Mahindra Thar: ಮುಂದಿನ ವರ್ಷ ಬಿಡುಗಡೆಯಾಗುತ್ತಿದೆ ವಿಶೇಷ ಹೊಸ ಥಾರ್ – ಈ ಬಾರಿಯ ವಿಶೇಷತೆ ಏನೆಲ್ಲಾ ಇರಬಹುದು ಗೊತ್ತೇ?
Mahindra Thar: ಸಾಕಷ್ಟು ಸಮಯಗಳಿಂದ ಪ್ರತಿಯೊಬ್ಬರು ಕಾಯುತ್ತಿದ್ದ ಮಹಿಂದ್ರ(Mahindra ) ಸಂಸ್ಥೆಯ ಐದು ಡೋರ್ ಗಳ SUV ಆಗಸ್ಟ್ 15ರಂದು ದಕ್ಷಿಣ ಆಫ್ರಿಕಾದಲ್ಲಿ ಲಾಂಚ್ ಆಗಲು ಸಜ್ಜಾಗಿ ನಿಂತಿದೆ. ಈಗಾಗಲೇ ಈ ಕಾರಿನ ಪರೀಕ್ಷೆ ಭಾರತೀಯ ರೋಡಿನಲ್ಲಿ ಕೂಡ ನಡೆದಿದ್ದು ಇದರ ಕುರಿತಂತೆ ಸರಿ ಕಟ್ಟಾದ ಹೆಚ್ಚಿನ ಮಾಹಿತಿಗಳು ದೊರಕಿಲ್ಲ. ಭಾರತ ದೇಶದಲ್ಲಿ Mahindra Thar 5Door ಲಾಂಛನ ಕುರಿತಂತೆ ಮಾತನಾಡುವುದಾದರೆ ಖಂಡಿತವಾಗಿ ಇದು ನಿಮಗೆ ಮುಂದಿನ ವರ್ಷ ಅಂದರೆ 2024ರಲ್ಲಿ ಕಾಣಿಸಬಹುದಾಗಿದೆ.
ಈಗಾಗಲೇ ಮಹಿಂದ್ರಾ ಥಾರ್(Mahindra Thar) ಸಂಸ್ಥೆಯ 3 ಡೋರ್ ಗಳ ಕಾರ್ ಭಾರತದಲ್ಲಿ ಎಲ್ಲಾ ಗ್ರಾಹಕರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದು ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿರುವಂತಹ ಮಹಿಂದ್ರಾ ಥಾರ್ (Mahindra Thar) 5 ಡೋರ್ ಕಾರು ಯಾವುದೇ ಅನುಮಾನವಿಲ್ಲದೆ ಭಾರತೀಯ ಆಟೋಮೊಬೈಲ್ ಕ್ಷೇತ್ರದ ಗ್ರಾಹಕರ ಮನಸ್ಸನ್ನು ಗೆದ್ದೆ ಗೆಲ್ಲುತ್ತದೆ ಎಂಬುದಾಗಿ ತಜ್ಞರು ನುಡಿದಿದ್ದಾರೆ. ಆಫ್ ರೋಡಿಂಗ್ ವಿಚಾರದಲ್ಲಿ ಈ ಕಾರನ್ನು ಹಿಂದಿಕ್ಕುವಂತಹ ಮತ್ತೊಂದು ಕಾರು ಭಾರತೀಯ ಮಾರುಕಟ್ಟೆಯಲ್ಲಿ ಸಿಗುವುದು ಅಪರೂಪವೇ ಸರಿ ಎಂದು ಹೇಳಬಹುದು. ಇದನ್ನು ಓದಿ..KSRTC: ಕಂಡಕ್ಟರ್, ಡ್ರೈವರ್ ಗಳಿಗೆ ಖಡಕ್ ಎಚ್ಚರಿಕೆ ಕೊಟ್ಟ KSRTC- ಮಹಿಳೆಯರ ಉಚಿತ ಯೋಜನೆ ವಿಚಾರದಲ್ಲಿ ಹೇಳಿದ್ದೇನು ಗೊತ್ತೇ??
ಫ್ಯಾಮಿಲಿ ಗ್ರಾಹಕರಿಗೆ ಖಂಡಿತವಾಗಿ ಇದೊಂದು ಪರ್ಫೆಕ್ಟ್ ಆಯ್ಕೆಯ ಕಾರ್ ಆಗಿರಲಿದೆ. ಈ ಕಾರಿನ ಇನ್ನಷ್ಟು ವಿಶೇಷಗಳನ್ನು ಗಮನಿಸುವುದಾದರೆ ಕೇವಲ ಎರಡು ಹೆಚ್ಚಿನ ಡೋರ್ ಗಳನ್ನು ಮಾತ್ರ ಅಳವಡಿಸಿರುವುದು ಮಾತ್ರವಲ್ಲದೆ ಮುಂದಿನ ದಿನಗಳಲ್ಲಿ ಈ ಕಾರಿನ ಕುರಿದಂತೆ ಅಪ್ಗ್ರೇಡ್ ಮಾಡಲಾಗಿರುವಂತಹ ಇನ್ನಷ್ಟು ವಿಶೇಷಗಳನ್ನು ಕಂಪನಿ ಬಿಡುಗಡೆಯ ಸಂದರ್ಭದಲ್ಲಿ ಜಗಜ್ಜಾಹೀರು ಮಾಡಲಿದೆ. ತಿಳಿದು ಬಂದಿರುವ ಮಾಹಿತಿಯ ಪ್ರಕಾರ ಈ ಕಾರಿನಲ್ಲಿ ಎಲೆಕ್ಟ್ರಿಕ್ ಸನ್ರೂಫ್(electric sunroof) ಅನ್ನು ಅಳವಡಿಸಲಾಗಿದೆ. ಮಹಿಂದ್ರಾ ಥಾರ್ (Mahindra Thar) ನ ಮೂರು ಡೋರ್ ಗಳ engine option ಗಳಿದ್ದು ಅವುಗಳ ಕುರಿತಂತೆ ಕೂಡ ತಿಳಿಯೋಣ.
ಮೊದಲಿಗೆ 1.5ltr D117 Drde ಡೀಸೆಲ್ ಇಂಜಿನ್ ಇದು 117bhp 300Nm ಟಾರ್ಕ್, 2.2 ಲೀಟರ್mHawk 130Crde ಡೀಸೆಲ್ ಇಂಜಿನ್(130bhp/300nm), 2.0ಲೀ mstallion 150TGDi ಪೆಟ್ರೋಲ್(150bhp/320nm) ಇಂಜಿನ್ ಅನ್ನು ಹೊಂದಿದೆ. ಡೀಸೆಲ್ ಹಾಗೂ ಪೆಟ್ರೋಲ್ ಇಂಜಿನ್ ಗಳೆರಡು ಕೂಡ 6 ಸ್ಪೀಡ್ ಮಾನ್ಯುವಲ್ ಟ್ರಾನ್ಸ್ಮಿಷನ್ ಹಾಗೂ 6 ಸ್ಪೀಡ್ ಆಟೋಮೆಟಿಕ್ ಟ್ರಾನ್ಸ್ಮಿಷನ್ ಗಳನ್ನು ಹೊಂದಿದೆ. ಈ ಕಾರ್ ನಿಮಗೆ RWD ಹಾಗೂ 4WD ಆಪ್ಷನ್ ನಲ್ಲಿ ಸಿಗುತ್ತದೆ. ಲಾಂಚ್ ಸಂದರ್ಭದಲ್ಲಿಯೇ ನಾವು RWD ಹಾಗೂ 4WD ಎರಡು ಆಪ್ಷನ್ ನಲ್ಲಿ ಬರುತ್ತದೆ ಅಥವಾ ಕೇವಲ ಒಂದೇ ಆಪ್ಷನ್ ಸಿಗುತ್ತದೆಯಾ ಎಂಬುದನ್ನು ಕಾದು ನೋಡಬೇಕಾಗಿದೆ. ಇದನ್ನು ಓದಿ..Electric vehicles: ಜನರು ಮುಗಿಬಿದ್ದು ಖರೀದಿ ಮಾಡುತ್ತಿರುವ ಟಾಪ್ ಎಲೆಕ್ಟ್ರಿಕ್ ಸ್ಕೂಟರ್ ಗಳು ಯಾವುವು ಗೊತ್ತೇ? ನೋಡಿ ಖರೀದಿ ಮಾಡಿ, ಲೈಫ್ ಜಿಂಗ ಲಾಲಾ
ಈಗಾಗಲೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಮಹಿಂದ್ರ ಸಂಸ್ಥೆಯ 3 ಡೋರ್ ಕಾರಿನ ಬೆಲೆ 10.6 ಲಕ್ಷ ರೂಪಾಯಿಗಳಿಂದ 16.7 ಲಕ್ಷ ರೂಪಾಯಿಗಳ ವರೆಗೆ ಇದೆ. ಹೀಗಾಗಿ ಮುಂದಿನ ವರ್ಷ ಆಗಸ್ಟ್ ತಿಂಗಳ ಆಸುಪಾಸಿನಲ್ಲಿ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವಂತಹ ಮಹೇಂದ್ರ ಸಂಸ್ಥೆಯ 5 ಡೋರಿನ ಕಾರಿನ(Mahindra 5 door car) ಬೆಲೆ ಖಂಡಿತವಾಗಿ ಹೆಚ್ಚಾಗಿರುತ್ತದೆ ಎಂಬುದು ಮೂಲಗಳು ತಿಳಿಸಿರುವ ಮಾಹಿತಿಯಾಗಿದೆ. ಸದ್ಯಕ್ಕೆ ಮಹಿಂದ್ರಾ ಥಾರ್ ಕಾರಿನ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಇರುವಂತಹ ನಿಕಟಸ್ಪರ್ಧಿ ಎಂದರೆ Maruti Suzuki Jimny ಆಗಿದೆ. ಇದನ್ನು ಓದಿ..WhatsApp: ವಾಟ್ಸಪ್ಪ್ ನಲ್ಲಿ ರಹಸ್ಯವಾಗಿ ಬೇರೆಯವರಿಗೆ ತಿಳಿಯದಂತೆ ಮೆಸೇಜ್ ಓದುವುದು ಹೇಗೆ ಗೊತ್ತೇ? ಈ ಟ್ರಿಕ್ ಇಷ್ಟು ದಿನ ಗೊತ್ತಿರ್ಲಿಲ್ಲ
Comments are closed.