ಅಪ್ಪುಗೆ ಕರ್ನಾಟಕ ರತ್ನ ನೀಡಲು ಎನ್ಟಿಆರ್ ಗೆ ಸರ್ಕಾರ ನೀಡಲೇಬೇಕಾದ ಗೌರವ ಧನ ಎಷ್ಟಿತ್ತು ಗೊತ್ತೇ?? ಎನ್ಟಿಆರ್ ತೆಗೆದುಕೊಂಡದ್ದು ಎಷ್ಟು ಗೊತ್ತೇ??

ಮೊನ್ನೆ ಮೊನ್ನೆಯಷ್ಟೇ ಪುನೀತ್ ರಾಜಕುಮಾರ್ ರವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಲಾಯಿತು. ನವೆಂಬರ್ ಒಂದರ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಅವರಿಗೆ ಕಳೆದ ವರ್ಷದಲ್ಲಿ ಘೋಷಿಸಲಾಗಿದ್ದ ಕರ್ನಾಟಕ ರತ್ನ ಪ್ರಶಸ್ತಿ ಪ್ರಧಾನ ಮಾಡಲಾಯಿತು. ವಿಧಾನಸೌಧದ ಮುಂಭಾಗದ ಮೆಟ್ಟಿಲುಗಳ ಬಳಿ ಕಾರ್ಯಕ್ರಮ ವೈಭವಯುತವಾಗಿ ಜರಗಿತ್ತು. ಈ ಕಾರ್ಯಕ್ರಮದ ಮತ್ತೊಂದು ಆಕರ್ಷಣೆ ಎಂದರೆ ಅದು ತೆಲುಗಿನ ಸೂಪರ್ಸ್ಟಾರ್ ಜೂನಿಯರ್ ಎನ್ಟಿಆರ್ ಮತ್ತು ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್. ಹೌದು ಸ್ಟಾರ್ ನಟರು ಈ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ ಆಗಮಿಸಿದ್ದರು. ಶ್ರೀಮತಿ ಅಶ್ವಿನಿ ಪುನಿತ್ ಅವರು ಪುನೀತ್ ರಾಜಕುಮಾರ್ ಅವರ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿದರು. ಸುಧಾ ಮೂರ್ತಿಯವರು ಪ್ರಶಸ್ತಿಯನ್ನು ಸರ್ಕಾರದ ವತಿಯಿಂದ ನೀಡಿದರು. ಡಾಕ್ಟರ್ ರಾಜ್ ಕುಟುಂಬ ಹಾಗೂ ರಾಜ್ಯದ ಪ್ರಮುಖ ರಾಜಕಾರಣಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಆದರೆ ಇದೀಗ ಜೂನಿಯರ್ ಎನ್ಟಿಆರ್ ಅವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪಡೆದ ಸಂಭಾವನೆಯ ಬಗ್ಗೆ ಚರ್ಚೆಯಾಗುತ್ತಿದೆ. ಹಾಗಿದ್ದರೆ ಅವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸರ್ಕಾರದಿಂದ ಪಡೆದ ಹಣ ಎಷ್ಟು ಎನ್ನುವುದರ ಕುರಿತ ಮಾಹಿತಿ ಇಲ್ಲಿದೆ. ಮೊನ್ನೆ ನಡೆದ ಕರ್ನಾಟಕ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಅತ್ಯಂತ ಪ್ರಮುಖ ಆಕರ್ಷಣೆ ಎಂದರೆ ಅದು ಜೂನಿಯರ್ ಎನ್ಟಿಆರ್. ಹೌದು ಮೊದಲಿನಿಂದಲೂ ಪುನೀತ್ ಹಾಗು ಎನ್ ಟಿ ಆರ್ ಅವರ ನಡುವೆ ಒಳ್ಳೆಯ ಭಾಂದವ್ಯವಿದೆ. ಇಬ್ಬರು ಒಳ್ಳೆಯ ಸ್ನೇಹಿತರು. ಈ ಮೊದಲು ಮೊಟ್ಟ ಮೊದಲ ಬಾರಿಗೆ ಎನ್ಟಿಆರ್ ರವರು ಪುನೀತ್ ರಾಜಕುಮಾರ್ ಅವರ ಚಿತ್ರಕ್ಕಾಗಿ ಗೆಳೆಯ ಗೆಳೆಯ ಹಾಡನ್ನು ಹಾಡಿದರು. ಅಲ್ಲದೆ ಎನ್ಟಿಆರ್ ಅವರ ಮೂಲ ಕುಟುಂಬ ಕರ್ನಾಟಕ ಆಗಿರುವುದರಿಂದ ಅವರ ಕನ್ನಡ ಭಾಷಣ ಎಲ್ಲರಿಗೂ ಮೆಚ್ಚುಗೆಯಾಯಿತು. ಅತ್ಯಂತ ಸರಳ ಮತ್ತು ಅರ್ಥಗರ್ಭಿತವಾಗಿ ಕನ್ನಡದಲ್ಲಿ ಅವರು ಭಾಷಣ ಮಾಡಿದ್ದರ ಕುರಿತು ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

jr ntr appu 1 | ಅಪ್ಪುಗೆ ಕರ್ನಾಟಕ ರತ್ನ ನೀಡಲು ಎನ್ಟಿಆರ್ ಗೆ ಸರ್ಕಾರ ನೀಡಲೇಬೇಕಾದ ಗೌರವ ಧನ ಎಷ್ಟಿತ್ತು ಗೊತ್ತೇ?? ಎನ್ಟಿಆರ್ ತೆಗೆದುಕೊಂಡದ್ದು ಎಷ್ಟು ಗೊತ್ತೇ??
ಅಪ್ಪುಗೆ ಕರ್ನಾಟಕ ರತ್ನ ನೀಡಲು ಎನ್ಟಿಆರ್ ಗೆ ಸರ್ಕಾರ ನೀಡಲೇಬೇಕಾದ ಗೌರವ ಧನ ಎಷ್ಟಿತ್ತು ಗೊತ್ತೇ?? ಎನ್ಟಿಆರ್ ತೆಗೆದುಕೊಂಡದ್ದು ಎಷ್ಟು ಗೊತ್ತೇ?? 2

ಅಲ್ಲದೆ ಅವರು ಕಾರ್ಯಕ್ರಮದಲ್ಲಿ ನಡೆದುಕೊಂಡ ರೀತಿ, ಹಿರಿಯರಿಗೆ ತೋರಿದ ಗೌರವ ಸ್ವತಹ ಪುನೀತ್ ಅವರನ್ನೇ ನೆನಪಿಸುವಂತಿದ್ದು ಪುನೀತ್ ಗೆ ನಿಜವಾದ ಗೆಳೆಯ ಎನ್ ಟಿ ಆರ್ ಎಂದು ಜನ ಕೊಂಡಾಡುತ್ತಿದ್ದಾರೆ. ಭಾಷಣದ ವೇಳೆ ನಾನು ಒಬ್ಬ ದೊಡ್ಡ ನಟನಾಗಿ ಇಲ್ಲಿಗೆ ಬಂದಿಲ್ಲ ಬದಲಿಗೆ ಪುನೀತ್ ಅವರ ಒಬ್ಬ ಒಳ್ಳೆಯ ಗೆಳೆಯನಾಗಿ ನಾನು ಇಲ್ಲಿಗೆ ಬಂದಿದ್ದೇನೆ ಎಂದು ಅವರು ಹೇಳಿದ್ದರು. ಪ್ರಶಸ್ತಿ ಪ್ರಧಾನ ನೀಡುವ ವೇಳೆ ಸುಧಾ ಮೂರ್ತಿಯವರು, ಶ್ರೀಮತಿ ಅಶ್ವಿನಿ ಪುನೀತ್ ಅವರು ವೇದಿಕೆ ಮೇಲೆ ಆಗಮಿಸಿದರು. ಆಗ ಅವರಿಗೆಂದು ಆಸನದ ವ್ಯವಸ್ಥೆ ಮಾಡಿರಲಾಗಿರಲಿಲ್ಲ. ಆಗ ಜೂನಿಯರ್ ಎನ್ಟಿಆರ್ ಸ್ವತಃ ತಾವೇ ತಾವು ಕುಳಿತಿದ್ದ ಆಸನವನ್ನು ಬಿಟ್ಟುಕೊಟ್ಟರು. ಆಗಾಗಲೇ ಸಾಕಷ್ಟು ಮಳೆ ಬಂದು ವೇದಿಕೆ ನೆನೆದಿತ್ತು. ಈ ವೇಳೆ ಅಶ್ವಿನಿ ಅವರಿಗೆ ಆಸನ ಬಿಟ್ಟು ಕೊಟ್ಟಿದ್ದಲ್ಲದೆ ಅವರು ಕೂರಬೇಕಿದ್ದ ಕುರ್ಚಿಯನ್ನು ಸ್ವತಃ ಒರೆಸಿ ಅವರನ್ನು ಕೂರಿಸಿದರು. ನಂತರ ಸುಧಾಮೂರ್ತಿಯವರು ಬಂದಾಗ ಅವರನ್ನು ಅತ್ಯಂತ ಪ್ರೀತಿ ಗೌರವದಿಂದ ಮಾತನಾಡಿಸಿದ್ದರು.

ಸುಧಾ ಮೂರ್ತಿಯವರು ಅತ್ಯಂತ ಆತ್ಮೀಯವಾಗಿ ಅವರೊಂದಿಗೆ ಮಾತನಾಡಿದರು. ನಂತರ ಅವರು ಕೂರಲು ಹೊರಟ ಕುರ್ಚಿಯನ್ನು ತಾವೇ ಸ್ವತಃ ಒರೆಸಿ ಅವರನ್ನು ಕೂಡಿಸಿ ತಾವು ಅವರ ಪಕ್ಕ ಕುಳಿತು ಅತ್ಯಂತ ಪ್ರೀತಿಯಿಂದ ನಡೆದುಕೊಂಡರು. ಅವರ ಈ ನಡೆಗೆ ಸಾಕಷ್ಟು ಪ್ರಶಂಸೆಯ ಮಾತುಗಳು ಕೇಳಿ ಬಂದವು. ಅಂದ ಹಾಗೆ ಜೂನಿಯರ್ ಎನ್ಟಿಆರ್ ಅವರು ಈ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪಾಲ್ಗೊಳ್ಳಲು ಸರ್ಕಾರದಿಂದ 3000 ಸಂಭಾವನೆ ಕೊಡಬೇಕಿತ್ತು, ಆದರೆ ಅಷ್ಟು ದೊಡ್ಡ ನಟನೆಗೆ ಇಷ್ಟು ಕಡಿಮೆ ಸಂಭಾವನೆ, ಸೂಕ್ತವಲ್ಲ ಎನ್ನುವ ಕಾರಣಕ್ಕೆ ಸರ್ಕಾರ ಬರೋಬ್ಬರಿ ಎರಡೂವರೆ ಲಕ್ಷ ಸಂಭಾವನೆ ನೀಡಲು ನಿರ್ಧರಿಸಿತಂತೆ, ಆದರೆ ಜೂನಿಯರ್ ಎನ್ಟಿಆರ್ ಅವರು ಒಂದು ರೂಪಾಯಿ ಕೂಡ ಸಂಭಾವನೆ ತೆಗೆದುಕೊಳ್ಳಲು ನಿರಾಕರಿಸಿದ್ದಾರೆ. ಇದು ನನ್ನ ಸ್ನೇಹಿತನ ಕಾರ್ಯಕ್ರಮ, ಇದಕ್ಕೆ ನಾನು ಹಣ ತೆಗೆದುಕೊಳ್ಳುವುದಿಲ್ಲ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದೇ ನನ್ನ ಅದೃಷ್ಟ ಎಂದು ಹೇಳಿ ಅವರು ಒಂದು ರೂಪಾಯಿ ಸಂಭಾವನೆಯನ್ನು ಕೂಡ ಪಡೆದಿಲ್ಲ.

Comments are closed.