KSRTC: ಕಂಡಕ್ಟರ್, ಡ್ರೈವರ್ ಗಳಿಗೆ ಖಡಕ್ ಎಚ್ಚರಿಕೆ ಕೊಟ್ಟ KSRTC- ಮಹಿಳೆಯರ ಉಚಿತ ಯೋಜನೆ ವಿಚಾರದಲ್ಲಿ ಹೇಳಿದ್ದೇನು ಗೊತ್ತೇ??
KSRTC: ರಾಜ್ಯ ಸರ್ಕಾರ ಶಕ್ತಿ ಯೋಜನೆಯನ್ನು ಜಾರಿಗೆ ತಂದಿದೆ, ಈ ಯೋಜನೆಯ ಅಡಿಯಲ್ಲಿ ರಾಜ್ಯದ ಎಲ್ಲಾ ಮಹಿಳೆಯರಿಗೆ ಸರ್ಕಾರಿ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಲು ಅವಕಾಶ ನೀಡಲಾಗಿದೆ. ಮಹಿಳೆಯರು ಸಹ ಈ ಯೋಜನೆಯ ಪ್ರಯೋಜನ ಪಡೆಯಲು, ರಾಜ್ಯದ ಹಲವೆಡೆ ಪ್ರಯಾಣ ಮಾಡುತ್ತಿದ್ದಾರೆ., ದೇವಸ್ಥಾನಗಳಿಗೆ ಹೋಗುತ್ತಿದ್ದಾರೆ, ಇದರಿಂದ ಬಸ್ ಗಳು ಸಿಕ್ಕಾಪಟ್ಟೆ ರಶ್ ಆಗುತ್ತಿದೆ.

ಈ ವೇಳೆ ಬಸ್ ಚಲಿಸುವ ಡ್ರೈವರ್ ಹಾಗೂ ಕಂಡಕ್ಟರ್ ಗಳು ಮಹಿಳೆಯರ ಮೇಲೆ ರೇಗಾಡುವುದು, ಅವರಿಗೆ ಅವಮಾನ ಆಗುವ ಹಾಗೆ ಮಾತನಾಡುವುದು ಅನುಚಿತವಾಗಿ ವರ್ತಿಸುವುದು ಇಂಥ ಕೆಲವು ಘಟನೆಗಳು ನಡೆಯುತ್ತಿದ್ದು, ಇದರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ಚರ್ಚೆ ನಡೆಯುತ್ತಿದೆ. ಇಂಥ ಕೆಲವು ಸುದ್ದಿಗಳು ನಿಜವೇ ಆಗಿದ್ದು, ಈ ಬಗ್ಗೆ KSRTC ಕಠಿಣ ನಿರ್ಧಾರ ತೆಗೆದುಕೊಂಡು ಕಂಡಕ್ಟರ್ ಹಾಗೂ ಡ್ರೈವರ್ ಗಳಿಗೆ ಖಡಕ್ ವಾರ್ನಿಂಗ್ ನೀಡಿದೆ. ಇದನ್ನು ಓದಿ..WhatsApp: ವಾಟ್ಸಪ್ಪ್ ನಲ್ಲಿ ರಹಸ್ಯವಾಗಿ ಬೇರೆಯವರಿಗೆ ತಿಳಿಯದಂತೆ ಮೆಸೇಜ್ ಓದುವುದು ಹೇಗೆ ಗೊತ್ತೇ? ಈ ಟ್ರಿಕ್ ಇಷ್ಟು ದಿನ ಗೊತ್ತಿರ್ಲಿಲ್ಲ
ಮಹಿಳೆಯರು ಉಚಿತವಾಗಿ ಓಡಾಡುತ್ತಿದ್ದಾರೆ ಎಂದು ಅವರಿಗೆ ಅವಮಾನ ಆಗುವ ಹಾಗೆ ಮಾತನಾಡುವುದು, ಮಹಿಳೆಯರ ಜೊತೆಗೆ ಒರಟಾಗಿ ವರ್ತಿಸುವುದು, ಮಹಿಳೆಯರು ಇರುವ ಕಡೆ ಬಸ್ ನಿಲ್ಲಿಸದೆ ಇರುವುದು ಈ ರೀತಿ ಎಲ್ಲಾ ಮಾಡಿದರೆ ಅಂಥ ಡ್ರೈವರ್ ಗಳು ಹಾಗೂ ಕಂಡಕ್ಟರ್ ಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಸಾರಿಗೆ ಇಲಾಖೆ ತಿಳಿಸದೆ. ಈ ತೊಂದರೆಯನ್ನು KSRTC ಗಂಭೀರವಾಗಿ ತೆಗೆದುಕೊಂಡಿದೆ.
ಶಕ್ತಿ ಯೋಜನೆ ಉತ್ತಮವಾಗಿ ನಡೆಯಲು ಕಂಡಕ್ಟರ್ ಹಾಗೂ ಡ್ರೈವರ್ ಗಳು ಮತ್ತು ಇತರ ಸಿಬ್ಬಂದಿಗಳ ಶ್ರಮ ಕೂಡ ಬಹಳ ಮುಖ್ಯವಾಗುತ್ತದೆ. ಹಾಗೆಂದು ಅವರು ಮಹಿಳೆಯರ ಮನಸ್ಸಿಗೆ ನೋವಾಗುವ ಹಾಗೆ ನಡೆದುಕೊಳ್ಳಬಾರದು, ಶಕ್ತಿ ಯೋಜನೆ ಯಶಸ್ವಿಯಾಗಿ ನಡೆಯಬೇಕು, ಈ ಬಗ್ಗೆ ಸಿಬ್ಬಂದಿಗಳಿಗೆ ತಿಳಿಸಿ ಹೇಳಬೇಕು.. ಮಹಿಳೆಯರು ಹಾಗೂ ವಿದ್ಯಾರ್ಥಿಗಳು ಇರುವ ಕಡೆ ಬಸ್ ನಿಲ್ಲಿಸಿ ಅವರನ್ನು ಸುರಕ್ಷಿತವಾಗಿ ತಲುಪಿಸಬೇಕು.. ಎಂದು KSRTC ಖಡಕ್ ವಾರ್ನಿಂಗ್ ನೀಡಿದೆ. ಇದನ್ನು ಓದಿ..Business Idea: ಕೆಲಸ ಮಾಡುತ್ತಾ ಈ ಬಿಸಿನೆಸ್ ಆರಂಭ ಮಾಡಿ- ಕೈತುಂಬಾ ಕಾಸು, ನಿಮಗೆ ನೀವೇ ಬಾಸ್. ಯೋಚನೆ ಮಾಡಿ ಟ್ರೈ ಮಾಡಿ. ಲಾಸ್ ಅಂತೂ ಇಲ್ಲ.
Comments are closed.