ಮೇಲೆ ಎದ್ದು ನಿಂತರು. ಅವರ ಜೊತೆಗೆ ವೇದಿಕೆ ಮುಂಭಾಗದಲ್ಲಿದ್ದ ಎಲ್ಲಾ ಅತಿಥಿಗಳು ಎದ್ದು ನಿಂತರು. ಹಾಡು ಪ್ಲೇ ಆಗುತ್ತಿದ್ದ ಹಾಗೆಯೇ ದರ್ಶನ್ ಅವರಿಗೆ ಅರಿವಿಲ್ಲದ ಹಾಗೆ ಅವರ ಕಣ್ಣಲ್ಲಿ ನೀರು ತುಂಬಿತ್ತು, ಅವರು ಕಣ್ಣೀರು ಹಾಕಿದರು. ಆಗ ಪಕ್ಕದಲ್ಲಿದ್ದು ಸ್ನೇಹಿತರು ಅವರಿಗೆ ಕರ್ಚಿಫ್ ನೀಡಿದರು. ಪುನೀತ್ ಅವರ ಮೇಲಿದ್ದ ಅಭಿಮಾನಕ್ಕೆ ಅವರಿಗೆ ಅರಿವೇ ಇಲ್ಲದ ಹಾಗೆ ಅವರು ಕಣ್ಣೀರು ಹಾಕಿದರು. ಅಂದ ಹಾಗೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಈ ಒಂದು ಪ್ರಮೋಷನ್ ಕಾರ್ಯಕ್ರಮಕ್ಕೆ ಬರೋಬ್ಬರಿ ಎಷ್ಟು ಸಂಭವನೆ ತೆಗೆದುಕೊಂಡಿದ್ದರು ಗೊತ್ತಾ? ಒಂದಲ್ಲ ಎರಡಲ್ಲ ಬರೋಬ್ಬರಿ ನಾಲ್ಕು ಕೋಟಿ ಸಂಭಾವನೆ. ಹೌದು ಕೇವಲ ಕೆಲವು ಸಮಯ ಪ್ರಮೋಷನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಕ್ಕೆ ದರ್ಶನ್ ರವರಿಗೆ ಸಿಕ್ಕಿದ್ದು ಬರೋಬ್ಬರಿ ನಾಲ್ಕು ಕೋಟಿ ರೂಪಾಯಿ ಸಂಭಾವನೆ.

Comments are closed.