Business Idea: ಸೀಸನ್ ಇಲ್ಲದೆ, ವರ್ಷ ಪೂರ್ತಿ ಆದಾಯ ನೀಡುವ ಈ ಉದ್ಯಮ ಸ್ಥಾಪಿಸಿ; ಲಕ್ಷ ಲಕ್ಷ ಆದಾಯ ಗಳಿಸಿ. ಹೇಗೆ ಗೊತ್ತೇ??
Business Idea: ಕೆಲವರು ಮತ್ತೊಬ್ಬರ ಕೈಕೆಳಗೆ ಕೆಲಸ ಮಾಡುವುದಕ್ಕಿಂತ ಸ್ವಂತ ಬ್ಯುಸಿನೆಸ್ ಶುರು ಮಾಡಿ ಚೆನ್ನಾಗಿ ಗಳಿಸಬೇಕು ಎಂದು ಆಸೆ ಪಡುತ್ತಾರೆ. ಇನ್ನು ಕೆಲವರಿಗೆ ಎಷ್ಟೇ ಓದಿದ್ದರು ಸಹ ಒಳ್ಳೆಯ ಕೆಲಸ ಸಿಗುವುದಿಲ್ಲ. ಅಂಥವರು ಕೂಡ ಒಳ್ಳೆಯ ಬ್ಯುಸಿನೆಸ್ ಶುರು ಮಾಡಿ ಚೆನ್ನಾಗಿ ಹಣ ಸಂಪಾದನೆ ಎಂದು ಯೋಚನೆ ಮಾಡುವುದಕ್ಕೆ ಶುರು ಮಾಡುತ್ತಾರೆ. ಅಂಥವರಿಗೆ ಇಂದು ನಾವು ಒಂದು ಬ್ಯುಸಿನೆಸ್ ಐಡಿಯಾ ತಿಳಿಸುತ್ತೇವೆ, ಈ ಬ್ಯುಸಿನೆಸ್ ನಲ್ಲಿ ಸೀಸನ್ ಇಲ್ಲದೆ ಇಡೀ ವರ್ಷ ಒಳ್ಳೆಯ ಆದಾಯ ಗಳಿಸಬಹುದು.
ಆ ಸುಲಭವಾದ ಬ್ಯುಸಿನೆಸ್ ಯಾವುದು ಎಂದು ತಿಳಿಸುತ್ತೇವೆ ನೋಡಿ.. ಬಹಳಷ್ಟು ಮಕ್ಕಳಿಗೆ ಮತ್ತು ದೊಡ್ಡವರಿಗೆ ಕುರುಕಲು ತಿಂಡಿ ತಿನ್ನುವುದು ತುಂಬಾ ಇಷ್ಟ. ಅಂಥವರು ಚಿಪ್ಸ್ ಅನ್ನು ತುಂಬಾ ಇಷ್ಟಪಟ್ಟು ತಿನ್ನುತ್ತಾರೆ. ಈ ಚಿಪ್ಸ್ ಎಲ್ಲರ ಮನೆಯಲ್ಲಿ ಎಲ್ಲಾ ಸಂದರ್ಭಗಳಲ್ಲಿ ಬಳಸುತ್ತಾರೆ, ಸಂದರ್ಭ ಇಲ್ಲದೆ ಹೋದರೆ ಟೈಂಪಾಸ್ ಗಾಗಿ ತಿನ್ನುವವರು ಕೂಡ ಇದ್ದಾರೆ. ಎಲ್ಲರೂ ಇಷ್ಟಪಟ್ಟು ತಿನ್ನುವ ಚಿಪ್ಸ್ ಬ್ಯುಸಿನೆಸ್ ಅನ್ನು ಸುಲಭವಾಗಿ ಮನೆಯಲ್ಲೇ ಮಾಡಬಹುದು.
ಈ ಬ್ಯುಸಿನೆಸ್ ಶುರು ಮಾಡುವುದಕ್ಕೆ ಗ್ಯಾಸ್ ಸ್ಟವ್ ಬೇಕೇ ಬೇಕು ಎಂದು ಅವಶ್ಯಕತೆ ಇಲ್ಲ, ಒಂದು ಮರದ ಒಲೆ ಇದ್ದರು ಕೂಡ ಸಾಕು. ಚಿಪ್ಸ್ ಫ್ರೈ ಮಾಡುವುದಕ್ಕೆ ದೊಡ್ಡ ಬಾಣಲೆ ಹಾಗೂ ಆಲೂಗಡ್ಡೆ ಕಟ್ ಮಾಡಲು ಕಟ್ಟರ್ ಬೇಕಾಗುತ್ತದೆ. ಹಾಗೆಯೇ ಚಿಪ್ಸ್ ಮೇಲೆ ಉದುರಿಸುವುದಕ್ಕೆ ಮಸಾಲೆಯ ಪದಾರ್ಥ ಸಹ ಬೇಕಾಗುತ್ತದೆ.. ಇದು ಒಳ್ಳೆಯ ಬ್ಯುಸಿನೆಸ್ ಐಡಿಯಾ ಆಗಿದೆ. ಇಲ್ಲಿ ಮೊದಲು ನಿಮಗೆ ಬಾಳೆಕಾಯಿ, ಆಲೂಗಡ್ಡೆ, ಉಪ್ಪು, ಎಣ್ಣೆ ಮತ್ತು ಮಸಾಲೆಯ ಪದಾರ್ಥಗಳು ಬೇಕಾಗುತ್ತದೆ.
ನಿಮ್ಮ ಈ ಬ್ಯುಸಿನೆಸ್ ಅನ್ನು ದೊಡ್ಡದಾಗಿ ಶುರು ಮಾಡುವುದಕ್ಕೆ ಆರಂಭದಲ್ಲಿ 50 ಸಾವಿರ ಹೂಡಿಕೆ ಮಾಡಿ, ತಿಂಗಳಿಗೆ ಒಂದು ಲಕ್ಷ ರೂಪಾಯಿಯವರೆಗೂ ಕೂಡ ನೀವು ಸಂಪಾದನೆ ಮಾಡಬಹುದು. ಬಹಳಷ್ಟು ಜನರು ಎಲ್ಲಾ ಸಮಯದಲ್ಲೂ ಸಹ ಚಿಪ್ಸ್ ತಿನ್ನುತ್ತಾರೆ. ಬೇಕರಿಗಳು, ರೇಶನ್ ಅಂಗಡಿಗಳು ಎಲ್ಲಾ ಕಡೆ ಕೂಡ ಮಾರಾಟ ಮಾಡುತ್ತಾರೆ. ಇದರಿಂದ ನಿಮಗೆ ಒಳ್ಳೆಯ ಲಾಭ ಸಿಗುತ್ತದೆ.
Comments are closed.