ಗ್ಯಾಸ್ಟ್ರಿಕ್ ಸಮಸ್ಯೆಗೆ ಒಂದು ಸರಳ ಸಲಹೆ ಹಾಗೂ 100 ವರ್ಷ ಬದುಕಲು ಡಾ ಆಂಜನಪ್ಪ ಸರಳ ಸೂತ್ರ.

ನಮಸ್ಕಾರ ಸ್ನೇಹಿತರೇ ಈ ವೇಗದಿಂದ ಓಡುತ್ತಿರುವ ದುನಿಯಾದಲ್ಲಿ ನಮ್ಮ ಆರೋಗ್ಯವನ್ನು ಸ್ಥಿಮಿತದಲ್ಲಿ ಇಟ್ಟುಕೊಳ್ಳುವುದು ಬಹಳ ಕಷ್ಟಕರವಾಗಿ ಹೋಗಿಬಿಟ್ಟಿದೆ. ಅದರಲ್ಲೂ ಕೆಲ ಕಾಯಿಲೆಗಳು ನಮ್ಮನ್ನು ಇನ್ನಿಲ್ಲದಂತೆ ಕಾಡುತ್ತದೆ. ಈ ಬ್ಯುಸಿ ದುನಿಯಾದಲ್ಲಿ ಕೆಲವರಿಗೆ ಇವುಗಳನ್ನು ಗುಣಪಡಿಸಿಕೊಳ್ಳಲು ಸಮಯವಿರುವುದಿಲ್ಲ ಇನ್ನು ಕೆಲವರಿಗೆ ಇದನ್ನು ಗುಣಪಡಿಸಿಕೊಳ್ಳಲು ಹಣದ ಅಭಾವವಿರುತ್ತದೆ. ಇಂದು ನಾವು ಹೇಳಹೊರಟಿರುವ ಕಾಯಿಲೆ ಚಿಕ್ಕದಾದರೂ ನಮ್ಮನ್ನು ಬಹಳಷ್ಟು ಕಾಡುತ್ತದೆ.

ಹೌದು ನಾವು ಮಾತನಾಡುತ್ತಿರುವುದು ಗ್ಯಾಸ್ಟಿಕ್ ನ ಕುರಿತಂತೆ. ಗ್ಯಾಸ್ಟಿಕ್ ನಿಮ್ಮನ್ನು ಹಲವಾರು ರೂಪಗಳಲ್ಲಿ ಕಾಡುತ್ತದೆ ಇದರಿಂದ ಪರಿಹಾರ ಪಡೆಯುವುದು ಹೇಗೆ ಇದನ್ನು ಬರುವ ಮುಂಚೆ ತಡೆಯುವುದು ಹೇಗೆ ಎಂಬುದನ್ನು ನಾವು ಇಂದಿನ ವಿಷಯದಲ್ಲಿ ಹೇಳಲು ಹೊರಟಿದ್ದೇವೆ. ತಪ್ಪದೇ ಈ ವಿಷಯವನ್ನು ಪ್ರಾರಂಭದಿಂದ ಕೊನೆಯವರೆಗೂ ಓದಿ ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ.

ಹೌದು ತಜ್ಞರ ಪ್ರಕಾರ ನಾವು ಗ್ಯಾಸ್ಟಿಕ್ ನ್ನು ನಮ್ಮ ದೇಹದಿಂದ ದೂರ ಮಾಡಿಕೊಳ್ಳಲು ಇರುವ ಕೆಲವು ಮುನ್ನೆಚ್ಚರಿಕಾ ಕ್ರಮಗಳು ಏನೆಂದರೆ ನಾವು ಅತ್ಯಂತ ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ತಿನ್ನುವುದು ಬೇಡ. ಮಾತ್ರವಲ್ಲದೆ ನಾವು ಊಟದ ಸಂದರ್ಭದಲ್ಲಿ ಸರಿಯಾದ ಸಮಯಕ್ಕೆ ಸರಿಯಾದ ಪ್ರಮಾಣದಲ್ಲಿ ಊಟ ಮಾಡಬೇಕು. ಬೇರೆ ಬೇಡದ ಪದಾರ್ಥಗಳನ್ನು ತಿನ್ನುವುದರಿಂದ ಕೂಡ ಹೊಟ್ಟೆಯಲ್ಲಿ ಗ್ಯಾಸ್ ಫಾರ್ಮ್ ಆಗುತ್ತದೆ. ಇದು ನೇರವಾಗಿ ಗ್ಯಾಸ್ಟಿಕ್ ಗೆ ಆಹ್ವಾನ ನೀಡಿದಂತಾಗುತ್ತದೆ. ಕೆಲವೊಮ್ಮೆ ಗ್ಯಾಸ್ಟಿಕ್ ಅತಿಯಾದ ಪ್ರಮಾಣದಲ್ಲಿ ನಡೆದರೆ ಅಲ್ಸರ್ ಗೆ ಹೋಗುವ ಸಾಧ್ಯತೆ ಕೂಡ ಇರುತ್ತದೆ.

ಹಾಗಾಗಿ ಸರಿಯಾದ ಪ್ರಮಾಣದಲ್ಲಿ ಸರಿಯಾದ ಆರೋಗ್ಯಕರವಾದ ವಸ್ತುಗಳನ್ನು ತಿನ್ನಬೇಕು ಹೊರತು ಬೇಕಾಬಿಟ್ಟಿಯಾಗಿ ತಿಂದರೆ ಖಂಡಿತವಾಗಿ ಹೊಟ್ಟೆಯಲ್ಲಿ ಅದರಲ್ಲೂ ನಿಮ್ಮ ಜಠರದಲ್ಲಿ ಗ್ಯಾಸ್ಟಿಕ್ ಫಾರ್ಮ್ ಆಗುತ್ತದೆ‌. ಹಾಗೂ ಇದರಿಂದ ನಿಮ್ಮ ಕೆಲವೊಮ್ಮೆ ಗುದದ್ವಾರ ಹಾಗೂ ಕೆಳಗಿನ ಭಾಗದಲ್ಲಿ ಬೇರೆಬೇರೆ ರೋಗ ಬರುವ ಸಾಧ್ಯತೆ ಇರುತ್ತದೆ. ಉದಾಹರಣೆಗೆ ಮೂಲವ್ಯಾಧಿ ಇತ್ಯಾದಿ ಕ್ಯಾನ್ಸರ್ ಕುರಿತಾದಂತಹ ಕಾಯಿಲೆಗಳು ಬರುವ ಸಾಧ್ಯತೆ ಇರುತ್ತದೆ.

ನೋಡಿ ಸ್ನೇಹಿತರೆ ನೋಡಲು ಕೇವಲ ನಮಗೆ ಗ್ಯಾಸ್ಟಿಕ್ ಅಂತ ಅನಿಸುತ್ತದೆ ಆದರೆ ನಾವು ಸಮಯಕ್ಕೆ ಸರಿಯಾಗಿ ಊಟ ಮಾಡಿದರೆ ಅಥವಾ ಕೆಟ್ಟ ಕೆಟ್ಟ ಪದಾರ್ಥಗಳನ್ನು ತಿಂದರೆ ಗ್ಯಾಸ್ಟ್ರಿಕ್ ನಿಂದ ಬೇರೆ ಬೇರೆ ರೂಪ ಪಡೆದು ಅದು ತೀವ್ರ ಹಂತಕ್ಕೆ ಹೋಗುವ ಸಾಧ್ಯತೆ ಕೂಡ ಇರುತ್ತದೆ. ಇನ್ನು ನೀವು ನೂರು ವರ್ಷ ಬದುಕುವ ರಹಸ್ಯದ ಕುರಿತಂತೆ ಕೇಳಿದ್ದೀರಾ. ಹೌದು ಇದನ್ನು ವೈಜ್ಞಾನಿಕವಾಗಿ ಹೇಳುವುದಕ್ಕಿಂತ ಹೆಚ್ಚಾಗಿ ಸಾಮಾನ್ಯವಾಗಿ ಹೇಳಿ ನಿಮ್ಮನ್ನು ಮನಸ್ಸಿನಲ್ಲಿ ಅರ್ಥಮಾಡಿಕೊಳ್ಳುವಂತೆ ಮಾಡಲು ಪ್ರಯತ್ನಿಸುತ್ತೇನೆ.

ಹೌದು ಸರಿಯಾದ ಆರೋಗ್ಯ ಕ್ರಮ ಹಾಗೂ ಆಹಾರಕ್ರಮದ ಜೊತೆಗೆ ಇನ್ನೂ ಒಂದು ಅಂಶವನ್ನು ನೀವು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ನೀವು ಕೂಡ ತುಮಕೂರಿನ ಸಿದ್ದಗಂಗಾ ಶ್ರೀಗಳಂತೆ ಹಾಗೂ ಇತ್ತೀಚಿನ ದಿನಗಳಲ್ಲಿ ನಮ್ಮನ್ನು ಬಿಟ್ಟು ಹೋದ ಶತಾಯುಷಿ ದೊರೆ-ಭಗವಾನ್ ರಂತೆ ನೂರಕ್ಕೂ ಹೆಚ್ಚಿನ ವರ್ಷಗಳ ಕಾಲ ಬದುಕಲು ಸಾಧ್ಯ. ಮಂಕುತಿಮ್ಮನ ಕಗ್ಗದಲ್ಲಿ ಹೇಳಿದಂತೆ ಬೇರೆಯವರನ್ನು ನಗಿಸಿ ನೀವು ಕೂಡ ನಗಿಸಿ ನಗುತ ಬಾಳಿ ಎಂಬುದು ದೀರ್ಘಾಯುಷ್ಯದ ರಹಸ್ಯ ಎಂದೇ ಹೇಳಬಹುದು.

ಹೌದು ಎಂದು ನೀವು ಸದಾ ನಗುನಗುತ್ತಾ ಮನಸ್ಸಿಗೆ ಯಾವುದೇ ಭಾರವನ್ನು ನೀಡದೆ ಹೃದಯಕ್ಕೆ ಯಾವುದೇ ಒತ್ತಡವನ್ನು ಹೇಳೋದು ರಿಲ್ಯಾಕ್ಸ್ ನಲ್ಲಿ ಇರುತ್ತೀರೋ ಅಲ್ಲಿಯವರೆಗೆ ನೀವು ಯಾವ ಚಿಂತೆಯೂ ಇಲ್ಲದೆ ನೂರು ವರ್ಷಗಳ ಕಾಲ ಬದುಕಲು ಸಾಧ್ಯ ಎಂಬುದು ಕೆಲ ತಜ್ಞರ ಅಭಿಪ್ರಾಯ. ಚಿಂತೆಯನ್ನು ಆದಷ್ಟು ಕಡಿಮೆ ಮಾಡಿಕೊಂಡು ಉತ್ತಮ ಆಹಾರ ಕ್ರಮಗಳೊಂದಿಗೆ ಬದುಕಿದರೆ ಖಂಡಿತವಾಗಿ ನೀವು ಕೂಡ ಮೇಲೆ ನಾವು ಹೇಳಿದ ಶತಾಯುಷಿ ಗಳಲ್ಲಿ ನೀವು ಕೂಡ ಒಬ್ಬರು ಆಗಲು ಸಾಧ್ಯವಿದೆ. ಈ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡೋ ಮೂಲಕ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Comments are closed.