ತೆಲುಗಿನ ನಟ ಬಾಲಯ್ಯಗೆ ಶಾಕ್ ನೀಡಿದ ಕನ್ನಡತಿ ಕೃತಿ ಶೆಟ್ಟಿ, ತೆಲುಗಿನಲ್ಲಿ ಸಕ್ಸಸ್ ಕಾಣುವಾಗ ಇವೆಲ್ಲ ಬೇಕಿತ್ತಾ ಎಂದ ಫ್ಯಾನ್ಸ್. ನಡೆದ್ದದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ತೆಲುಗು ಚಿತ್ರರಂಗದಲ್ಲಿ ರಶ್ಮಿಕಾ ಮಂದಣ್ಣ ಅವರನ್ನು ಬಿಟ್ಟರೆ ಅತ್ಯಂತ ಹೆಚ್ಚಾಗಿ ಸದ್ದು ಮಾಡುತ್ತಿರುವ ಕನ್ನಡದ ಪ್ರತಿಭೆ ಎಂದರೆ ಅದು ಕೃತಿ ಶೆಟ್ಟಿ ಎಂದರೆ ಖಂಡಿತವಾಗಿ ಅತಿಶಯೋಕ್ತಿಯಲ್ಲ. ಕೃತಿ ಶೆಟ್ಟಿಯವರಿಗೆ ಇನ್ನು ಕೇವಲ 18 ವರ್ಷ ವಯಸ್ಸು ಅಷ್ಟೇ. ಈಗಾಗಲೇ ಉಪ್ಪೇನ ಚಿತ್ರದ ಮೂಲಕ ಪಾದಾರ್ಪಣೆ ಚಿತ್ರದಲ್ಲಿ ದೊಡ್ಡ ಮಟ್ಟದ ಯಶಸ್ಸನ್ನು ಗಳಿಸಿರುವ ಕೃತಿ ಶೆಟ್ಟಿಯವರಿಗೆ ಅವರದೇ ಆದಂತಹ ದೊಡ್ಡ ಅಭಿಮಾನಿ ಬಳಗ ಕೂಡ ಇದೆ. ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಇಷ್ಟೊಂದು ಸಿನಿಮಾಗಳಿಗೆ ನಾಯಕಿಯಾಗಿ ನಟಿಸುವಂತಹ ಅವಕಾಶ ದೊರೆಯುತ್ತದೆ.

ಸ್ಟಾರ್ ನಟರು ಕೂಡ ತಮ್ಮ ಸಿನಿಮಾಗಳಲ್ಲಿ ನಾಯಕಿಯಾಗಿ ಕೃತಿ ಶೆಟ್ಟಿಯವರೇ ಇರಬೇಕು ಎಂಬುದಾಗಿ ಕೂಡ ಬೇಡಿಕೆಯನ್ನು ಇಡುತ್ತಿದ್ದಾರೆ. ನಿಜಕ್ಕೂ ಕೂಡ ಕೃತಿ ಶೆಟ್ಟಿಯವರ ಸಿನಿಮಾ ರಂಗದ ಬೆಳವಣಿಗೆ ಸ್ಪೂರ್ತಿದಾಯಕವಾಗಿರುವಂತದ್ದು. ಆದರೆ ಈಗ ಸುದ್ದಿಯಾಗುತ್ತಿರುವುದು ಬೇರೆನೆ ವಿಚಾರಕ್ಕಾಗಿ. ತೆಲುಗು ಚಿತ್ರರಂಗದ ಲೆಜೆಂಡರಿ ನಟರಾಗಿರುವ 61 ವರ್ಷ ವಯಸ್ಸಿನ ಬಾಲಯ್ಯ ನವರ ಕುರಿತಂತೆ ಎಲ್ಲರಿಗೂ ಕೂಡ ತಿಳಿದಿದೆ. ಇತ್ತೀಚಿಗಷ್ಟೇ ಅಖಂಡ ಚಿತ್ರದ ಮೂಲಕ ಭಾರತ ಚಿತ್ರರಂಗದಾದ್ಯಂತ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದರು. ಇನ್ನು ಇವರದೇ ವಿಚಾರದಲ್ಲಿ ಕೃತಿ ಶೆಟ್ಟಿ ಅವರು ಕೂಡ ಈಗ ಸುದ್ದಿಯಾಗುತ್ತಿರುವುದು. ಹಾಗಿದ್ದರೆ ನಿಜಕ್ಕೂ ನಡೆದಿರುವ ವಿಚಾರ ಏನು ಎಂಬುದನ್ನು ತಿಳಿಯೋಣ ಬನ್ನಿ.

balayya krithi shetty | ತೆಲುಗಿನ ನಟ ಬಾಲಯ್ಯಗೆ ಶಾಕ್ ನೀಡಿದ ಕನ್ನಡತಿ ಕೃತಿ ಶೆಟ್ಟಿ, ತೆಲುಗಿನಲ್ಲಿ ಸಕ್ಸಸ್ ಕಾಣುವಾಗ ಇವೆಲ್ಲ ಬೇಕಿತ್ತಾ ಎಂದ ಫ್ಯಾನ್ಸ್. ನಡೆದ್ದದೇನು ಗೊತ್ತೇ??
ತೆಲುಗಿನ ನಟ ಬಾಲಯ್ಯಗೆ ಶಾಕ್ ನೀಡಿದ ಕನ್ನಡತಿ ಕೃತಿ ಶೆಟ್ಟಿ, ತೆಲುಗಿನಲ್ಲಿ ಸಕ್ಸಸ್ ಕಾಣುವಾಗ ಇವೆಲ್ಲ ಬೇಕಿತ್ತಾ ಎಂದ ಫ್ಯಾನ್ಸ್. ನಡೆದ್ದದೇನು ಗೊತ್ತೇ?? 2

ಇತ್ತೀಚಿಗಷ್ಟೇ ಕೃತಿ ಶೆಟ್ಟಿ ಅವರಿಗೆ ಹಲವಾರು ಸಿನಿಮಾಗಳ ಆಫರ್ ಬಂದರೂ ಕೂಡ ಅವುಗಳಲ್ಲಿ ಅವರಿಗೆ ಕಾಣಿಸುವಂತಹ ಕೊರತೆಯಿಂದಾಗಿ ನಯವಾಗಿ ತಿರಸ್ಕರಿಸಿದ್ದಾರೆ. ಇನ್ನು ಬಾಲಯ್ಯ ನವರ 107ನೇ ಚಿತ್ರದಲ್ಲಿ ಕೂಡ ನಾಯಕಿಯಾಗಿ ನಟಿಸುವಂತಹ ಆಫರ್ ಕೃತಿ ಶೆಟ್ಟಿಯವರಿಗೆ ಬಂದಿತ್ತು. ಆದರೆ ಬಾಲಯ್ಯ ಅವರಿಗೆ 61 ವರ್ಷ ವಯಸ್ಸು ಕೃತಿ ಶೆಟ್ಟಿ ಅವರಿಗೆ 18 ವರ್ಷ ವಯಸ್ಸು ಈ ಕಾರಣದಿಂದಾಗಿ ಚಿತ್ರವನ್ನು ನಯವಾಗಿಯೇ ತಿರಸ್ಕರಿಸಿದ್ದಾರೆ. ಈ ಕಾರಣದಿಂದಲೇ ಈಗ ಹಲವಾರು ಮಾತುಗಳು ತೆಲುಗು ಚಿತ್ರರಂಗದ ವಲಯದಲ್ಲಿ ಕೇಳಿಬರುತ್ತಿದೆ. ಕರಿಯರ್ ನ ಆರಂಭದಲ್ಲೇ ಸ್ಟಾರ್ ನಟನ ಸಿನಿಮಾದ ಅವಕಾಶ ಬಂದರೂ ಕೂಡ ತಿರಸ್ಕರಿಸುವುದು ಎಷ್ಟರಮಟ್ಟಿಗೆ ಸರಿ ಎಂಬುದಾಗಿ ಕೂಡ ಕೇಳುತ್ತಿದ್ದಾರೆ. ಇನ್ನು ಈ ಸಿನಿಮಾ ಕನ್ನಡದ ಮಫ್ತಿ ಚಿತ್ರದ ರಿಮೇಕ್ ಎಂಬುದಾಗಿ ಎಲ್ಲರೂ ಹೇಳುತ್ತಿದ್ದಾರೆ. ದುನಿಯಾ ವಿಜಯ್ ರವರು ಕೂಡ ಈ ಚಿತ್ರದಲ್ಲಿ ಖಳನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಗೋಪಿಚಂದ್ ಮಳ್ಳಿನೇನಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರಕ್ಕಾಗಿ ಹೊಸ ನಾಯಕಿಯ ಹುಡುಕಾಟ ಆರಂಭವಾಗಿದೆ.

Comments are closed.