ರಾಷ್ಟ್ರೀಯ ಪೌರತ್ವ ನೋಂದಣಿ ಮಾಡಿದ್ದಕ್ಕೆ ಮೋದಿಗೆ ಸೋಲು ಎನ್ನುತ್ತಿದ್ದವರಿಗೆ ಉತ್ತರ ನೀಡಿದ ಅಸ್ಸಾಂ ಸಮೀಕ್ಷೆ. ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ರಾಷ್ಟ್ರೀಯ ಪೌರತ್ವ ನೋಂದಣಿ ಮೊದಲು ಜಾರಿಯಾಗಿದ್ದು ಅಸ್ಸಾಮ್ ರಾಜ್ಯದಲ್ಲಿ. ಅದೇ ಕಾರಣಕ್ಕಾಗಿ ವಿಪಕ್ಷಗಳು ನರೇಂದ್ರ ಮೋದಿ ರವರ ವಿರುದ್ಧ ಟೀಕೆಗಳ ಬಾಣಗಳನ್ನು ಸುರಿಸಿದರು, ಅಸ್ಸಾಂ ರಾಜ್ಯದ ಜನತೆಯ ಬಿಜೆಪಿ ಪಕ್ಷಕ್ಕೆ ಮುಂದಿನ ಚುನಾವಣೆಯಲ್ಲಿ ತಕ್ಕ ಉತ್ತರವನ್ನು ನೀಡುತ್ತಾರೆ ಯಾವುದೇ ಕಾರಣಕ್ಕೂ ಎನ್ಡಿಎ ಮೈತ್ರಿಕೂಟ ಮುಂದಿನ ಬಾರಿಯ ಚುನಾವಣೆಯಲ್ಲಿ ಗೆಲುವು ಸಾಧಿಸುವುದು ಅಸಾಧ್ಯ ಎಂದು ಹೇಳಿಕೆ ನೀಡುತ್ತಿದ್ದರು.

ಈ ಎಲ್ಲ ವಾದ ವಿವಾದಗಳ ನಡುವೆ ಇಡೀ ದೇಶದಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ ಮಾಡಿದ ಕಾರಣ ಇದು ಮೋದಿ ಸರ್ಕಾರಕ್ಕೆ ವರದಾನವಾಗಲಿದೆಯೇ ಅಥವಾ ಜನರು ಅನಗತ್ಯ ವಿಚಾರಗಳಿಗೆ ಮೋದಿ ತಲೆ ಹಾಕುತ್ತಿದ್ದಾರೆ ಎಂದು ಮೋದಿ ರವರನ್ನು ತಿರಸ್ಕಾರ ಮಾಡುತ್ತಾರೆಯೇ ಎಂದು ಕಾದುನೋಡಬೇಕಾಗಿದೆ ಎಂದು ಎಲ್ಲರೂ ಅಂದುಕೊಂಡಿದ್ದರು. ಇಂತಹ ಸಂದರ್ಭದಲ್ಲಿ ಅಸ್ಸಾಂ ರಾಜ್ಯದ ಚುನಾವಣೆ ಬಾರಿ ಕುತೂಹಲ ಮೂಡಿಸಿದ್ದು ಸುಳ್ಳಲ್ಲ. ಇದೀಗ ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಅಸ್ಸಾಂ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಇದಕ್ಕೂ ಮುನ್ನ ದೇಶದ ಪ್ರತಿಷ್ಠಿತ ಸಂಸ್ಥೆಗಳಾದ ಎಬಿಪಿ ನ್ಯೂಸ್ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಜನಾಭಿಪ್ರಾಯ ಬಹಿರಂಗಗೊಂಡಿದೆ.

ಹೌದು ಸ್ನೇಹಿತರೇ ಇದೀಗ ಬಂದಿರುವ ಅಭಿಪ್ರಾಯದ ಪ್ರಕಾರ ಬಿಜೆಪಿ ಪಕ್ಷವು ಮತ್ತೊಮ್ಮೆ ಅಧಿಕಾರ ಸ್ಥಾಪಿಸಲಿದ್ದು ಎನ್ಡಿಎ ಮೈತ್ರಿಕೂಟ 73ರಿಂದ 81 ಸೀಟುಗಳನ್ನು ಗೆದ್ದುಕೊಳ್ಳಲಿದೆ, ಇನ್ನುಳಿದಂತೆ ಕಾಂಗ್ರೆಸ್ ಪಕ್ಷವು 36 ರಿಂದ 44 ಸೀಟುಗಳನ್ನು ಗಳಿಸುವುದರಲ್ಲಿ ಮಾತ್ರ ಯಶಸ್ವಿಯಾಗಲಿದೆ, ಪ್ರಾದೇಶಿಕ ಪಕ್ಷವಾದ ಎಐಸಿಯುಎಫ್ ಪಕ್ಷವು 5ರಿಂದ 9 ಸೀಟುಗಳನ್ನು ಗೆದ್ದುಕೊಳ್ಳಲಿದೆ ಇತರರು ಸೊನ್ನೆಯಿಂದ 4 ಕ್ಷೇತ್ರಗಳನ್ನು ಗೆಲ್ಲುವುದರಲ್ಲಿ ಮಾತ್ರ ಯಶಸ್ವಿಯಾಗಿದ್ದಾರೆ. ಇನ್ನೂ ಮುಖ್ಯಮಂತ್ರಿ ಆಡಳಿತ ಹಾಗೂ ನರೇಂದ್ರ ಮೋದಿ ರವರ ಆಡಳಿತದ ಕುರಿತು ಜನರನ್ನು ಪ್ರಶ್ನೆ ಮಾಡಿದಾಗ, ಶೇಕಡಾ 35 ರಷ್ಟು ಜನರು ತುಂಬಾ ತೃಪ್ತಿಕರ ಎಂದು ಮುಖ್ಯಮಂತ್ರಿ ರವರನ್ನು ಹೊಗಳಿದರೇ ತೃಪ್ತಿಕರ ಎಂದು 31 %, ಅತೃಪ್ತಿಕರ ಎಂದು 22
% ಹೇಳಲು ಅಸಾಧ್ಯ ಎಂದು 12 % ಜನ ಉತ್ತರ ನೀಡಿದ್ದಾರೆ. ಇನ್ನು ಮೋದಿ ರವರ ಕಾರ್ಯವೈಖರಿ ಕುರಿತು ಪ್ರಶ್ನೆ ಮಾಡಿದಾಗ ತುಂಬಾ ತೃಪ್ತಿಕರ ಎಂದು ಶೇಕಡಾ 33 ರಷ್ಟು ಜನ ಉತ್ತರ ನೀಡಿದ್ದು ತೃಪ್ತಿಕರ ಎಂದು 37 ಪರ್ಸೆಂಟ್ ಜನ ಉತ್ತರ ನೀಡಿದ್ದಾರೆ. ಇನ್ನುಳಿದಂತೆ ಅತೃಪ್ತಿಕರ 16 ಪರ್ಸೆಂಟ್ ಜನ ಉತ್ತರ ನೀಡಿದ್ದು 14 % ಹೇಳಲು ಅಸಾಧ್ಯ ಎಂದು ಉತ್ತರ ನೀಡಿದ್ದಾರೆ

Comments are closed.