ಕ್ವಾರಂಟೈನ್ ಆರಂಭಿಸಿದ ದಕ್ಷಿಣ ಭಾರತದ ಖ್ಯಾತ ನಟಿ, ಅತಿಥಿಯಾಗಿ ಬಿಗ್ ಬಾಸ್ ಮನೆಗೆ ಹೊಸ ಪ್ರವೇಶ. ಯಾರು ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಬಿಗ್ ಬಾಸ್ ಕಾರ್ಯಕ್ರಮ ಆರಂಭವಾಗುವ ಮುನ್ನ ಹಲವಾರು ಸ್ಪರ್ಧಿಗಳ ಹೆಸರು ಕೇಳಿ ಬಂದಿತ್ತು. ವಿವಿಧ ನಟಿಮಣಿಯರ ಹೆಸರು ಕೂಡ ಬಿಗ್ ಬಾಸ್ ಮನೆಯ ಒಳಗಡೆ ಹೋಗುತ್ತಾರೆ ಎಂದು ಮಾಹಿತಿಗಳು ಕೇಳಿ ಬಂದಿತ್ತು. ಅದೇ ಸಮಯದಲ್ಲಿ ವೈಲ್ಡ್ ಕಾರ್ಡ್ ಮೂಲಕ ಕೂಡ ನಟಿ ಮಣಿಯರು ಮನೆ ಪ್ರವೇಶ ಮಾಡುತ್ತಾರೆ ಎಂಬ ಮಾಹಿತಿ ತಿಳಿದು ಬಂದಿತ್ತು.

ಹೀಗೆ ಹಲವಾರು ಬಾರಿ ವಿವಿಧ ನಟಿಮಣಿಯರ ಹೆಸರು ಕೇಳಿ ಬಂದಿತ್ತಾದರೂ, ಕೆಲವೊಬ್ಬರು ನಟಿಯರು ಮನೆಯೊಳಗಡೆ ಹೋಗಿಲ್ಲ ಇನ್ನು ಕೆಲವು ನಟಿಯರು ಈಗಾಗಲೇ ಮನೆ ಒಳಗಡೆ ಹೋಗಿ ವಾಪಸ್ಸು ಬಂದಿದ್ದಾರೆ. ಇನ್ನು ಕೆಲವರು ಅಲ್ಲೇ ಉಳಿದು ಕೊಂಡು ಉತ್ತಮ ಆಟ ಆಡುತ್ತಿದ್ದಾರೆ. ಆದರೆ ಓಲ್ಡ್ ಕಾರ್ಡ್ ಮೂಲಕ ಕೇಳಿ ಬಂದಿದ್ದ ನಟಿಯ ಹೆಸರು ಕಾರಣಾಂತರಗಳಿಂದ ಮನೆಯ ಹೊರಗಡೆ ಹೋಗಲು ಸಾಧ್ಯವಾಗದ ಕಾರಣ,

ಇದೀಗ ಒಂದು ದಿನದ ಅತಿಥಿಯಾಗಿ ಅಂದರೆ 24 ಗಂಟೆಯ ಅತಿಥಿಯಾಗಿ ಕನ್ನಡ ಚಿತ್ರರಂಗದ ಟಾಪ್ ನಟಿ ಹಾಗೂ ದಕ್ಷಿಣ ಭಾರತದ ಬಹುತೇಕ ಭಾಷೆಗಳಲ್ಲಿ ನಟಿಸಿ ಖ್ಯಾತ ಹೆಸರು ಗಳಿಸಿಕೊಂಡಿರುವ ನಟಿಯನ್ನು ಮನೆಯೊಳಗಡೆ ಕಳುಹಿಸಲಾಗುತ್ತದೆ ಎಂಬುದು ಕಿರುತೆರೆಯ ಮೂಲಗಳಿಂದ ತಿಳಿದು ಬಂದಿದೆ. ಇವರ ಹೆಸರು ವೈಲ್ಡ್ ಕಾರ್ಡ್ ಮೂಲಕ ಕೂಡ ಹೋಗುತ್ತಾರೆ ಎಂದು ಕೇಳಿ ಬಂದಿತ್ತಾದರೂ ಇದೀಗ ಅತಿಥಿಯಾಗಿ ಹೋಗುತ್ತಿರುವುದು ನಿಜಕ್ಕೂ ಅಭಿಮಾನಿಗಳಿಗೆ ಸಂತಸದ ವಿಷಯವಾಗಿದೆ. ಹೀಗೆ ಮನೆಯೊಳಗಡೆ ಹೋಗುತ್ತಿರುವ ಸದಸ್ಯೆ ಮತ್ತ್ಯಾರು ಅಲ್ಲ ಅವರೇ ಟಾಪ್ ನಟಿ ರಾಧಿಕಾ.

Comments are closed.