Best Car Info: ಯಾವುದೇ ಹೊಸ ಕಾರನ್ನು ಖರೀದಿ ಮಾಡುವ ಮುನ್ನ ಈ ಐದು ಅಂಶಗಳನ್ನು ಗಮನದಲ್ಲಿ ಇಡುವುದನ್ನು ಅಪ್ಪಿ ತಪ್ಪಿಯೂ ಮರೆಯಬೇಡಿ.

keep-these-things-in-a-mind-before-buying-new-car

Best Car Info: ಮಧ್ಯಮ ವರ್ಗದಲ್ಲಿ ಅಥವಾ ಶ್ರೀಮಂತದ ವರ್ಗದಲ್ಲಿ ಹುಟ್ಟಿದಂತಹ ಪ್ರತಿಯೊಬ್ಬ ವ್ಯಕ್ತಿ ಅದರಲ್ಲೂ ವಿಶೇಷವಾಗಿ ಹುಡುಗರು ಕಾರನ್ನು ಖರೀದಿಸುವಂತಹ(Car Purchase) ಕನಸನ್ನು ಕಂಡಿರುತ್ತಾರೆ. ಬದುಕಿನಲ್ಲಿ ಬೇಕಾಗುವಂತಹ ಎಲ್ಲಾ ಸೌಕರ್ಯಗಳ ಹಾಗೆ ಕಾರನ್ನು ಖರೀದಿಸುವಾಗಲು ಕೂಡ ಸಾಕಷ್ಟು ಬಾರಿ ಯೋಚನೆ ಮಾಡಬೇಕು ಅದರಲ್ಲಿ ವಿಶೇಷವಾಗಿ ಉತ್ತಮ ಕಾರನ್ನು ಖರೀದಿಸುವ ಮುನ್ನ ಈ 5 ವಿಚಾರಗಳನ್ನು ತಪ್ಪದೇ ನೀವು ಗಮನವಹಿಸಬೇಕು. ಮೊದಲನೇದಾಗಿ ನೀವು ಯಾವ ರೀತಿಯ ಕಾರನ್ನು ಖರೀದಿಸಬೇಕು ಎನ್ನುವುದನ್ನು ತಿಳಿದಿರಬೇಕು. ಇದಕ್ಕಾಗಿ ನೀವು ನಿಮ್ಮ ಬಳಿ ಇರುವಂತಹ ಬಜೆಟ್ ನಿಮ್ಮ ಕುಟುಂಬದಲ್ಲಿ ಇರುವಂತಹ ಸದಸ್ಯರು ಹಾಗೂ ನಿಮ್ಮ ಡ್ರೈವಿಂಗ್ ಅಭ್ಯಾಸಗಳ ಕುರಿತಂತೆ ಪ್ರಮುಖವಾಗಿ ಯೋಚಿಸಬೇಕು. Hatchback ಕಾರುಗಳಲ್ಲಿ ನಿಮಗೆ WagnoR, Tiago, Sedaan ನಲ್ಲಿ Dzire, Aura, SUV ನಲ್ಲಿ Tata Punch, Exter, ಮಲ್ಟಿಪರ್ಪೋಸಲ್ ವೆಹಿಕಲ್ ವಿಭಾಗದಲ್ಲಿ Triber, Ertiga, Hycross ನಂತಹ ಕಾರುಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ ಇವುಗಳು ಈ ವಿಭಾಗದಲ್ಲಿ ಅತ್ಯಂತ ಬೆಸ್ಟ್ ಕಾರುಗಳಾಗಿವೆ.

keep these things in a mind before buying new car | Best Car Info: ಯಾವುದೇ ಹೊಸ ಕಾರನ್ನು ಖರೀದಿ ಮಾಡುವ ಮುನ್ನ ಈ ಐದು ಅಂಶಗಳನ್ನು ಗಮನದಲ್ಲಿ ಇಡುವುದನ್ನು ಅಪ್ಪಿ ತಪ್ಪಿಯೂ ಮರೆಯಬೇಡಿ.
Best Car Info: ಯಾವುದೇ ಹೊಸ ಕಾರನ್ನು ಖರೀದಿ ಮಾಡುವ ಮುನ್ನ ಈ ಐದು ಅಂಶಗಳನ್ನು ಗಮನದಲ್ಲಿ ಇಡುವುದನ್ನು ಅಪ್ಪಿ ತಪ್ಪಿಯೂ ಮರೆಯಬೇಡಿ. 2

ಎರಡನೇದಾಗಿ ಸರಿಯಾದ ಬೆಲೆಯಲ್ಲಿ ಸಿಗುವುದು. ನೀವು ಕೇವಲ ಒಂದೇ ಶೋರೂಂಗೆ ಹೋಗಿ ಕಾರಿನ ಬೆಲೆಯನ್ನು ತಿಳಿದು ಕಾರನು ಖರೀದಿಸುವುದಕ್ಕೆ ಹೋಗಬೇಡಿ. ಸಾಕಷ್ಟು ಡೀಲರ್ ಶಿಪ್ಗಳಲ್ಲಿ(Dealerships) ಹೋಗಿ ಅಲ್ಲಿ ಕಾರಿನ ಬೆಲೆಗಳನ್ನು ನಿಮ್ಮ ಬಜೆಟ್ ಗೆ ಅನುಗುಣವಾಗಿ ಕೇಳಿ ತಿಳಿದು ಆಫರ್ ಗಳು ಇದೆಯೋ ಇಲ್ವೋ ಎಂಬುದನ್ನು ಪರೀಕ್ಷಿಸಿ. ಎಲ್ಲಾ ಕಡೆಗಳಲ್ಲಿ ಬೆಲೆಯ ಕುರಿತಂತೆ ಹಾಗೂ ಆಫರ್ ಕುರಿತಂತೆ ಯೋಚಿಸಿ ಬಂದ ಫಲಿತಾಂಶದ ಆಧಾರದಲ್ಲಿ ಒಳ್ಳೆಯ ಆಫರ್ ಯಾವುದು ಇದೆ ಎಂಬುದನ್ನು ಲೆಕ್ಕಾಚಾರ ಹಾಕಿ ಖರೀದಿಸಿ. ಟ್ಯಾಕ್ಸ್ ಸೇರಿದಂತೆ ಹಲವಾರು ಶುಲ್ಕಗಳ ಕುರಿತಂತೆ ಕೂಡ ಪರಿಶೀಲಿಸಬೇಕಾಗುತ್ತದೆ. ಇದನ್ನು ಓದಿ..Mahindra Thar: ಮುಂದಿನ ವರ್ಷ ಬಿಡುಗಡೆಯಾಗುತ್ತಿದೆ ವಿಶೇಷ ಹೊಸ ಥಾರ್ – ಈ ಬಾರಿಯ ವಿಶೇಷತೆ ಏನೆಲ್ಲಾ ಇರಬಹುದು ಗೊತ್ತೇ?

ಮೂರನೇದಾಗಿ ಕಾರ್ ಅನ್ನು ಬುಕ್ ಮಾಡುವಾಗ ಪ್ರತಿಯೊಂದು ನಡೆಗಳನ್ನು ಕೂಡ ಗಮನಿಸಿ. ಪ್ರಮುಖವಾಗಿ ಕಾರ್ ಅನ್ನು ಬುಕ್ ಮಾಡುವಾಗ ಡೀಲರ್ ಯಾವೆಲ್ಲ ಎಕ್ಸ್ಟ್ರಾ ವಸ್ತುಗಳನ್ನು ಕಾರ್ ಜೊತೆಗೆ ನಿಮಗೆ ನೀಡುತ್ತೇವೆ ಎಂಬುದಾಗಿ ರಿಸಿಪ್ಟ್ ನಲ್ಲಿ ಬರೆದಿದ್ದಾರೋ ಬುಕ್ ಮಾಡಿದ ನಂತರ ಅವೆಲ್ಲವೂ ನಿಮಗೆ ಸಿಕ್ಕಿದೆಯೋ ಇಲ್ಲವೋ ಎಂಬುದನ್ನು ಕೂಡ ಪರಿಶೀಲಿಸಬೇಕಾಗುತ್ತದೆ. ಎಲ್ಲಕ್ಕಿಂತ ಪ್ರಮುಖವಾಗಿ ರಿಸಿಪ್ಟ್ ನಲ್ಲಿ ಕ್ಯಾನ್ಸಲ್ಲೇಶನ್ ಫೀಸ್(Cancellation Fee) ಅನ್ನು ಎಷ್ಟು ಬರೆದಿದ್ದಾರೆ ಎಂಬುದನ್ನು ನೋಡಿ ಒಂದು ವೇಳೆ ಕ್ಯಾನ್ಸಲ್ ಮಾಡುವಂತಹ ಸನ್ನಿವೇಶ ಬಂದರೆ ನಿಮಗೆ ಎಷ್ಟು ಹಣವನ್ನು ಅವರು ವಾಪಾಸ್ ನೀಡಬೇಕು ಎಂಬುದನ್ನು ಕೂಡ ಸರಿಯಾಗಿ ಅರ್ಥ ಮಾಡಿಕೊಳ್ಳಿ.

ನಾಲ್ಕನೇದಾಗಿ ನೀವು ಒಂದು ಕಾರ್ ಅನ್ನು ಬುಕ್ ಮಾಡಿದಾಗ ಅದು ನಿಮ್ಮ ಡೀಲರ್ಶಿಪ್ ಬಳಿ ಬಂದಾಗ ಅದನ್ನು ರಿಜಿಸ್ಟರ್ ಮಾಡುವುದಕ್ಕಿಂತ ಮುಂಚೆ ನೀವು ಅದನ್ನು ಪರಿಶೀಲಿಸುವಂತಹ ಅವಕಾಶವನ್ನು ಕೂಡ ನಿಮಗೆ ನೀಡಲಾಗುತ್ತದೆ. ಇದನ್ನು PDI ಎಂದು ಕರೆಯಲಾಗುತ್ತದೆ. ಈ ಸಂದರ್ಭದಲ್ಲಿ ನೀವು ಹೇಳಿದ ಹಾಗೆ ಕಾರ್ನಲ್ಲಿ ಎಲ್ಲವೂ ಇರದೇ ಇದ್ದಲ್ಲಿ ಅಥವಾ ಯಾವುದಾದರೂ ಡ್ಯಾಮೇಜ್ ಆಗಿದ್ದಲ್ಲಿ ಆ ಸಂದರ್ಭದಲ್ಲಿ ನೀವು ಕಾರನ್ನು ಕ್ಯಾನ್ಸಲ್ ಮಾಡುವಂತಹ ಸಂಪೂರ್ಣ ಅಧಿಕಾರ ಹೊಂದಿರುತ್ತೀರಿ ಹಾಗೂ ನಿಮಗೆ ಫುಲ್ ಅಮೌಂಟ್ ರಿಫಂಡ್ ಕೂಡ ಆಗುತ್ತದೆ. ಒಂದು ವೇಳೆ ನಿಮಗೆ ಇನ್ಸೂರೆನ್ಸ್ ಪಾಲಿಸಿಯಲ್ಲಿ ಕೂಡ ಯಾವುದಾದರೂ ಅಸಮಾಧಾನವಿದ್ದಲ್ಲಿ ಅದರ ಕುರಿತಂತೆ ಕೂಡ ನೀವು ಕಾರ್ ಅನ್ನು ರಿಜಿಸ್ಟರ್ ಮಾಡಿಸುವುದಕ್ಕಿಂತ ಮುಂಚೆ ನೀವು ಚೆಕ್ ಮಾಡಿಕೊಳ್ಳಬೇಕಾಗಿದೆ. ಇದನ್ನು ಓದಿ..Tax savings: ಎಲ್ಲೆಲ್ಲಿ ಹೂಡಿಕೆ ಮಾಡಿದರೆ ನಿಮಗೆ ಟ್ಯಾಕ್ಸ್ ಕಡಿಮೆಯಾಗುತ್ತದೆ ಗೊತ್ತೇ? ಹೂಡಿಕೆ ಮಾಡಿ ಟ್ಯಾಕ್ಸ್ ಉಳಿಸಿ.

ಐದನೆಯದಾಗಿ ನೀವು ಕಾರನ್ನು ಡೆಲಿವರಿ ತೆಗೆದುಕೊಳ್ಳುವ ಸಂದರ್ಭದಲ್ಲಿ ನಿಮ್ಮ ರಾಜ್ಯದಲ್ಲಿ ಕೆಲವೊಮ್ಮೆ ಹೊಸ ಕಾರುಗಳನ್ನು ನಂಬರ್ ಪ್ಲೇಟ್ ಇಲ್ಲದೇ ಟೆಂಪರವರಿ ನಂಬರ್ ಪ್ಲೇಟ್ ನಲ್ಲಿ ಓಡಿಸುವ ನಿಯಮ ಇರೋದಿಲ್ಲ. ಹೀಗಾಗಿ ಇದರ ಕುರಿತಂತೆ ಕೂಡ ಚೆಕ್ ಮಾಡಿ ಹಾಗೂ ಕಾರನ್ನು ನೀಡಿದ ನಂತರ ನಿಮಗೆ ಒಪ್ಪಿಕೊಂಡಂತೆ ಎಕ್ಸ್ಟ್ರಾ ಟೈಯರ್(Spare Tyres) ಅನ್ನು ನೀಡಿದ್ದಾರೋ ಇಲ್ಲವೋ ಎಂಬುದನ್ನು ಕೂಡ ಪರೀಕ್ಷಿಸಿಕೊಳ್ಳಿ. ಉಚಿತವಾಗಿ ನೀಡುತ್ತೇವೆ ಎಂಬುದಾಗಿ ಹೇಳಿರುವ ವಸ್ತುಗಳು ಕೂಡ ಈ ಸಂದರ್ಭದಲ್ಲಿ ಇದೆಯೋ ಇಲ್ಲವೋ ಎಂಬುದನ್ನು ಪರೀಕ್ಷಿಸಿ. ಎಲ್ಲ ವಿಚಾರಗಳನ್ನು ಕೂಡ ನೀವು ಕಾರಿನ ಖರೀದಿಯ ಸಂದರ್ಭದಲ್ಲಿ ಪ್ರಮುಖವಾಗಿ ಪರೀಕ್ಷಿಸಬೇಕಾಗುತ್ತದೆ. ಇದನ್ನು ಓದಿ..Honda Dio: ಬೆಲೆ ಎಲ್ಲಾ ಸ್ಕೂಟರ್ ಗಳು ಲಕ್ಷ ದಾಟುತ್ತಿದ್ದರೇ, ಹೊಸ ಅವತಾರದಲ್ಲಿ ಬಂದ ಹೋಂಡಾ ಡಿಯೋ ಬೆಲೆ ಎಷ್ಟು ಕಡಿಮೆ ಗೊತ್ತೇ?

Comments are closed.