ದಿಡೀರ್ ಎಂದು ಅಪ್ಪು ಸಮಾಧಿಗೆ ಬೇಟಿ ಕೊಟ್ಟ ದರ್ಶನ್ ಹಾಗೂ ಪತ್ನಿ ಏನು ಮಾಡಿದ್ದಾರೆ ಗೊತ್ತಾ? ಸಮಾಧಿ ಮುಂದೆ ದರ್ಶನ್ ಹೇಳಿದ್ದೇನು ಗೊತ್ತೇ??

ಇಂದು ಪುನೀತ್ ಅವರ ಒಂದು ವರ್ಷದ ಸ್ಮರಣೆ. ಇದರ ಅಂಗವಾಗಿ ಇಂದು ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಅವರ ಪತ್ನಿ ಅಪ್ಪು ಅವರ ಸಮಾಧಿಯ ದರ್ಶನ ಪಡೆದರು. ಈ ವೇಳೆ ಪುನೀತ್ ಅವರನ್ನು ನೆನೆದು ದರ್ಶನ್ ಭಾವುಕರಾದರು. ಪುನೀತ್ ಅವರು ನಮ್ಮನ್ನೆಲ್ಲ ಅಗಲಿ ಸರಿಯಾಗಿ ಒಂದು ವರ್ಷ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಅವರ ಒಂದು ವರ್ಷದ ಪುಣ್ಯ ಸ್ಮರಣೆ ನಡೆಯುತ್ತಿದ್ದು ನೆನ್ನೆ ರಾತ್ರಿಯಿಂದಲೇ ಸಾಗರೋಪಾದಿಯಲ್ಲಿ ಅಭಿಮಾನಿಗಳು ಅವರ ಸಮಾಧಿ ಸ್ಥಳಕ್ಕೆ ಆಗಮಿಸುತ್ತಿದ್ದಾರೆ. ಎರಡು ಲಕ್ಷಕ್ಕೂ ಅಧಿಕ ಅಭಿಮಾನಿಗಳು ಅಪ್ಪುವಿನ ದರ್ಶನ ಮಾಡಲಿದ್ದಾರೆ ಎಂದು ಅಂದಾಜಿಸಲಾಗಿದೆ. ಕಂಠೀರವ ಸ್ಟುಡಿಯೋದಲ್ಲಿ ಅಭಿಮಾನಿಗಳ ಸಾಗರವೇ ಜಮಾಹಿಸಿದೆ.

ನೆಚ್ಚಿನ ನಟನ ನೆನಪಿನಲ್ಲಿ ಲಕ್ಷಾಂತರ ಜನರು ಸೇರಿದ್ದಾರೆ. ಅಪ್ಪು ನೆನೆದು ಭಾವುಕರಾಗುತ್ತಿದ್ದಾರೆ, ಕಣ್ಣೀರು ಹಾಕುತ್ತಿದ್ದಾರೆ. ನಮ್ಮನ್ನೆಲ್ಲಾ ಯಾಕೆ ಬಿಟ್ಟು ಹೋದಿರಿ ಎಂದು ಅಭಿಮಾನಿಗಳು ಮುಗ್ಧವಾಗಿ ಕಣ್ಣೀರಿಡುತ್ತಾ ಕೇಳುತ್ತಿರುವ ಘಟನೆಗಳು ಕಂಡು ಬರುತ್ತಿವೆ. ಅಪ್ಪು ದರ್ಶನಕ್ಕೆ ಬರುವ ಅಭಿಮಾನಿಗಳಿಗೆ ಅನ್ನ ಸಂತರ್ಪಣೆ ವ್ಯವಸ್ಥೆಯನ್ನು ಸಹ ಮಾಡಲಾಗಿದೆ. ಎಲ್ಲರೂ ಮೆಚ್ಚಿಕೊಳ್ಳುವಂತೆ ಆದರ್ಶವಾಗಿ ಬದುಕು ಸಾಗಿಸಿದವರು ಪುನೀತ್ ರಾಜಕುಮಾರ್. ಅವರು ನಮ್ಮನ್ನೆಲ್ಲ ಅಗಲಿ ಒಂದು ವರ್ಷವೇ ಕಳೆದರೂ ಕೂಡ ಅವರ ನೆನಪು ಇನ್ನೂ ಮಾಸಿಲ್ಲ. ಅಷ್ಟರಮಟ್ಟಿಗೆ ಅವರು ಬದುಕಿ ಹೋದವರು. ಯಾವ ಕಾರ್ಯಕ್ರಮವೇ ಇರಲಿ, ಸಮಾರಂಭವೇ ಇರಲಿ ಅವರನ್ನು ನೆನೆಯದ ಘಳಿಗೆ ಇಲ್ಲ.

appu darshan vijayalakshmi | ದಿಡೀರ್ ಎಂದು ಅಪ್ಪು ಸಮಾಧಿಗೆ ಬೇಟಿ ಕೊಟ್ಟ ದರ್ಶನ್ ಹಾಗೂ ಪತ್ನಿ ಏನು ಮಾಡಿದ್ದಾರೆ ಗೊತ್ತಾ? ಸಮಾಧಿ ಮುಂದೆ ದರ್ಶನ್ ಹೇಳಿದ್ದೇನು ಗೊತ್ತೇ??
ದಿಡೀರ್ ಎಂದು ಅಪ್ಪು ಸಮಾಧಿಗೆ ಬೇಟಿ ಕೊಟ್ಟ ದರ್ಶನ್ ಹಾಗೂ ಪತ್ನಿ ಏನು ಮಾಡಿದ್ದಾರೆ ಗೊತ್ತಾ? ಸಮಾಧಿ ಮುಂದೆ ದರ್ಶನ್ ಹೇಳಿದ್ದೇನು ಗೊತ್ತೇ?? 2

ಇದೀಗ ಅವರು ನಮ್ಮನ್ನೆಲ್ಲ ಅಗಲಿ ಒಂದು ವರ್ಷ ಕಳೆದಿದೆ. ಅವರ ಪುಣ್ಯ ಸ್ಮರಣೆ ಇಂದು ಕಂಠೀರವ ಸ್ಟುಡಿಯೋದಲ್ಲಿ ನಡೆಯುತ್ತಿದೆ. ಇದರ ಅಂಗವಾಗಿ ಲಕ್ಷಾಂತರ ಅಭಿಮಾನಿಗಳು ಅಪ್ಪು ದರ್ಶನಕ್ಕಾಗಿ ಆಗಮಿಸುತ್ತಿದ್ದಾರೆ. ಅಪ್ಪು ಸಮಾಧಿ ದರ್ಶನಕ್ಕಾಗಿ ಇಂದು ದರ್ಶನ್ ತಮ್ಮ ಪತ್ನಿಯೊಡನೆ ಆಗಮಿಸಿದ್ದರು. ಈ ವೇಳೆ ಅಪ್ಪುವನ್ನು ನೆನೆದು ಅವರು ಭಾವುಕರಾಗಿದ್ದಾರೆ. ಅವರೊಂದಿಗಿನ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಯಾರು ಏನೇ ಹೇಳಿದರೂ ನೀವು ನನ್ನ ಮನಸ್ಸಿನಲ್ಲಿ ಸದಾ ಜೀವಂತ. ನಿಮ್ಮ ಬಗ್ಗೆ ನನಗೆ ಅಪಾರ ಗೌರವವಿದೆ. ಜೊತೆಗೆ ಎಲ್ಲರಿಗಿಂತ ಹೆಚ್ಚಿನ ಪ್ರೀತಿ ಇದೆ. ನಿಮ್ಮ ಆ ನಿಷ್ಕಲ್ಮಶ ನಗುವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ನಮ್ಮ ಮನೆ ಮನಸ್ಸಿನಲ್ಲಿ ನೀವು ಎಂದೆಂದಿಗೂ ಶಾಶ್ವತವಾಗಿ ಇರುತ್ತೀರಿ ಎಂದು ಹೇಳಿ ನಟ ದರ್ಶನ್ ಭಾವುಕರಾಗಿದ್ದಾರೆ.

Comments are closed.