ಕೇವಲ ಕೆಲವೇ ಕೆಲವು ನಿಮಿಷಗಳಲ್ಲಿ ವಿಭಿನ್ನ ರೀತಿಯ ಟೊಮೋಟೊ ಸಾಂಬಾರ್ ಮಾಡುವುದು ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ಇಂದು ನಾವು ವಿಭಿನ್ನ ರೀತಿಯ ದಿಡೀರ್ ಟೊಮೋಟೊ ಸಾಂಬಾರ್ ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ದಿಡೀರ್ ಟೊಮೇಟೊ ಸಾಂಬಾರ್ ಮಾಡಲು ಬೇಕಾಗುವ ಪದಾರ್ಥಗಳು: ಸ್ವಲ್ಪ ಎಣ್ಣೆ,ಸ್ವಲ್ಪ ಬೆಳ್ಳುಳ್ಳಿ, ಸ್ವಲ್ಪ ಸಾಸಿವೆ, ಸ್ವಲ್ಪ ಜೀರಿಗೆ, ಸ್ವಲ್ಪ ಕರಿಬೇವು, 3 ಟೊಮೇಟೊ, ಸ್ವಲ್ಪ ಅರಿಶಿನಪುಡಿ, ಖಾರಕ್ಕೆ ಬೇಕಾಗುವಷ್ಟು ಅಚ್ಚಖಾರದ ಪುಡಿ, ರುಚಿಗೆ ತಕಷ್ಟು ಉಪ್ಪು, 2 ಚಮಚ ಜೋಳದ ಹಿಟ್ಟು ಅಥವಾ ಹುರಿಗಡಲೆ ಹಿಟ್ಟು, ಅರ್ಧ ಚಮಚ ಸಕ್ಕರೆ, ಸ್ವಲ್ಪ ಕೊತ್ತಂಬರಿ ಸೊಪ್ಪು.

ದಿಡೀರ್ ಟೊಮೋಟೊ ಸಾಂಬಾರ್ ಮಾಡುವ ವಿಧಾನ: ಮೊದಲಿಗೆ ಗ್ಯಾಸ್ ಮೇಲೆ ಒಂದು ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ ಇದಕ್ಕೆ ಜಜ್ಜಿದ ಬೆಳ್ಳುಳ್ಳಿ, ಅರ್ಧ ಚಮಚ ಸಾಸಿವೆ, ಸ್ವಲ್ಪ ಜೀರಿಗೆ, ಸ್ವಲ್ಪ ಕರಿಬೇವು, ಸಣ್ಣಗೆ ಹಚ್ಚಿದ ಟೊಮೊಟೊವನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಚಿಟಿಕೆ ಅರಿಶಿಣ ಪುಡಿ, ಖಾರಕ್ಕೆ ಬೇಕಾಗುವಷ್ಟು ಅಚ್ಚಕಾರದ ಪುಡಿ, ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಮುಚ್ಚಳವನ್ನು ಮುಚ್ಚಿ 2 – 3 ನಿಮಿಷಗಳ ಕಾಲ ಟೊಮೊಟೊವನ್ನು ಬೇಯಿಸಿಕೊಳ್ಳಿ.

ಮತ್ತೊಂದು ಕಡೆ ಒಂದು ದೊಡ್ಡ ಬಟ್ಟಲಿಗೆ 2 ಚಮಚದಷ್ಟು ಜೋಳದ ಹಿಟ್ಟು ಅಥವಾ ಹುರಿಗಡಲೆ ಹಿಟ್ಟು ಹಾಗೂ ನೀರನ್ನು ಹಾಕಿಕೊಂಡು ತೆಳ್ಳಗೆ ಮಿಕ್ಸ್ ಮಾಡಿಕೊಂಡು ಬಾಣಲಿಗೆ ಹಾಕಿಕೊಳ್ಳಿ. ಅವಶ್ಯಕತೆ ಇದ್ದರೆ ಸ್ವಲ್ಪ ನೀರನ್ನು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ ಅರ್ಧ ಚಮಚದಷ್ಟು ಸಕ್ಕರೆಯನ್ನು ಹಾಕಿ ಮಿಕ್ಸ್ ಮಾಡಿಕೊಂಡು ಕಡಿಮೆ ಉರಿಯಲ್ಲಿ 5 – 10 ನಿಮಿಷಗಳ ಕಾಲ ಕುದಿಯಲು ಬಿಡಿ. ಕೊನೆಯದಾಗಿ ಸಣ್ಣಗೆ ಹಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿಕೊಂಡರೆ ದಿಡೀರ್ ವಿಭಿನ್ನ ರೀತಿಯ ಟೊಮೇಟೊ ಸಾಂಬಾರ್ ಸವಿಯಲು ಸಿದ್ದ.

Comments are closed.