Honda Shine: ದೇಶದಲ್ಲಿದೆ ಡಿಮಾಂಡ್ ಹೊಂದಿರುವ 2023ರ ಹೋಂಡಾ ಶೈನ್ ಬಿಡುಗಡೆ. ವಿಶೇಷತೆ ಬೆಲೆ ಪ್ರಮುಖ ಅಂಶಗಳು.

honda shine new model details and price

Honda Shine: ದೇಶದ ಅತ್ಯಂತ ನಂಬಿಕಸ್ಥ ದ್ವಿಚಕ್ರ ವಾಹನ ಕಂಪನಿ ಆಗಿರುವಂತಹ ಹೀರೋ ಹೋಂಡಾ ಮೋಟೋಕಾರ್ಪ್(Hero Honda Motocorp) 2023ರ ಹೋಂಡಾ ಶೈನ್ (Honda Shine) 125 ಅನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದ್ದು ಇದು ತನ್ನ ಇಂಧನ ದಕ್ಷತೆ ಮೈಲೇಜ್ ಹಾಗೂ ಇನ್ನಿತರ ಉತ್ತಮ ಫೀಚರ್ಸ್ ಗಳ ಮೂಲಕ ಮಾರುಕಟ್ಟೆಯಲ್ಲಿ ದ್ವಿಚಕ್ರ ವಾಹನ ಖರೀದಿದಾರರ ಮನಸ್ಸನ್ನು ಗೆಲ್ಲುತ್ತಿದೆ. ಹಾಗಿದ್ರೆ ಬನ್ನಿ 100ಸಿಸಿ ಇಂಜಿನ್ ನಿಂದ 125ಕ್ಕೆ ಜಿಗಿತವನ್ನು ಕಂಡಿರುವಂತಹ ಈ ಬೈಕಿನ ಪ್ರಮುಖ ವಿಶೇಷತೆಗಳನ್ನು ತಿಳಿದುಕೊಳ್ಳೋಣ. ಮೊದಲನೇದಾಗಿ 2023 Honda Shine 125 BS6 Stage 2 ಅನ್ನು ಕಂಪ್ಲೀಟ್ ಮಾಡಿದೆ. ಇದರಿಂದಾಗಿ ಇದು OBD2 ಕೋರ್ಟ್ ಅನ್ನು ಹೊಂದಿದ್ದು ಹೊಗೆಯ ಹೊರಸುವಿಕೆಯನ್ನು ಕೂಡ ಡಿಟೆಕ್ಟ್ ಮಾಡುವಂತಹ ಸಾಮರ್ಥ್ಯವನ್ನು ಹೊಂದಿದೆ. ಇದರ ಇಂಧನದಲ್ಲಿ 20 ಪ್ರತಿಶತ ಎಥೆನಾಲ್(Ethenol) ಅನ್ನು ಕೂಡ ಬಳಕೆ ಮಾಡುತ್ತಿರುವುದು ಇದರ ಇನ್ನೊಂದು ವಿಶೇಷತೆಯಾಗಿದೆ.

honda shine new model details and price | Honda Shine: ದೇಶದಲ್ಲಿದೆ ಡಿಮಾಂಡ್ ಹೊಂದಿರುವ 2023ರ ಹೋಂಡಾ ಶೈನ್ ಬಿಡುಗಡೆ. ವಿಶೇಷತೆ ಬೆಲೆ ಪ್ರಮುಖ ಅಂಶಗಳು.
Honda Shine: ದೇಶದಲ್ಲಿದೆ ಡಿಮಾಂಡ್ ಹೊಂದಿರುವ 2023ರ ಹೋಂಡಾ ಶೈನ್ ಬಿಡುಗಡೆ. ವಿಶೇಷತೆ ಬೆಲೆ ಪ್ರಮುಖ ಅಂಶಗಳು. 2

Honda Shine 125 ಬೈಕ್ ಮೂರು ವರ್ಷಗಳ ಸ್ಟ್ಯಾಂಡರ್ಡ್ ವಾರಂಟಿಯ ಜೊತೆಗೆ ಬರುತ್ತದೆ. ಗ್ರಾಹಕ ಬೇಕಾದರೆ ಈ ವಾರಂಟಿಯನ್ನು(Warranty) ಇನ್ನೂ ಏಳು ವರ್ಷಗಳ ಕಾಲ ವಿಸ್ತರಿಸಬಹುದಾಗಿದೆ. ಹೀಗಾಗಿ ನಿಮಗೆ ಈ ಬೈಕಿನಲ್ಲಿ ಒಟ್ಟಾರೆಯಾಗಿ ಹತ್ತು ವರ್ಷಗಳ ಕಾಲ ವಾರಂಟಿ ಸಿಗುತ್ತದೆ ಎಂದು ಹೇಳಬಹುದು. ಹೀಗಾಗಿ ವಾರಂಟಿಯ ವಿಚಾರದಲ್ಲಿ ಕೂಡ ಯಾವುದೇ ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ. ಇದನ್ನು ಓದಿ..Best Car Info: ಯಾವುದೇ ಹೊಸ ಕಾರನ್ನು ಖರೀದಿ ಮಾಡುವ ಮುನ್ನ ಈ ಐದು ಅಂಶಗಳನ್ನು ಗಮನದಲ್ಲಿ ಇಡುವುದನ್ನು ಅಪ್ಪಿ ತಪ್ಪಿಯೂ ಮರೆಯಬೇಡಿ.

Honda Shine 125 ಬೈಕಿನ ಇಂಜಿನ್ ಬಗ್ಗೆ ಮಾತನಾಡುವುದಾದರೆ 100ಸಿಸಿಯಿಂದ 125cc ಗೆ ಅಪ್ಗ್ರೇಡ್ ಮಾಡಲಾಗಿದೆ. ಇದರ PGM FI ಇಂಜಿನ್ eSP ಯ ಸ್ಮಾರ್ಟ್ ಪವರ್ ಅನ್ನು ಇನ್ನಷ್ಟು ಪ್ರತಿಬಿಂಬಿಸುತ್ತದೆ. 10.54bhp ಪವರ್ ನಿಮಗೆ 7500rpm ನಲ್ಲಿ ಹಾಗೂ 11Nm ಟಾರ್ಕ್ 6500rpm ನಲ್ಲಿ ಜನರೇಟ್ ಮಾಡುತ್ತದೆ. ACG ಸೈಲೆಂಟ್ ಸ್ಟಾರ್ಟ್ ಸಿಸ್ಟಮ್ ಕೂಡ ಇದರಲ್ಲಿದೆ. ಇದರಿಂದಾಗಿ ಇದರ ಹೊರಗಿನ ಇಂಧನ ಪಂಪ್ ಕೂಡ ಚೆನ್ನಾಗಿ ಆಗುತ್ತದೆ.

ಇನ್ನು ಈ ಬೈಕಿನ ಉಳಿದ ಫೀಚರ್ಸ್ ಗಳನ್ನು ನೋಡುವುದಾದರೆ, ಅಲಾಯ್ ವ್ಹೀಲ್ಸ್ ಹಾಗೂ ಟ್ಯೂಬ್ ಲೆಸ್ ಟೈರ್(Tubeless Tyre) ಗಳನ್ನು ಹೊಂದಿದೆ. ಸ್ಪೀಡೋಮೀಟರ್ ಫ್ಯೂಯಲ್ ಗೇಜ್ ಕಾಂಬಿ ಬ್ರೇಕಿಂಗ್ ಸಿಸ್ಟಮ್ ಮಾತ್ರವಲ್ಲದೆ ಚಕ್ರಗಳು ಲಾಕ್ ಆಗುವ ಸಮಸ್ಯೆಯನ್ನು ಕೂಡ ತಪ್ಪಿಸಲು CBS ತಂತ್ರಜ್ಞಾನವನ್ನು ಕೂಡ ಅಳವಡಿಸಲಾಗಿದೆ. ಇದರ ಚೈನ್ ಅನ್ನು ಕೂಡ ಸ್ವಚ್ಛಗೊಳಿಸುತ್ತಲೇ ಇರಬೇಕು ಎನ್ನುವಂತಹ ಅವಶ್ಯಕತೆ ಕೂಡ ಇರುವುದಿಲ್ಲ. ಇದನ್ನು ಓದಿ..Dukati Panigale: ಹೊಸದಾಗಿ ಬಿಡುಗಡೆಯಾಗುತ್ತಿರುವ ಡುಕಾಟಿ- ಈ 69.99 ಲಕ್ಷದ ಬೈಕ್ ಹೇಗಿರಲಿದೆ, ಏನೆಲ್ಲಾ ಇರುತ್ತದೆ ಗೊತ್ತೇ?

ಇನ್ನು ಈ Honda Shine ಬೈಕಿನಲ್ಲಿ ಮತ್ತೊಂದು ವಿಶೇಷವಾದ ಫೀಚರ್ಸ್ ಏನೆಂದರೆ ಇದರ ಹಲೋಜನ್ ಲೈಟ್ ಸಿಸ್ಟಮ್(Halogen Light). Shine 125 ನ ಬೆಲೆಯನ್ನು ನೋಡುವುದಾದರೆ ಎರಡು ವೇರಿಯಂಟ್ ಗಳಲ್ಲಿ ಇದು ಕಾಣಿಸುತ್ತದೆ. ಹೀಗಾಗಿ ಮೊದಲ ವೇರಿಯಂಟ್ ಬೆಲೆ ಡ್ರಮ್ ಹಾಗೂ ಡಿಸ್ಕ್ ಬ್ರೇಕ್ ಗಳ ವಿಶೇಷತೆಯಲ್ಲಿ ಕಾಣಿಸಿಕೊಳ್ಳುತ್ತಿದ್ದು ಇದರ ಎಕ್ಸ್ ಶೋರೂಮ್ ಬೆಲೆ 79,800 ಆಗಿದೆ. ಇನ್ನೊಂದು ವೇರಿಯಂಟ್ ಬೆಲೆ 83800 ಎಕ್ಸ್ ಶೋರೂಮ್ ಬೆಲೆಯಾಗಿದೆ. ಇವುಗಳಲ್ಲಿ ನೀವು ಯಾವುದನ್ನು ಖರೀದಿಸಲು ಇಷ್ಟಪಡುತ್ತೀರಿ ಎಂಬುದನ್ನು ನಮ್ಮೊಂದಿಗೆ ಹಂಚಿಕೊಳ್ಳಬಹುದಾಗಿದೆ. ಇದನ್ನು ಓದಿ..Honda Dio: ಬೆಲೆ ಎಲ್ಲಾ ಸ್ಕೂಟರ್ ಗಳು ಲಕ್ಷ ದಾಟುತ್ತಿದ್ದರೇ, ಹೊಸ ಅವತಾರದಲ್ಲಿ ಬಂದ ಹೋಂಡಾ ಡಿಯೋ ಬೆಲೆ ಎಷ್ಟು ಕಡಿಮೆ ಗೊತ್ತೇ?

Comments are closed.