ಮತ್ತೊಮ್ಮೆ ಬಂಪರ್, ಚಿಲ್ಲರೆ ಸಂಭಾವನೆ ಪಡೆದಿದ್ದ ಮಂಜು ರವರಿಗೆ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಸಂಭಾವನೆ ಎಷ್ಟು ಗೊತ್ತೇ??

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಕಷ್ಟ ಪಟ್ಟು ಮೇಲೆ ಬಂದಿರುವ ನಿಜವಾದ ಅಸಲಿ ಪ್ರತಿಭೆ ಮಂಜು ರವರು, ಇಂದು ಕರ್ನಾಟಕದ ಬಿಗ್ ಬಾಸ್ ಗೆಲ್ಲುವ ನೆಚ್ಚಿನ ಸ್ಪರ್ದಿಗಳಲ್ಲಿ ಒಬ್ಬರಾಗಿದ್ದಾರೆ. ಇತ್ತೀಚಿಗೆ ಆಟವನ್ನು ಮರೆತಿದ್ದರೂ ಕೂಡ ಮನೆಯಿಂದ ಹೊರ ಬಂದು ಪ್ರೇಕ್ಷಕರ ಅಭಿಪ್ರಾಯಗಳೆಲ್ಲವನ್ನು ನೋಡಿ ಮತ್ತೊಮ್ಮೆ ಮನೆಯ ಒಳಗಡೆ ಹೋಗಿರುವ ಮಂಜು ರವರು, ಸ್ಟೇಜ್ ಮೇಲೆಯೇ ತಾವು ದಿವ್ಯ ರವರ ಸಹವಾಸ ಮಾಡಿ, ಆಟ ಮರೆಯುವುದಿಲ್ಲ ಎಂಬುದನ್ನು ತಿಳಿಸಿ ಹೋಗಿದ್ದಾರೆ.

ಸುದೀಪ್ ರವರು ಕೇಳಿದ ಪ್ರಶ್ನೆಗಳಿಗೆ ತಾವು ಈ ಬಾರಿ ಹೆಚ್ಚು ಸಿಂಗಲ್ ಆಗಿ ರೈಡ್ ಮಾಡುತ್ತೇನೆ, ದಿವ್ಯ ರವರ ಜೊತೆ ಹೋಗುವುದಿಲ್ಲ ಎಂದು ಸ್ಪಷ್ಟ ಪಡಿಸಿ ಮನೆಯ ಒಳಗಡೆ ಹೋಗಿದ್ದಾರೆ. ಹೀಗಿರುವಾಗ ಮನೆಯ ಒಳಗಡೆ ಪ್ರೇಕ್ಷಕರ ಎಲ್ಲ ಅಭಿಪ್ರಾಯ ತಿಳಿದುಕೊಂಡು ಹೋಗಿರುವ ಮಂಜು ರವರ ಆಟ ಹೇಗಿರಲಿದೆ ಎಂಬುದು ಬಾರಿ ಕುತೂಹಲ ಮೂಡಿಸಿದೆ. ಇದೇ ಸಮಯದಲ್ಲಿ ಮಂಜು ರವರಿಗೆ ಬಿಗ್ ಬಾಸ್ ಕಡೆಯಿಂದ ಸಿಹಿ ಸುದ್ದಿಯೊಂದು ಕೇಳಿ ಬಂದಿದೆ.

ಹೌದು ಸ್ನೇಹಿತರೇ, ಕಳೆದ ಬಾರಿ ಇತರ ಸ್ಪರ್ದಿಗಳಿಗೆ ಹೋಲಿಸಿದರೆ ಬಾರಿ ಕಡಿಮೆ ಸಂಭಾವನೆ ಪಡೆಯುತ್ತಿದ್ದ ಮಂಜು ಪಾವಗಡ ರವರು, ಕೇವಲ 35 ಸಾವಿರ ರೂಪಾಯಿಗಳನ್ನು ಸಂಭಾವನೆಯನ್ನಾಗಿ ವಾರಕ್ಕೆ ಪಡೆದು ಕೊಳ್ಳುತ್ತಿದ್ದರು. ಆದರೆ ಇದೀಗ ಜನಪ್ರಿಯತೆ ಹೆಚ್ಚಾಗಿರುವ ಕಾರಣ ಮಂಜು ರವರಿಗೆ ವಾಹಿನಿ ಕಡೆಯಿಂದ ಸಿಹಿ ಸುದ್ದಿಯೊಂದು ಸಿಕ್ಕಿದ್ದು, ಒಮ್ಮೆ ಮಂಜು ರವರಿಗೆ ಸಂಭಾವನೆ ಹೆಚ್ಚಳ ಮಾಡಲಾಗಿದ್ದು, ಈಗ ಪಡೆದುಕೊಳ್ಳುತ್ತಿದ್ದ 35 ಸಾವಿರಕ್ಕೆ ಇನ್ನು 20 ಸಾವಿರ ಸೇರಿಸಿ ಒಟ್ಟಾರೆಯಾಗಿ ಒಂದು ವಾರಕ್ಕೆ 55 ಸಾವಿರ ರೂಪಾಯಿಗಳನ್ನು ನೀಡಲಾಗಿದೆ. ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

Comments are closed.