ಕರ್ನಾಟಕದ ಜನತೆಯನ್ನು ಹಾಗೂ ಬಿಗ್ ಬಾಸ್ ಸ್ಪರ್ಧಿಗಳನ್ನು ಗೊಂದಲಕ್ಕೆ ತಳ್ಳಿದ ಪನ್ನೀರ್ ಕಥೆ ಏನು ಗೊತ್ತೇ? ಎಲ್ಲರಿಗೆ ಅದರದ್ದೇ ಚಿಂತೆ

ನಮಸ್ಕಾರ ಸ್ನೇಹಿತರೇ ಈಗಾಗಲೇ ಕಿರುತೆರೆ ಅತ್ಯಂತ ಶ್ರೀಮಂತ ಹಾಗೂ ದೊಡ್ಡ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ಓಟಿಟಿ ರೂಪದಲ್ಲಿ ಹೊಸ ರೂಪವನ್ನು ಪಡೆದುಕೊಂಡು ಈಗಾಗಲೇ ಪ್ರಸಾರವನ್ನು ಪ್ರಾರಂಭಿಸಿದೆ. ಎಲ್ಲಾ ಬಾರಿಯಂತೆ ಈ ಬಾರಿಯೂ ಕೂಡ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು ಕಾರ್ಯಕ್ರಮದ ನಿರೂಪಕನಾಗಿ 16 ಸ್ಪರ್ಧಿಗಳನ್ನು ಮನೆಯ ಒಳಗೆ ಕಳುಹಿಸಿಕೊಟ್ಟಿದ್ದಾರೆ.

ಕಾರ್ಯಕ್ರಮದ ಮೊದಲ ದಿನದಿಂದಲೇ ಒಂದು ವಿಚಾರ ಈಗ ದೊಡ್ಡ ಮಟ್ಟದಲ್ಲಿ ಸುದ್ದಿ ಆಗಲು ಆರಂಭವಾಗಿದೆ. ಅದೇನೆಂದರೆ ಪನ್ನೀರ್ ಸುದ್ದಿ. ಹೌದು ಗೆಳೆಯರೆ ಬಿಗ್ ಬಾಸ್ ವೇದಿಕೆಯಿಂದ ಬಿಗ್ ಬಾಸ್ ಮನೆಯ ಒಳಗೆ ಹೋಗುವ ಎಲ್ಲಾ ಸ್ಪರ್ಧಿಗಳ ಬಳಿಯೂ ಕೂಡ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು ನಿಮಗೆ ಪನ್ನೀರ್ ಇಷ್ಟನಾ ಎನ್ನುವುದಾಗಿ ಪ್ರಶ್ನೆಯನ್ನು ಕೇಳಿದ್ದಾರೆ. ಅದರಲ್ಲಿ ಕೆಲವರು ನನಗೆ ಪನ್ನೀರ್ ಎಂದರೆ ಇಷ್ಟ ಎಂದು ಹೇಳಿದರೆ ಇನ್ನು ಕೆಲವರು ಸುತಾರಂ ನನಗೆ ಪನ್ನೀರ್ ಎಂದರೆ ಇಷ್ಟ ಇಲ್ಲ ಎಂಬುದಾಗಿ ಉತ್ತರಿಸಿದ್ದಾರೆ. ಅದರಲ್ಲೂ ಸೋನು ಶ್ರೀನಿವಾಸ ಗೌಡ ಅವರಿಗೆ ಪನ್ನೀರ್ ವೆಜ್ಜಾ ನಾನ್ ವೆಜ್ಜಾ ಎಂದು ಕೇಳಿದಾಗ ವೆಜ್ ಎಂದು ಉತ್ತರಿಸುತ್ತಾರೆ. ಆಗ ಕಿಚ್ಚ ಸುದೀಪ್ ರವರು ಹೇಗೆ ಇದು ಗಿಡದಲ್ಲಿ ಬೆಳೆಯುತ್ತಾ ಎಂಬುದಾಗಿ ಪ್ರಶ್ನಿಸಿದಾಗ ಇಲ್ಲ ಹಾಲಿನಲ್ಲಿ ತಯಾರಿಸುವಂಥದ್ದು ಎಂದು ಹೇಳಿ ಗೊಂದಲಕ್ಕೆ ಉಂಟಾದ ಪರಿಸ್ಥಿತಿ ಕೂಡ ನಿರ್ಮಾಣವಾಗಿತ್ತು. ಅಷ್ಟಕ್ಕೂ ಈ ಪನೀರ್ ಎನ್ನುವುದು ಎಲ್ಲಿಂದ ಮೂಡಿ ಬಂದಿತ್ತು ಎಂಬುದನ್ನು ನೋಡುವುದಾದರೆ ಇದು ಆರ್ಯವರ್ಧನ ಗುರೂಜಿ ಅವರಿಂದ ಮೂಡಿ ಬಂದಿರುವ ವಿಚಾರ.

paneer | ಕರ್ನಾಟಕದ ಜನತೆಯನ್ನು ಹಾಗೂ ಬಿಗ್ ಬಾಸ್ ಸ್ಪರ್ಧಿಗಳನ್ನು ಗೊಂದಲಕ್ಕೆ ತಳ್ಳಿದ ಪನ್ನೀರ್ ಕಥೆ ಏನು ಗೊತ್ತೇ? ಎಲ್ಲರಿಗೆ ಅದರದ್ದೇ ಚಿಂತೆ
ಕರ್ನಾಟಕದ ಜನತೆಯನ್ನು ಹಾಗೂ ಬಿಗ್ ಬಾಸ್ ಸ್ಪರ್ಧಿಗಳನ್ನು ಗೊಂದಲಕ್ಕೆ ತಳ್ಳಿದ ಪನ್ನೀರ್ ಕಥೆ ಏನು ಗೊತ್ತೇ? ಎಲ್ಲರಿಗೆ ಅದರದ್ದೇ ಚಿಂತೆ 2

ಕೆಲವು ವರ್ಷಗಳ ಹಿಂದೆ ಆರ್ಯವರ್ಧನ ಗುರೂಜಿ ಅವರ ವಿಡಿಯೋ ಒಂದು ವೈರಲ್ ಆಗಿತ್ತು. ಎಲ್ಲರೂ ಬೇರೆ ಬೇರೆ ಪವಿತ್ರ ವಸ್ತುಗಳ ಅಭಿಷೇಕವನ್ನು ಕೇಳಿದರೆ ಆರ್ಯವರ್ಧನ್ ಗುರೂಜಿ ಮಾತ್ರ ಪನ್ನೀರ್ ಅನ್ನು ಕೇಳಿದ್ದರು. ಇದರ ಬಗ್ಗೆ ಆರ್ಯವರ್ಧನ್ ಗುರೂಜಿ ಅವರನ್ನೇ ಕೇಳಿದಾಗ ಇದು ಹಾಲಿನಿಂದ ಮಾಡುವಂತಹ ಪನ್ನೀರ್ ಅಲ್ಲ ಬದಲಾಗಿ ಹೂಗಳ ಸುಗಂಧದಿಂದ ತಯಾರಿಸುವ ಪನ್ನೀರು ಎಂಬುದಾಗಿ ನಗುತ್ತಾ ಹೇಳುತ್ತಾರೆ. ಈಗ ನಿಮಗೆ ಯಾವ ಪನ್ನೀರು ಎಂಬುದಾಗಿ ಕ್ಲಾರಿಟಿ ಸಿಕ್ಕಿರಬಹುದು ಎಂಬುದಾಗಿ ಭಾವಿಸುತ್ತೇವೆ.

Comments are closed.